ಶ್ರೀಕಾಕುಳಂ(ಆಂಧ್ರಪ್ರದೇಶ):ಗಂಡನ ಮನೆಯವರ ವಿಪರೀತ ಕಿರುಕುಳ ತಾಳಲಾರದೆ ಮಹಿಳೆಯೋರ್ವಳು ತನ್ನ ಮೂವರು ಮಕ್ಕಳೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಘಟನೆ ಆಂಧ್ರಪ್ರದೇಶದ ಶ್ರೀಕಾಕುಳಂನಲ್ಲಿ ನಡೆದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಸಾವಿಗೆ ಶರಣಾದ ತಾಯಿ ಭೋಗೇಶ್ವರಿ ಹಾಗು ಮೂವರು ಮಕ್ಕಳು ಮೃತರನ್ನು 27 ವರ್ಷದ ಭೋಗೇಶ್ವರಿ, ಮಕ್ಕಳಾದ ಚಕ್ರಿ (5), ಜಯಲಕ್ಷ್ಮೀ (3) ಹಾಗೂ ಭಾರ್ತಿ(2) ಎಂದು ಗುರುತಿಸಲಾಗಿದೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ, ಬಾವಿಯಿಂದ ಮೃತದೇಹಗಳನ್ನು ಹೊರತೆಗೆದಿದ್ದಾರೆ
ಮೂವರು ಮಕ್ಕಳೊಂದಿಗೆ ಬಾವಿಗೆ ಹಾರಿದ ತಾಯಿ: ಘಟನಾ ಸ್ಥಳದಲ್ಲಿ ಸಂಬಂಧಿಕರ ರೋಧನೆ ಇದನ್ನೂ ಓದಿರಿ: IND vs ENG Test ರೋಹಿತ್ ಜೊತೆ ವಿಹಾರಿ ಓಪನರ್: ಮಧ್ಯಮ ಕ್ರಮಾಂಕದಲ್ಲಿ ರಾಹುಲ್ ಬ್ಯಾಟಿಂಗ್?
ಭೋಗೇಶ್ವರಿ ಕಳೆದ 9 ವರ್ಷಗಳ ಹಿಂದೆ ಜಗನ್ನಾಥವಾಲಸ ಗ್ರಾಮದ ಶಂಕರ್ ಎಂಬಾತನನ್ನು ವರಿಸಿದ್ದರು. ಕಳೆದ ಕೆಲವು ವರ್ಷಗಳ ಕಾಲ ಇಬ್ಬರೂ ಚೆನ್ನಾಗಿದ್ದು ಸಂಸಾರ ನಡೆಸಿದ್ದಾರೆ. ಆದರೆ ಕಳೆದೆರಡು ವರ್ಷಗಳಿಂದ ಗಂಡನ ಮನೆಯವರು ಭೋಗೇಶ್ವರಿಗೆ ಕಿರುಕುಳ ನೀಡಲು ಶುರು ಮಾಡಿದ್ದರು ಎನ್ನಲಾಗಿದೆ.