ಕರ್ನಾಟಕ

karnataka

ETV Bharat / bharat

Video: ಮಗುವಿನ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿ, ವಿಡಿಯೋ ಮಾಡಿದ ಹೆತ್ತಮ್ಮ - Tamil Nadu crime news

ಗಂಡನ ಮೇಲಿನ ಕೋಪಕ್ಕೆ ಹೆತ್ತ ತಾಯಿಯೇ ಮಗುವನ್ನು ಕ್ರೂರವಾಗಿ ಥಳಿಸಿರುವ ಘಟನೆ ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯಲ್ಲಿ ನಡೆದಿದೆ.

mother brutally beats baby and makes video
ಮಗುವಿನ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿ, ವಿಡಿಯೋ ಮಾಡಿದ ಹೆತ್ತಮ್ಮ

By

Published : Aug 29, 2021, 6:50 PM IST

Updated : Aug 29, 2021, 7:36 PM IST

ವಿಲ್ಲುಪುರಂ (ತಮಿಳುನಾಡು): ಮಹಿಳೆಯೊಬ್ಬಳು ತನ್ನ ಎರಡು ವರ್ಷದ ಗಂಡು ಮಗುವಿನ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಲ್ಲದೇ, ಕೃತ್ಯದ ದೃಶ್ಯವನ್ನು ಚಿತ್ರೀಕರಿಸಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ತಾಯಿ ವರ್ತನೆಯನ್ನು ಕಂಡು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಗುವಿನ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿ, ವಿಡಿಯೋ ಮಾಡಿದ ಹೆತ್ತಮ್ಮ

ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ಮಧುರ-ಮೆತ್ತೂರು ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಈ ಗ್ರಾಮದ ನಿವಾಸಿ ವಡಿವಾಜಗನ್ ಎಂಬಾತ 5 ವರ್ಷಗಳ ಹಿಂದೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಕರಂಪಳ್ಳಿ ಗ್ರಾಮದ ತುಳಸಿ (23) ಎಂಬಾಕೆಯನ್ನು ವಿವಾಹವಾಗಿದ್ದರು. ದಂಪತಿಗೆ ನಾಲ್ಕು ಹಾಗೂ ಎರಡು ವರ್ಷದ ಗಂಡು ಮಕ್ಕಳಿದ್ದಾರೆ. ಪತಿ-ಪತ್ನಿನಡುವೆ ಆಗಾಗ ಜಗಳವಾಗುತ್ತಿತ್ತು ಎಂದು ಹೇಳಲಾಗಿದ್ದು, ಇದೇ ಸಿಟ್ಟನ್ನು ಮಗು ಮೇಲೆ ತೋರಿಸಿಕೊಂಡಿದ್ದಾಳೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಮಕ್ಕಳ ನೋಡಲು ಬಿಡದ ಕೋಪ; ಪತ್ನಿ ಕೊಲೆಗೈದು ಶವ ಹೂತಿಟ್ಟ ಪತಿ

ಗಂಡ ಮನೆಯಲ್ಲಿಲ್ಲದ ವೇಳೆ ಕಿರಿಯ ಮಗುವನ್ನು ತೀವ್ರವಾಗಿ ಥಳಿಸಿದ್ದಾಳೆ. ಅಲ್ಲದೇ ಇದನ್ನು ಮೊಬೈಲ್​ನಲ್ಲಿ ಸೆರೆಹಿಡಿದು ವಿಡಿಯೋ ಮಾಡಿದ್ದಾಳೆ. ಗಾಯಗೊಂಡ ಮಗುವನ್ನು ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪತಿ ನೀಡಿದ ದೂರಿನ ಮೇರೆಗೆ ಪೊಲೀಸರು ತುಳಸಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆ ಬಳಿಕ ತನ್ನ ತವರು ಮನೆಗೆ ಹೋಗಿರುವ ಆರೋಪಿ ತುಳಸಿಯನ್ನು ಬಂಧಿಸಲು 5 ಜನರ ಪೊಲೀಸ್​ ತಂಡ ಆಂಧ್ರಕ್ಕೆ ತೆರಳಿದೆ.

Last Updated : Aug 29, 2021, 7:36 PM IST

ABOUT THE AUTHOR

...view details