ಕರ್ನಾಟಕ

karnataka

ETV Bharat / bharat

ತಂದೆಯ ಮರಣದ ಬಳಿಕ ಮಕ್ಕಳ ಸರ್​ನೇಮ್​ ನಿರ್ಧರಿಸುವ ಹಕ್ಕು ತಾಯಿಗಿದೆ: ಸುಪ್ರೀಂ ತೀರ್ಪು - ಈಟಿವಿ ಭಾರತ ಕನ್ನಡ ನ್ಯೂಸ್​

ಮಕ್ಕಳ ಸರ್​ನೇಮ್​ ( ಮನೆಯ ಹೆಸರು) ಅನ್ನು ತಂದೆಯ ಮರಣಾನಂತರ ನಿರ್ಧರಿಸುವ ತಾಯಿ ಪಡೆಯಲಿದ್ದಾಳೆ. ಇದನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ. ಅಲ್ಲದೇ, ಮಗುವನ್ನು ದತ್ತು ನೀಡಬೇಕೇ ಬೇಡವೇ ಎಂಬುದೂ ಅವಳ ನಿರ್ಧಾರಕ್ಕೆ ಬಿಟ್ಟಿದ್ದು ಎಂದು ಸುಪ್ರೀಂಕೋರ್ಟ್​ ಹೇಳಿದೆ.

surname-sc
ಸುಪ್ರೀಂ ತೀರ್ಪು

By

Published : Aug 2, 2022, 1:10 PM IST

ನವದೆಹಲಿ:ತಂದೆಯ ಮರಣದ ನಂತರ ತಾಯಿ ಮಗುವಿನ ಸಹಜ ಪಾಲಕರಾಗಿರುವುದರಿಂದ ಉಪನಾಮವನ್ನು (ಸರ್​ನೇಮ್​) ನಿರ್ಧರಿಸುವ ಹಕ್ಕಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಮಹಿಳೆ ಸಲ್ಲಿಸಿದ ಅರ್ಜಿ ವಿಚಾರಣೆಯ ವೇಳೆ ಕೋರ್ಟ್​ ಈ ತೀರ್ಪು ನೀಡಿದೆ. ಅಲ್ಲದೇ ಮಗುವಿನ ದಾಖಲೆಗಳಲ್ಲಿ ಎರಡನೇ ಪತಿಯನ್ನು ಮಲತಂದೆ ಎಂದು ನಮೂದಿಸಲು ಸೂಚಿಸಿದ್ದ ಆಂಧ್ರಪ್ರದೇಶ ಹೈಕೋರ್ಟ್ ಆದೇಶವನ್ನು ರದ್ದುಗೊಳಿಸಿದೆ.

ಮಹಿಳೆಯ ಎರಡನೇ ಗಂಡನ ಹೆಸರನ್ನು ದಾಖಲೆಗಳಲ್ಲಿ "ಮಲತಂದೆ" ಎಂದು ಸೇರಿಸಲು ಆಂಧ್ರಪ್ರದೇಶ ಹೈಕೋರ್ಟ್‌ನ ನಿರ್ದೇಶನವು "ಬಹುತೇಕ ಕ್ರೂರ ಮತ್ತು ಮಗುವಿನ ಮಾನಸಿಕ ಆರೋಗ್ಯ ಮತ್ತು ಸ್ವಾಭಿಮಾನದ ಮೇಲೆ ಪರಿಣಾಮ ಬೀರುತ್ತದೆ" ಎಂದು ನ್ಯಾಯಮೂರ್ತಿಗಳಾದ ದಿನೇಶ್ ಮಹೇಶ್ವರಿ ಮತ್ತು ಕೃಷ್ಣ ಮುರಾರಿ ಅವರಿದ್ದ ಪೀಠ ಅಭಿಪ್ರಾಯಪಟ್ಟಿದೆ.

ಮಗುವಿನ ತಂದೆಯ ಮರಣದ ನಂತರ ಸರ್​ನೇಮ್​ ಅನ್ನು ನಿರ್ಧರಿಸುವ ಪೂರ್ಣ ಹಕ್ಕು ತಾಯಿಯದ್ದಾಗಿರುತ್ತದೆ. ಕಾರಣ ಆಕೆ ಆ ಮಗುವಿನ ಸಹಜ ಪಾಲನೆಯ ಜವಾಬ್ದಾರಿ ಹೊರುತ್ತಾರೆ. ಅಲ್ಲದೇ, ಆ ಮಗುವನ್ನು ದತ್ತು ನೀಡುವ ಸಂಪೂರ್ಣ ಹಕ್ಕೂ ಆಕೆಯದ್ದೇ ಎಂದು ಪೀಠ ಹೇಳಿದೆ.

ಓದಿ:ಎಚ್ಚರ.. ಸಿಎಂ ಪ್ರೊಫೈಲ್ ಫೋಟೊ ಹಾಕಿ ವಂಚಿಸುತ್ತಿದ್ದಾರೆ ಸೈಬರ್ ಕಳ್ಳರು

ABOUT THE AUTHOR

...view details