ಕರ್ನಾಟಕ

karnataka

ETV Bharat / bharat

ಗಾಂಜಾ ವ್ಯಸನಿಯಾಗಿದ್ದ ಮಗನ ಕಣ್ಣಿಗೆ ಖಾರದ ಪುಡಿ ಹಾಕಿ ಥಳಿಸಿದ ತಾಯಿ

ಕೆಲವು ನೆಟಿಜನ್‌ಗಳು ತಾಯಿಯ ಕ್ರಮವನ್ನು ಬೆಂಬಲಿಸಿದ್ದರೆ, ಕೆಲವರು ಮಗನೊಂದಿಗೆ ಕ್ರೂರವಾಗಿ ವರ್ತಿಸಬಾರದು ಎಂದು ಹೇಳುತ್ತಿದ್ದಾರೆ. ಇನ್ನು ಕೆಲವರು ಆಕೆಯನ್ನು ಪುನರ್ವಸತಿ ಕೇಂದ್ರಕ್ಕೆ ಕಳುಹಿಸುವಂತೆ ಸಲಹೆ ನೀಡುತ್ತಿದ್ದಾರೆ..

ಗಾಂಜಾ ವ್ಯಸನಿಯಾಗಿದ್ದ ಮಗನ ಕಣ್ಣಿಗೆ ಖಾರದ ಪುಡಿ ಹಾಕಿ ಥಳಿಸಿದ ತಾಯಿ
ಗಾಂಜಾ ವ್ಯಸನಿಯಾಗಿದ್ದ ಮಗನ ಕಣ್ಣಿಗೆ ಖಾರದ ಪುಡಿ ಹಾಕಿ ಥಳಿಸಿದ ತಾಯಿ

By

Published : Apr 4, 2022, 4:00 PM IST

Updated : Apr 4, 2022, 5:13 PM IST

ಸೂರ್ಯಪೇಟೆ(ತೆಲಂಗಾಣ) :ಗಾಂಜಾ (ಮರಿಜುವಾನಾ) ವ್ಯಸನಿಯಾಗಿದ್ದ ತನ್ನ ಮಗನಿಗೆ ತಾಯಿಯೋರ್ವಳು ಭಾರಿ ಶಿಕ್ಷೆ ನೀಡಿದ್ದಾಳೆ. ಸೂರ್ಯಪೇಟೆ ಜಿಲ್ಲೆಯ ಕೊಡಾದ ನಗರದ ಗಾಂಧಿ ನಗರದಲ್ಲಿ ಈ ಘಟನೆ ನಡೆದಿದೆ. 16 ವರ್ಷದ ಬಾಲಕ ಎರಡು ವರ್ಷಗಳಿಂದ ಗಾಂಜಾ ಚಟಕ್ಕೆ ಬಿದ್ದಿದ್ದ. ಗಾಂಜಾ ಸೇವನೆಯನ್ನು ನಿಲ್ಲಿಸುವಂತೆ ತಾಯಿ ಹೇಳಿದರೂ ಆತ ಅವಳ ಮಾತನ್ನು ಕೇಳಿರಲಿಲ್ಲ. ಪರಿಣಾಮ ತಾಯಿ ಈ ನಿರ್ಧಾರಕ್ಕೆ ಬಂದಿದ್ದಾಳೆ.

ಅವನ ವರ್ತನೆಯಿಂದ ಬೇಸತ್ತ ತಾಯಿ, ಆತನನ್ನು ಹಗ್ಗದಿಂದ ಕಟ್ಟಿ ಹಾಕಿ ಆತನ ಕಣ್ಣಿಗೆ ಮೆಣಸಿನ ಪುಡಿ ಎರಚಿ ಅಮಾನುಷವಾಗಿ ಥಳಿಸಿದ್ದಾಳೆ. ಈ ಘಟನೆಯ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಗಾಂಜಾ ವ್ಯಸನಿಯಾಗಿದ್ದ ಮಗನ ಕಣ್ಣಿಗೆ ಖಾರದ ಪುಡಿ ಹಾಕಿ ಥಳಿಸಿದ ತಾಯಿ

ಇದನ್ನೂ ಓದಿ: 10 ದಿನದ ವಿಕಲಚೇತನ ಶಿಶುವನ್ನ ಪ್ಲಾಸ್ಟಿಕ್ ಕವರ್‌ನಲ್ಲಿರಿಸಿ ಬಿಟ್ಟೋದ ನಿರ್ದಯಿ ಪೋಷಕರು

ಕೆಲವು ನೆಟಿಜನ್‌ಗಳು ತಾಯಿಯ ಕ್ರಮವನ್ನು ಬೆಂಬಲಿಸಿದ್ದರೆ, ಕೆಲವರು ಮಗನೊಂದಿಗೆ ಕ್ರೂರವಾಗಿ ವರ್ತಿಸಬಾರದು ಎಂದು ಹೇಳುತ್ತಿದ್ದಾರೆ. ಇನ್ನು ಕೆಲವರು ಆಕೆಯನ್ನು ಪುನರ್ವಸತಿ ಕೇಂದ್ರಕ್ಕೆ ಕಳುಹಿಸುವಂತೆ ಸಲಹೆ ನೀಡುತ್ತಿದ್ದಾರೆ.

Last Updated : Apr 4, 2022, 5:13 PM IST

ABOUT THE AUTHOR

...view details