ಶಾಮ್ಲಿ:ಇಂದು ಬೆಳ್ಳಂಬೆಳಗ್ಗೆ ಸುರಿದ ಮಳೆಯಿಂದಾಗಿ ಮನೆಯೊಂದರ ಛಾವಣಿ ಕುಸಿದು ತಾಯಿ ಮತ್ತು ಮೂರು ಮಕ್ಕಳು ಸಾವನ್ನಪ್ಪಿರುವ ಘಟನೆ ನಗರದಲ್ಲಿ ನಡೆದಿದೆ.
ಮಲಗಿದ್ದಲ್ಲೇ ಮಣ್ಣಾದ ತಾಯಿ ಮತ್ತು ಮೂವರು ಮಕ್ಕಳು ಪನ್ಸಾರಿಯನ್ ನಗರದಲ್ಲಿ ಅಫ್ಸಾನಾ (36) ತನ್ನ ಮಕ್ಕಳಾದ ಸುಹೇಲ್ (14), ಸಾನೀಯಾ (12) ಮತ್ತು ಇರ್ಮಾ (10) ಜೊತೆ ವಾಸಿಸುತ್ತಿದ್ದರು. ಬುಧುವಾರ ಬೆಳಗ್ಗೆಯಿಂದ ನಗರದಲ್ಲಿ ಮಳೆ ಸುರಿಯುತ್ತಿತ್ತು. ಗರುವಾರ ಸಹ ಬೆಳಗ್ಗೆ ಭಾರೀ ಮಳೆ ಸುರಿದ ಪರಿಣಾಮ ಮನೆಯಲ್ಲಿ ಮೂವರು ಮಕ್ಕಳೊಂದಿಗೆ ಮಲಗಿದ್ದ ಅಫ್ಸಾನಾಳ ಮೇಲೆ ಹಠಾತ್ ಛಾವಣಿ ಕುಸಿದಿದೆ.
ಮಲಗಿದ್ದಲ್ಲೇ ಮಣ್ಣಾದ ತಾಯಿ ಮತ್ತು ಮೂವರು ಮಕ್ಕಳು ಬೆಳಗ್ಗೆ ಐದು ಗಂಟೆಗೆ ಭಾರಿ ಸದ್ದು ಕೇಳಿದ ನೆರೆಹೊರೆಯವರು ಕೂಡಲೇ ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯ ಕೈಗೊಂಡಿದ್ದರು. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಸುಹೇಲ್ ಸ್ಥಳದಲ್ಲೇ ಸಾವನ್ನಪ್ಪಿದ್ದ. ತಾಯಿ ಅಫ್ಸಾನಾ ಮತ್ತು ಆಕೆಯ ಹೆಣ್ಣು ಮಕ್ಕಳು ಉಸಿರಾಡುತ್ತಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದ್ರೆ ವೈದ್ಯರು ಅವರು ಸಹ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.
ಮಲಗಿದ್ದಲ್ಲೇ ಮಣ್ಣಾದ ತಾಯಿ ಮತ್ತು ಮೂವರು ಮಕ್ಕಳು ಅಫ್ಸಾನಾ ಗಂಡ ಮತ್ತು ಮತ್ತೊಬ್ಬ ಮಗ ಕೆಲಸದ ನಿಮಿತ್ತ ಹೊರಗೆ ಹೋಗಿದ್ದರು. ಹೀಗಾಗಿ ಅವರು ಬದುಕುಳಿದಿದ್ದಾರೆ. ಇನ್ನು ತಮ್ಮವರನ್ನು ಕಳೆದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಮಲಗಿದ್ದಲ್ಲೇ ಮಣ್ಣಾದ ತಾಯಿ ಮತ್ತು ಮೂವರು ಮಕ್ಕಳು ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.