ವಿಶಾಖಪಟ್ಟಣ(ಆಂಧ್ರಪ್ರದೇಶ):ಸಣ್ಣ ಹೊಳೆಯೊಂದನ್ನು ದಾಟುವ ವೇಳೆ ತಾಯಿ ಮತ್ತು ಮಗ ಇಬ್ಬರೂ ಕೊಚ್ಚಿ ಹೋಗಿರುವ ದುರ್ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದಿದ್ದು, ಮೊಬೈಲ್ನಲ್ಲಿ ವಿಡಿಯೋ ಸೆರೆಯಾಗಿದೆ.
ಪೆದ್ದಬಯಲು ಮಂಡಲ್ನ ಚಿಕಟಿಪಲ್ಲಿ ಗ್ರಾಮದವರಾದ ರಾಮುಲಮ್ಮ ಮತ್ತು ಆಕೆಯ ಮಗ ಪ್ರಶಾಂತ್ ವಾರದ ಸಂತೆಗಾಗಿ ಜಿ.ಮಡುಗುಲ ಮಂಡಲ್ನ ಮಡ್ಡಿಗರುವು ಪ್ರದೇಶಕ್ಕೆ ತೆರಳಿ ವಾಪಸ್ ಆಗುತ್ತಿದ್ದ ವೇಳೆ ಘಟನೆ ನಡೆದಿದೆ.