ಚೆನ್ನೈ:ಮಕ್ಕಳಿಲ್ಲದ ದಂಪತಿಗೆ ಮಗುವನ್ನು ಮಾರಾಟ ಮಾಡಿದ ಆರೋಪದಲ್ಲಿ ಒಂದು ವರ್ಷದ ಹೆಣ್ಣು ಮಗುವಿನ ತಾಯಿ ಸೇರಿದಂತೆ ಒಂಬತ್ತು ಜನರನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ.
ಈ ಘಟನೆ ತಮಿಳುನಾಡಿನ ವಿರುದುನಗರದ ಜಿಲ್ಲೆಯಲ್ಲಿ ನಡೆದಿದೆ. ಹೆಣ್ಣು ಮಗುವನ್ನು ಮಧುರೈನಲ್ಲಿ ಮಕ್ಕಳಿಲ್ಲದ ದಂಪತಿಗೆ 2.30 ಲಕ್ಷ ರೂ.ಗೆ ಮಾರಾಟ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪತಿ ಮುರುಗನ್ ನಿಧನದ ನಂತರ ಸೇವಾಲಪಟ್ಟಿಯಲ್ಲಿ ನೆಲೆಸಿದ್ದ ಇಪ್ಪತ್ತೈದು ವರ್ಷದ ಕಲೈಸೆಲ್ವಿ ಎಂಬ ಮಹಿಳೆ ಕರುಪ್ಪುಸಾಮಿ (58) ಎಂಬಾತನ ಜೊತೆ ಸೇರಿಕೊಂಡು ತನ್ನ ಒಂದು ವರ್ಷದ ಮಗುವನ್ನು ಮಕ್ಕಳಿಲ್ಲದ ದಂಪತಿಗೆ ಮಾರಾಟ ಮಾಡಿದ್ದಾಳೆ.
ವಿರುದುನಗರ ಚೈಲ್ಡ್ ಲೈನ್ಗೆ ಮಧ್ಯಾಹ್ನ 12.35ಕ್ಕೆ ಈ ಸಂಬಂಧ ಕರೆ ಬಂದಿದೆ. ಮಕ್ಕಳಿಲ್ಲದ ದಂಪತಿಗೆ ಒಂದು ವರ್ಷದ ಹೆಣ್ಣು ಮಗುವನ್ನು ಮಾರಾಟ ಮಾಡಲಾಗಿದೆ ಎಂದು ಅನಾಮಧೇಯ ಕರೆ ಬಂದಿದೆ. ಮುರುಗನ್ ಅವರು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಾಮಾಜಿಕ ಕಾರ್ಯಕರ್ತ ಕಾರ್ತಿಗೈರಾಜ ಅವರೊಂದಿಗೆ ಕಲೈಸೆಲ್ವಿ ವಾಸವಿದ್ದ ಮನೆಗೆ ತೆರಳಿ ಪರಿಶೀಲಿಸಿದಾಗ, ವಿರುದುನಗರ ಚೈಲ್ಡ್‌ಲೈನ್‌ಗೆ ಬಂದ ಅನಾಮಧೇಯ ಕರೆ ನಿಜವಾಗಿದೆ ಎಂದು ತಿಳಿದು ಬಂದಿದೆ.