ಕರ್ನಾಟಕ

karnataka

ETV Bharat / bharat

5 ಜಿಗಾಗಿ ಒಪ್ಪೋ & ಸ್ಯಾಮ್‌ಸಂಗ್ ಬ್ರಾಂಡ್​ಗೆ ಭಾರತೀಯರ ಆದ್ಯತೆ: ಸಮೀಕ್ಷೆ - ಒಪ್ಪೋ ಹಾಗೂ ಸ್ಯಾಮ್‌ಸಂಗ್ ಬ್ರಾಂಡ್​ಗೆ ಆದ್ಯತೆ ನೀಡುತ್ತಿರುವ ಭಾರತೀಯರು

ಸಮೀಕ್ಷೆಯ ಪ್ರಕಾರ ಭಾರತದಲ್ಲಿ ಶೇಕಡಾ 81ರಷ್ಟು ಜನರು 5ಜಿಗಾಗಿ ಒಪ್ಪೋ ಸ್ಮಾರ್ಟ್‌ಫೋನ್​ಗೆ ಆದ್ಯತೆ ನೀಡುತ್ತಾರೆ ಮತ್ತು ಶೇಕಡಾ 79ರಷ್ಟು ಜನರು ಸ್ಯಾಮ್‌ಸಂಗ್ ಆರಿಸಿಕೊಂಡಿದ್ದಾರೆ.

5g
5g

By

Published : Dec 21, 2020, 10:47 PM IST

ನವದೆಹಲಿ: ಹೊಸ ಫೋನ್ ಖರೀದಿಸುವಾಗ 5ಜಿ ನೆಟ್​ವರ್ಕ್​ ಸಪೋರ್ಟ್ ತಾವು ಪರಿಗಣಿಸುವ ಅಂಶಗಳಲ್ಲಿ ಒಂದಾಗಿದೆ ಎಂದು ಭಾರತದಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಶೇಕಡಾ 83ರಷ್ಟು ಜನರು ಹೇಳಿದ್ದಾರೆ.

ಜೊತೆಗೆ ಪ್ರೀಮಿಯಂ ಸ್ಮಾರ್ಟ್‌ಫೋನ್ ಬಳಸುವ 5ರಲ್ಲಿ 3 ಬಳಕೆದಾರರು ತಮ್ಮ ಡಿವೈಸ್​ ಅನ್ನು ನೆಕ್ಸ್ಟ್ ಜನರೇಷನ್ ತಂತ್ರಜ್ಞಾನಕ್ಕೆ ಅಪ್‌ಗ್ರೇಡ್ ಮಾಡಲು ಬಯಸುತ್ತಿದ್ದಾರೆ ಎಂದು ಅದೇ ಸಮೀಕ್ಷೆ ತಿಳಿಸಿದೆ. ಈ ಸಮೀಕ್ಷೆಯನ್ನು ಸೈಬರ್​ ಮೀಡಿಯಾ ರಿಸರ್ಚ್ ಬಿಡುಗಡೆ ಮಾಡಿದೆ.

ಸಮೀಕ್ಷೆಯ ಪ್ರಕಾರ ಶೇಕಡಾ 81ರಷ್ಟು ಜನರು 5 ಜಿಗಾಗಿ ಒಪ್ಪೋ ಸ್ಮಾರ್ಟ್‌ಫೋನ್​ಗೆ ಆದ್ಯತೆ ನೀಡುತ್ತಾರೆ ಮತ್ತು ಶೇಕಡಾ 79ರಷ್ಟು ಜನರು ಸ್ಯಾಮ್‌ಸಂಗ್ ಆರಿಸಿಕೊಂಡಿದ್ದಾರೆ.

ಭಾರತ, ಚೀನಾ ಮತ್ತು ಪಶ್ಚಿಮ ಯುರೋಪ್‌ನಲ್ಲಿ ನಡೆಸಿದ ಜಾಗತಿಕ ಸಮೀಕ್ಷೆಯಲ್ಲಿ 5ಜಿ ಲಭ್ಯವಿರುವ ಬಳಕೆದಾರರು, ಉತ್ತಮ ವೀಡಿಯೊ ಕರೆಗಳು, ವೇಗವಾಗಿ ಡೌನ್ಲೋಡ್​​ಗಳು ಮತ್ತು ಅಲ್ಟ್ರಾ ಹೈ ಡೆಫಿನಿಷನ್ ವಿಡಿಯೊಗಳನ್ನು ಸ್ಟ್ರೀಮ್ ಮಾಡುವ ಸಾಮರ್ಥ್ಯ ಮತ್ತು 5ಜಿ ಸೇವೆಗಳಿಂದ ತೃಪ್ತಿ ಹೊಂದಿದ್ದಾರೆ ಎಂದು ತಿಳಿದು ಬಂದಿದೆ.

ನವೆಂಬರ್‌ನಲ್ಲಿ ನಡೆಸಿದ ಈ ಸಮೀಕ್ಷೆಯು ಭಾರತ (3,000), ಚೀನಾ (1,000) ಮತ್ತು ಪಶ್ಚಿಮ ಯುರೋಪ್​ನ (1,000) 18ರಿಂದ 35 ವರ್ಷದೊಳಗಿನ 5,000 ಗ್ರಾಹಕರನ್ನು ಒಳಗೊಂಡಿದೆ.

"ಚೀನಾದಲ್ಲಿ ಹುವಾಯೀ ಹೆಚ್ಚು ಆದ್ಯತೆಯ 5ಜಿ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿದ್ದು (ಶೇಕಡಾ 91), ನಂತರದ ಸ್ಥಾನದಲ್ಲಿ ಆಪಲ್ (58 ಶೇಕಡಾ) ಇದೆ. ಪಶ್ಚಿಮ ಯುರೋಪ್‌ನಲ್ಲಿ ಸ್ಯಾಮ್‌ಸಂಗ್ (88 ಶೇಕಡಾ), ಮತ್ತು ಹುವಾಯೀಗೆ (65 ಶೇಕಡಾ) ಆದ್ಯತೆ ನೀಡಲಾಗುತ್ತಿದೆ. ಭಾರತದಲ್ಲಿ ಒಪ್ಪೋಗೆ ಅತಿ ಹೆಚ್ಚು (ಶೇಕಡಾ 81) ಆದ್ಯತೆಯಿದ್ದು, ಸ್ಯಾಮ್‌ಸಂಗ್ (ಶೇಕಡಾ 79) ನಂತರದ ಸ್ಥಾನದಲ್ಲಿದೆ ಎಂದು ವರದಿ ತಿಳಿಸಿದೆ.

ಭಾರತದಲ್ಲಿ ಟೆಲಿಕಾಂ ಆಪರೇಟರ್‌ಗಳು ತಾವು 5ಜಿ ಸೇವೆ ಸಿದ್ಧ ಎಂದು ಹೇಳಿಕೊಂಡಿದ್ದು, ಸೇವೆಗಳಿಗೆ ಸ್ಪೆಕ್ಟ್ರಮ್ ಹಂಚಿಕೆ ಮಾಡಲು ಸರ್ಕಾರ ಕಾಯುತ್ತಿದೆ. ಟೆಲಿಕಾಂ ಸಚಿವಾಲಯವು ಮೂಲ ಬೆಲೆ 3.92 ಲಕ್ಷ ಕೋಟಿ ರೂ.ಗಳ ಸ್ಪೆಕ್ಟ್ರಮ್ ಹರಾಜು ಪ್ರಕಟಿಸಿದೆ.

ABOUT THE AUTHOR

...view details