ನವದೆಹಲಿ :ಕಳೆದ 30 ರಿಂದ 40 ವರ್ಷಗಳಲ್ಲಿ ಭಾರತವು ಚೀನಾದೊಂದಿಗಿನ ಸಂಬಂಧದ ಅತ್ಯಂತ ಕಠಿಣ ಹಂತದಲ್ಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ. ಲೋವಿ ಸಂಸ್ಥೆ ಆಯೋಜಿಸಿದ್ದ ವೆಬ್‌ನಾರ್‌ನಲ್ಲಿ ಮಾತನಾಡಿದ ಅವರು, ಭಾರತ ಮತ್ತು ಚೀನಾ ನಡುವಿನ ದ್ವಿಪಕ್ಷೀಯ ಸಂಬಂಧ ಈ ವರ್ಷ ಹೆಚ್ಚು ಹಾನಿಯಾಗಿದೆ.
ಪೂರ್ವ ಲಡಾಖ್ನ ಎಲ್‌ಎಸಿಯಲ್ಲಿ ನಡೆಯುತ್ತಿರುವ ಸಂಘರ್ಷವನ್ನು ಉಲ್ಲೇಖಿಸಿದ ಸಚಿವರು, ಚೀನಾ ದೇಶ ಸಾವಿರ ಸೈನಿಕರನ್ನು ಪೂರ್ಣ ಮಿಲಿಟರಿ ಸಿದ್ಧತೆಯೊಂದಿಗೆ ವಾಸ್ತವಿಕ ಗಡಿಗೆ ಕರೆತಂದಿದೆ ಎಂದು ಹೇಳಿದ್ದಾರೆ.