ಎರ್ನಾಕುಲಂ: ಇಸ್ರೇಲ್‌ನಲ್ಲಿ ರಾಕೆಟ್ ದಾಳಿಯಲ್ಲಿ ಮೃತಪಟ್ಟ ಇಡುಕ್ಕಿ ಮೂಲದ ಸೌಮ್ಯಾ ಸಂತೋಷ್ ಅವರ ಮೃತದೇಹವನ್ನು ಏರ್ ಇಂಡಿಯಾ ವಿಮಾನದ ಇಂದು ಸಂಜೆ ಕೊಚ್ಚಿಗೆ ತರಲಾಗಿದ್ದು, ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.
ಇಸ್ರೇಲ್‌ನಲ್ಲಿ ಮೃತಪಟ್ಟ ಮಹಿಳೆ ಶವ ಕೊಚ್ಚಿಗೆ ಆಗಮನ.. ಕುಟುಂಬಸ್ಥರಿಗೆ ಹಸ್ತಾಂತರ - ಇಸ್ರೇಲ್‌ನಲ್ಲಿ ರಾಕೆಟ್ ದಾಳಿ
ಕೇರಳದ ಇಡುಕ್ಕಿ ಜಿಲ್ಲೆಯ ಸೌಮ್ಯಾ ಸಂತೋಷ್ ದಕ್ಷಿಣ ಇಸ್ರೇಲ್ನ ಕರಾವಳಿ ನಗರವಾದ ಅಶ್ಕೆಲೋನ್‌ನ ಮನೆಯೊಂದರಲ್ಲಿ ವೃದ್ಧೆಯೊಬ್ಬರ ಆರೈಕೆ ಕೆಲಸ ಮಾಡುತ್ತಿದ್ದರು.
ಇಸ್ರೇಲ್‌ನಲ್ಲಿ ಮೃತಪಟ್ಟ ಮಹಿಳೆ ಶವ ಕೊಚ್ಚಿಗೆ ಆಗಮನ.. ಕುಟುಂಬಸ್ಥರಿಗೆ ಹಸ್ತಾಂತರ
ಕೇರಳದ ಇಡುಕ್ಕಿ ಜಿಲ್ಲೆಯ ಸೌಮ್ಯಾ ಸಂತೋಷ್ ದಕ್ಷಿಣ ಇಸ್ರೇಲ್ನ ಕರಾವಳಿ ನಗರವಾದ ಅಶ್ಕೆಲೋನ್‌ನ ಮನೆಯೊಂದರಲ್ಲಿ ವೃದ್ಧೆಯೊಬ್ಬರ ಆರೈಕೆ ಕೆಲಸ ಮಾಡುತ್ತಿದ್ದರು. ಗಾಜಾ ಪಟ್ಟಿಯ ಗಡಿ ಪ್ರದೇಶವಾದ ಅಶ್ಕೆಲೋನ್ ಮೇಲೆ ಪ್ಯಾಲೆಸ್ತೀನಿಯನ್ ಬಂಡುಕೋರರು ನಡೆಸಿದ ದಾಳಿಯಿಂದ ಭಾರೀ ಬೆಂಕಿ ಅವಘಡ ಸಂಭವಿಸಿತ್ತು. ಈ ವೇಳೆ, ಮಹಿಳೆ ಪ್ರಾಣ ಕಳೆದುಕೊಂಡಿದ್ದಳು. ಕಳೆದ ಏಳು ವರ್ಷಗಳಿಂದ ಗಂಡನೊಂದಿಗೆ ಇಸ್ರೇಲ್‌ನಲ್ಲಿ ವಾಸಿಸುತ್ತಿದ್ದು ಇವರಿಗೆ ಒಂಬತ್ತು ವರ್ಷದ ಮಗುವಿದೆ.
ಆಕೆಯ ಕುಟುಂಬದ ಸಂಪೂರ್ಣ ಜವಾಬ್ದಾರಿಯನ್ನು ಇಸ್ರೇಲ್ ಸರ್ಕಾರ ಹೊತ್ತುಕೊಂಡಿದೆ.