ನವದೆಹಲಿ:ತಮಿಳುನಾಡಿನಲ್ಲಿ ನಡೆದ ಭಾರತೀಯ ವಾಯುಪಡೆ ಹೆಲಿಕಾಪ್ಟರ್ ದುರಂತ ಪ್ರಕರಣದಲ್ಲಿ ಸಾವನ್ನಪ್ಪಿದ 13 ಮಂದಿಯಲ್ಲಿ ನಾಲ್ವರು ಐಎಎಫ್ ಮತ್ತು ಇಬ್ಬರು ಸೇನಾ ಸಿಬ್ಬಂದಿಯ ಮೃತದೇಹಗಳನ್ನು ಗುರುತಿಸಲಾಗಿದೆ.
ಎಲ್ಲಾ ನಾಲ್ವರು ವಾಯುಪಡೆ ಸಿಬ್ಬಂದಿ ಗುರುತಿಸುವಿಕೆ ಪೂರ್ಣಗೊಂಡಿದೆ. ಸೇನಾ ಗೌರವಗಳೊಂದಿಗೆ ಅಂತಿಮ ವಿಧಿವಿಧಾನಗಳನ್ನು ಪೂರೈಸಲು ಪಾರ್ಥಿವ ಶರೀರವನ್ನು ವಿಮಾನದಲ್ಲಿ ಹುತಾತ್ಮರ ಸ್ವಗ್ರಾಮಗಳಿಗೆ ಕಳುಹಿಸಲಾಗುತ್ತದೆ.
ಅದಕ್ಕೂ ಮುನ್ನ ದೆಹಲಿ ಕಂಟೋನ್ಮೆಂಟ್ನಲ್ಲಿರುವ ಬೇಸ್ ಆಸ್ಪತ್ರೆಯಲ್ಲಿ ಹುತಾತ್ಮರ ಪಾರ್ಥಿವ ಶರೀರವಿರುವ ಕಾಫಿನ್ಗಳ ಮೇಲೆ ಪುಷ್ಪಗುಚ್ಛವಿರಿಸಿ ಗೌರವ ಸಲ್ಲಿಸಲಾಗುತ್ತದೆ. ನಂತರ ಅವರ ಸ್ವಗ್ರಾಮಗಳಿಗೆ ರವಾನಿಸಲಾಗುತ್ತದೆ ಎಂದು ಭಾರತೀಯ ಸೇನೆ ಮಾಹಿತಿ ನೀಡಿದೆ.
ಹುತಾತ್ಮರ ವಿವರ ಮತ್ತು ಅವರ ಸ್ಥಳ, ಪಾರ್ಥಿವ ಶರೀರ ತಲುಪುವ ಸಮಯ ಹೀಗಿದೆ..
1. ವಿಂಗ್ ಕಮಾಂಡರ್ ಚೌಹಾಣ್ ಆಗ್ರಾದವರಾಗಿದ್ದು, ಬೆಳಗ್ಗೆ 9.45ಕ್ಕೆ ಪಾರ್ಥಿವ ಶರೀರ ಆಗ್ರಾ ತಲುಪಲಿದೆ.