ಕರ್ನಾಟಕ

karnataka

ETV Bharat / bharat

ತೋಮರ್ ಕುಟುಂಬಗಳ ಮಧ್ಯೆ ನಡೆದ ಗುಂಡಿನ ದಾಳಿ: ಆರು ಮಂದಿ ಸಾವು..! - ತೋಮರ್ ಕುಟುಂಬಗಳ ಮಧ್ಯೆ ನಡೆದ ಗುದ್ದಾಟ

ಹತ್ತು ವರ್ಷಗಳ ಹಿಂದೆ ನಡೆದ ಹತ್ಯೆಗೆ ಸೇಡು ತೀರಿಸಿಕೊಳ್ಳಲು ಮಧ್ಯಪ್ರದೇಶದ ಲೇಪಾ ಗ್ರಾಮದ ತೋಮರ್ ಕುಟುಂಬವು ಅದೇ ಸಮುದಾಯದ ಪ್ರತಿಸ್ಪರ್ಧಿ ಕುಟುಂಬದ ಮೇಲೆ ಗುಂಡು ಹಾರಿಸಿರುವ ಘಟನೆ ನಡಿದಿದೆ. ಈ ಗುಂಡಿನ ದಾಳಿಯಲ್ಲಿ ಇಬ್ಬರು ಮಹಿಳೆಯರು ಸೇರಿ ಆರು ಮಂದಿ ಮೃತಪಟ್ಟಿದ್ದಾರೆ.

Six people died in the firing
ಗುಂಡಿನ ದಾಳಿಯಲ್ಲಿ ಆರು ಮಂದಿ ಸಾವು

By

Published : May 5, 2023, 3:46 PM IST

Updated : May 5, 2023, 4:08 PM IST

ಮೊರೆನಾ (ಮಧ್ಯಪ್ರದೇಶ):ಸಿಹೋನಿಯನ್ ಪೊಲೀಸ್ ಠಾಣೆ ವ್ಯಾಪ್ತಿಯ ಲೆಪಾ ಗ್ರಾಮದಲ್ಲಿ ತೋಮರ್ ಕುಟುಂಬಗಳ ನಡುವಿನ ವೈಷಮ್ಯವು ಆರು ಜನರ ಹತ್ಯೆಯ ಮೂಲಕ ಅಂತ್ಯವಾಗಿದೆ. ಹಳೆ ವೈಷಮ್ಯದ ಹಿನ್ನೆಲೆ ಗುಂಡಿನ ದಾಳಿ ನಡೆದಿದ್ದು, ಇಬ್ಬರು ಮಹಿಳೆಯರು ಸೇರಿದಂತೆ ಆರು ಮಂದಿ ಮೃತಪಟ್ಟಿದ್ದಾರೆ. 10 ವರ್ಷಗಳ ಹಿಂದೆ ನಡೆದ ಹತ್ಯೆಗೆ ಸೇಡು ತೀರಿಸಿಕೊಳ್ಳಲು ತೋಮರ್ ಕುಟುಂಬವು ಅದೇ ಸಮುದಾಯದ ಕುಟುಂಬದ ಮೇಲೆ ಗುಂಡಿನ ದಾಳಿ ನಡೆಸಿರುವ ದುರ್ಘಟನೆ ಜರುಗಿದೆ. ಒಂದೇ ಕುಟುಂಬದ ಐವರು ಸಾವನ್ನಪ್ಪಿದ್ದು, ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಚಿಕಿತ್ಸೆಗಾಗಿ ಮೊರೆನಾ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿದರು. ರಂಜಿತ್ ತೋಮರ್ ಮತ್ತು ರಾಮ್‌ವೀರ್ ಸಿಂಗ್ ತೋಮರ್ ನಡುವೆ ಹಳೆಯ ದ್ವೇಷವೇ ಈ ಹತ್ಯೆಗೆ ಕಾರಣವಾಗಿದೆ. ಈ ದ್ವೇಷದಿಂದಾಗಿ ಶುಕ್ರವಾರ ಬೆಳಿಗ್ಗೆ ಎರಡೂ ಕುಟುಂಬಗಳ ನಡುವೆ ಗುದ್ದಾಟ ನಡೆದಿದೆ. ಎರಡೂ ಕುಟುಂಬಗಳ ಮಧ್ಯೆ ಗುಂಡಿನ ಚಕಮಕಿ ಜರುಗಿದೆ.

ಮೃತರ ಒಟ್ಟು ಸಂಖ್ಯೆಯು ಆರಕ್ಕೆ ಏರಿಕೆ:ರಾಮ್‌ವೀರ್ ತೋಮರ್ ಪರವಾಗಿ ಯುವಕನೊಬ್ಬ ರೈಫಲ್‌ನಿಂದ ಗುಂಡು ಹಾರಿಸಲು ಆರಂಭಿಸಿದ. ಈ ಗುಂಡಿನ ದಾಳಿಯಲ್ಲಿ ಗಜೇಂದ್ರ ಸಿಂಗ್ ತೋಮರ್ ಮತ್ತು ಅವರ ಇಬ್ಬರು ಮಕ್ಕಳಾದ ಫಂಡಿ ತೋಮರ್ ಮತ್ತು ಸಂಜು ತೋಮರ್ ಬುಲೆಟ್ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇದಲ್ಲದೇ ಇಬ್ಬರು ಮಹಿಳೆಯರ ಮೇಲೆ ಗುಂಡಿನ ದಾಳಿ ನಡೆದಿದೆ. ಮೃತರ ಒಟ್ಟು ಸಂಖ್ಯೆಯು ಆರಕ್ಕೆ ಏರಿಕೆಯಾಗಿದೆ. ಪೊಲೀಸರು ಗಾಯಾಳುಗಳನ್ನು ತಮ್ಮ ವಾಹನದಲ್ಲಿ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ರವಾನಿಸಿದ್ದಾರೆ. ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಗ್ರಾಮದಲ್ಲಿ ಯಾರೂ ಕೂಡಾ ಮನೆಯಿಂದ ಹೊರಗೆ ಬರುತ್ತಿಲ್ಲ.

ಪೊಲೀಸ್​ ಅಧಿಕಾರಿ ಹೇಳಿದ್ದೇನು?:ಈ ಘಟನೆಯನ್ನು ವರದಿ ಮಾಡುವ ಸಮಯದಲ್ಲಿ, ಮೃತರ ಶವಗಳು ಸ್ಥಳದಲ್ಲಿ ಬಿದ್ದಿದ್ದವು. ಈ ದೃಶ್ಯವು ಕಣ್ಣಿಗೆ ಕಟ್ಟುವಂತಿತ್ತು. ಸುಮಾರು 10 ವರ್ಷಗಳ ಹಿಂದೆ ರಂಜಿತ್ ತೋಮರ್ ಕುಟುಂಬದವರು ರಾಮ್‌ವೀರ್ ತೋಮರ್ ಕಡೆಯ ಇಬ್ಬರನ್ನು ಕೊಂದಿದ್ದರು ಎಂದು ಮೂಲಗಳು ತಿಳಿಸಿವೆ. ಈ ಘಟನೆಯ ನಂತರ ಆರೋಪಿಗಳ ಕಡೆಯ ಜನರು ಅಲ್ಲಿಂದ ತೆರಳಿದ್ದರು. ಆ ವಿಷಯ ತಣ್ಣಗಾಗಿದೆ ಎಂದು ತಿಳಿದು ಅವರು ಇಂದು ಮತ್ತೆ ಗ್ರಾಮಕ್ಕೆ ಆಗಮಿಸಿದ್ದರು. ಆದರೆ, ಹಿಂದಿನ ಕೊಲೆಗಳಿಗೆ ಪ್ರತೀಕಾರ ತೀರಿಸಿಕೊಳ್ಳಲು ರಾಮ್‌ವೀರ್ ಅವರ ಕುಟುಂಬವು ಮೊದಲು ಕೋಲುಗಳಿಂದ ಹಲ್ಲೆ ನಡೆಸಿತು. ಹಳೆ ವೈಷಮ್ಯದಿಂದ ಇಂದು ಉಭಯ ಕುಟುಂಬಗಳ ನಡುವೆ ಮಾರಾಮಾರಿ ಕೂಡಾ ನಡೆದಿದೆ. ಗಾಯಗೊಂಡ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸ್​ ಅಧಿಕಾರಿ ರೈಸಿಂಗ್ ನರ್ವಾರಿಯಾ ಘಟನೆ ಕುರಿತಂತೆ ಮಾಹಿತಿ ನೀಡಿದರು.

ವರ್ಷದ ಹಿಂದೆ ಎರಡೂ ಕುಟುಂಬಗಳ ನಡುವೆ ಒಪ್ಪಂದ: 2013ರಲ್ಲಿ ಶಾಲೆಗೆ ಜಮೀನು ನೀಡಿದ್ದು, ಈ ಜಮೀನನ್ನು ಯಾರೂ ಗೃಹ ಬಳಕೆಗೆ ಬಳಸುವುದಿಲ್ಲ ಎಂದು ಹೇಳಿದ್ದರೂ ಆರೋಪಿಗಳು ಶಾಲೆಯ ಜಮೀನಿನಲ್ಲಿ ಗೋವಿನ ಸಗಣಿ ಸುರಿಯಲು ಆರಂಭಿಸಿದ್ದರು ಎಂದು ಮೃತರ ಕುಟುಂಬದ ಸದಸ್ಯ ರಘುರಾಜ್ ಹೇಳುತ್ತಾರೆ. ಇದಕ್ಕೆ ದೂರುದಾರರು ಆಕ್ಷೇಪ ವ್ಯಕ್ತಪಡಿಸಿದಾಗ ವಾಗ್ವಾದ ನಡೆಯಿತು. ಆ ಜಗಳದಲ್ಲಿ ಆರೋಪಿಗಳ ಕಡೆಯ ಇಬ್ಬರು ಮೃತಪಟ್ಟಿದ್ದರು. ಇದರಿಂದ ರಘುರಾಜ್ ಕುಟುಂಬದ ಸದಸ್ಯರು ಜೈಲು ಪಾಲಾದರು ಮತ್ತು ಇಡೀ ಕುಟುಂಬವು ಹೊರಗೆ ವಾಸಿಸಲು ಪ್ರಾರಂಭಿಸಿತು. ಒಂದು ವರ್ಷದ ಹಿಂದೆ ಎರಡೂ ಕಡೆಯವರ ನಡುವೆ ಒಪ್ಪಂದವಾಗಿತ್ತು. ಆರೋಪಿಗಳು ಗ್ರಾಮಕ್ಕೆ ಬಂದು ಉಳಿಯ ಅವಕಾಶ ನೀಡಲಾಗಿತ್ತು ಎಂದು ರಘುರಾಜ್ ತಿಳಿಸಿದರು.

ಉನ್ನತ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ:ಇದಾದ ನಂತರ ಇಂದು ಅಹಮದಾಬಾದ್‌ನಿಂದ ರಘುರಾಜ್ ತೋಮರ್, ಅವರ ಕುಟುಂಬ ಮತ್ತು ಮಹಿಳೆಯರು, ಲೋಡಿಂಗ್ ವಾಹನದಲ್ಲಿ ಲೇಪಾ ಗ್ರಾಮಕ್ಕೆ ಬಂದಿದ್ದರು. ಅವರು ಕಾರಿನಿಂದ ಕೆಳಗಿಳಿಯುತ್ತಿದ್ದಾಗ ಆರೋಪಿಗಳ ಕಡೆಯಿಂದ 7ರಿಂದ 8 ಜನರು ದೊಣ್ಣೆ ಮತ್ತು ಬಂದೂಕುಗಳೊಂದಿಗೆ ಬಂದು ಅವರನ್ನು ಸುತ್ತುವರೆದು ಹಲ್ಲೆ ನಡೆಸಿದ್ದಾರೆ. ಈ ವೇಳೆ ಗುಂಡಿನ ದಾಳಿ ನಡೆದಿದ್ದು, ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, 5 ಮಂದಿ ಗಾಯಗೊಂಡಿದ್ದಾರೆ. ವಿಷಯ ತಿಳಿದು ಸಿಹೋನಿಯಾ ಪೊಲೀಸ್ ಪಡೆಗಳೊಂದಿಗೆ ಉನ್ನತ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇದನ್ನೂ ಓದಿ:ದಂಪತಿ ನಡುವೆ ಜಗಳ, ಪೆಟ್ರೋಲ್ ಸುರಿದು ಬೆಂಕಿ; ಪತಿ ಸಾವು, ಪತ್ನಿ ಗಂಭೀರ

Last Updated : May 5, 2023, 4:08 PM IST

ABOUT THE AUTHOR

...view details