ಕರೇರಾ(ಮಧ್ಯಪ್ರದೇಶ):ಇಲ್ಲಿನ ಕರೇರಾ ಗ್ರಾಮದ ರೈತರೊಬ್ಬರ ಮನೆಯಿಂದ ಒಂದೆರಡು ಲಕ್ಷ ಅಲ್ಲ ಬರೋಬ್ಬರಿ 1.24 ಕೋಟಿ ರೂ, ಕಳವು ಮಾಡಲಾಗಿದೆ. ಜಗರ್ ಸಿಂಗ್ ಎಂಬ ರೈತರ ಮನೆಗೆ ನುಗ್ಗಿದ ಕಳ್ಳರು ಬರೋಬ್ಬರಿ 1.24 ಕೋಟಿ ರೂ. ನಗದು ಎಗರಿಸಿ ಪರಾರಿಯಾಗಿದ್ದಾರೆ.
ಸಿಂಗ್ ನಾಲ್ಕು ಎಕರೆ ಜಮೀನು ಮಾರಿ ಬಂದ ಹಣವನ್ನ ಬಾಕ್ಸ್ವೊಂದರಲ್ಲಿ ಇಟ್ಟಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಕಳ್ಳರು ಅವರು ಮಲಗಿದ್ದ ವೇಳೆ ಮನೆಗೆ ನುಗ್ಗಿ ಹಣ ಇಟ್ಟಿದ್ದ ರೂಮ್ ಬಾಗಿಲು ಒಡೆದು ಬಾಕ್ಸ್ನಲ್ಲಿದ್ದ ಹಣವನ್ನ ಕದ್ದು ಪರಾರಿಯಾಗಿದ್ದಾರೆ.
ರೈತನ ಮನೆಗೆ ಕನ್ನ ಹಾಕಿದ ದುಷ್ಕರ್ಮಿಗಳು ಇದನ್ನೂ ಓದಿ: ಬೇರೆ ದೇಶಗಳಿಗೆ ವ್ಯಾಕ್ಸಿನ್ ನೀಡುವ ಬದಲು ನಮಗೆ ನೀಡಿ: ಕೇಂದ್ರಕ್ಕೆ ಮಹಾರಾಷ್ಟ್ರ ಆರೋಗ್ಯ ಸಚಿವರ ಕಿವಿಮಾತು!
ಮನೆಗಳ್ಳತನ ನಡೆದಿರುವುದನ್ನು ಸಿಂಗ್ ಪತ್ನಿ ಪತ್ತೆ ಹಚ್ಚಿದ್ದು, ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಇಷ್ಟೊಂದು ಪ್ರಮಾಣದ ಹಣವನ್ನು ರೈತ ತನ್ನ ಮನೆಯಲ್ಲಿ ಏಕೆ ಇಟ್ಟಿದ್ದ? ಅದು ಕಳವಾಗಿದ್ದು ಹೇಗೆ ಎಂಬ ಬಗ್ಗೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಅವರು ಎಲ್ಲ ಆಯಾಮಗಳಿಂದ ತನಿಖೆ ನಡೆಸುತ್ತಿದ್ದೇವೆ ಎಂದು ಶಿವಪುರಿ ಪೊಲೀಸ್ ಅಧಿಕಾರಿ ರಾಜೇಶ್ ಸಿಂಗ್ ಹೇಳಿದ್ದಾರೆ.