ಕರ್ನಾಟಕ

karnataka

ETV Bharat / bharat

ಇಬ್ಬರು ಶಾಲಾ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ 960 ಕೋಟಿ ರೂ. ಜಮೆ: ಮುಂದೇನಾಯ್ತು ಗೊತ್ತೇ? - ಬಿಹಾರ ಇತ್ತೀಚಿನ ಸುದ್ದಿ

ಬಿಹಾರದ ಹಳ್ಳಿಯಲ್ಲಿ ವಾಸವಾಗಿರುವ ಇಬ್ಬರು ಶಾಲಾ ವಿದ್ಯಾರ್ಥಿಗಳ ಬ್ಯಾಂಕ್​ ಖಾತೆಗೆ ಬರೋಬ್ಬರಿ 960 ಕೋಟಿ ರೂ. ಜಮೆಯಾಗಿರುವ ಅಚ್ಚರಿಯ ಘಟನೆ ನಡೆದಿದೆ.

Two Student
Two Student

By

Published : Sep 16, 2021, 6:04 PM IST

ಕತಿಹಾರ್​(ಬಿಹಾರ):ಬಿಹಾರದಲ್ಲಿ ಜನರ ಬ್ಯಾಂಕ್​ ಖಾತೆಗಳಿಗೆ ಭಾರಿ ಪ್ರಮಾಣದ ಹಣ ಜಮೆಯಾಗುತ್ತಿರುವ ಘಟನೆಗಳು ಮುಂದುವರೆದಿವೆ. ನಿನ್ನೆಯಷ್ಟೇ ವ್ಯಕ್ತಿಯೋರ್ವನ ಬ್ಯಾಂಕ್​ ಖಾತೆಗೆ 5.5 ಲಕ್ಷ ರೂಪಾಯಿ ಹಣ ಜಮೆಯಾಗಿತ್ತು. ಈ ಬೆನ್ನಲ್ಲೇ ಇದೀಗ ಇಬ್ಬರು ಶಾಲಾ ವಿದ್ಯಾರ್ಥಿಗಳ ಬ್ಯಾಂಕ್​ ಖಾತೆಗೆ ಬರೋಬ್ಬರಿ 960 ಕೋಟಿ ರೂ. ಜಮೆಯಾಗಿದೆ.

ಇಬ್ಬರು ಶಾಲಾ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ 960 ಕೋಟಿ ರೂ. ಜಮೆ

ಬಿಹಾರದ ಕತಿಹಾರ​ದ ಅಜಮ್​ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇಬ್ಬರು ಶಾಲಾ ವಿದ್ಯಾರ್ಥಿಗಳ ಬ್ಯಾಂಕ್​ ಖಾತೆಗೆ ಏಕಾಏಕಿ 960 ಕೋಟಿ ರೂಪಾಯಿ ಬಂದಿದೆ. ಇಷ್ಟೊಂದು ಹಣ ಜಮೆಯಾಗುತ್ತಿದ್ದಂತೆ ವಿದ್ಯಾರ್ಥಿಗಳು, ಪೋಷಕರ ಜೊತೆಗೆ ಬ್ಯಾಂಕ್​​ ಅಧಿಕಾರಿಗಳೂ ಕೂಡಾ ಅಚ್ಚರಿಗೊಳಗಾಗಿದ್ದಾರೆ.

ಪಾಸ್ಟಿಯಾ ಹಳ್ಳಿಯಲ್ಲಿರುವ ವಿದ್ಯಾರ್ಥಿಗಳಾದ ಗುರು ಚರಣ್​ ವಿಶ್ವಾಸ್​ ಖಾತೆಗೆ 905 ಕೋಟಿ ರೂ. ಹಾಗೂ ಅಶಿಶ್ ಖಾತೆಗೆ 60 ಕೋಟಿ 20 ಲಕ್ಷದ 11 ಸಾವಿರ ರೂಪಾಯಿ ಬಂದಿದೆ.

ಹಣ ಜಮಾವಣೆಗೊಂಡಿರುವ ಮಾಹಿತಿ ಗೊತ್ತಾಗುತ್ತಿದ್ದಂತೆ ಗ್ರಾಮೀಣ ಬ್ಯಾಂಕ್​​ ಶಾಖೆಯ ವ್ಯವಸ್ಥಾಪಕ ಮನೋಜ್ ಗುಪ್ತಾ ಇಬ್ಬರು ವಿದ್ಯಾರ್ಥಿಗಳ ಬ್ಯಾಂಕ್​ ಖಾತೆ ಸ್ಥಗಿತಗೊಳಿಸಿದ್ದಾರೆ. ಜೊತೆಗೆ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಆಕಸ್ಮಿಕವಾಗಿ ಅಕೌಂಟ್​ಗೆ ಬಿತ್ತು 5.5 ಲಕ್ಷ ರೂ.: ಮೋದಿ ಕೊಟ್ಟ ಹಣ ಇದು, ಯಾವುದೇ ಕಾರಣಕ್ಕೂ ವಾಪಸ್​ ಕೊಡಲ್ಲ ಎಂದ ವ್ಯಕ್ತಿ!

ಈ ಕುರಿತು ಕತಿಹಾರ್​ ಜಿಲ್ಲಾ ಮ್ಯಾಜಿಸ್ಟ್ರೇಟ್ ಉದಯನ್​ ಮಿಶ್ರಾ ಅವರು ಬ್ಯಾಂಕ್​​ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ಲಭ್ಯವಾಗಿರುವ ಮಾಹಿತಿ ಪ್ರಕಾರ, ತಾಂತ್ರಿಕ ದೋಷದಿಂದಾಗಿ ಮಿನಿ ಸ್ಟೇಟ್ಮೆಂಟ್​ನಲ್ಲಿ ಈ ರೀತಿಯ ಹಣ ಕಾಣಿಸುತ್ತಿದೆ ಎನ್ನಲಾಗಿದೆ.

ವಿದ್ಯಾರ್ಥಿಗಳ ಪೋಷಕರಿಗೆ ಗೊತ್ತಾಗಿದ್ದು ಹೇಗೆ?

ವಿದ್ಯಾರ್ಥಿಗಳು ತಮ್ಮ ಬ್ಯಾಂಕ್​ ಖಾತೆಗೆ ನೀಡಿರುವ ಮೊಬೈಲ್​ಗೆ ಸಂದೇಶ ಬಂದಿದೆ. ಈ ವೇಳೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ಕಂಪ್ಯೂಟರ್​ ಸೆಂಟರ್​ಗೆ ಹೋಗಿ ಮಿನಿ ಸ್ಟೇಟ್ಮೆಂಟ್​​​ ಚೆಕ್​ ಮಾಡಿದಾಗ ಹಣ ಜಮಾವಣೆಗೊಂಡಿರುವುದು ಖಚಿತವಾಗಿದೆ. ಈ ವೇಳೆ ಅವರು ಬ್ಯಾಂಕ್​ಗೆ ಭೇಟಿ ನೀಡಿ, ಅಲ್ಲಿನ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಸುದ್ದಿ ಎಲ್ಲೆಡೆ ವೈರಲ್​ ಆಗಿದೆ.

ABOUT THE AUTHOR

...view details