ಕರ್ನಾಟಕ

karnataka

ETV Bharat / bharat

ಒಂದಲ್ಲ, ಎರಡಲ್ಲ; ಬರೋಬ್ಬರಿ 500 ಸಲ ವ್ಯಕ್ತಿಗೆ ಕಚ್ಚಿವೆಯಂತೆ ಹಾವುಗಳು! - 500 ಸಲ ಹಾವು ಕಚ್ಚಿಸಿಕೊಂಡಿರುವ ವ್ಯಕ್ತಿ

ಲಾತೂರು ಜಿಲ್ಲೆಯಲ್ಲಿ ವಾಸವಾಗಿರುವ ವ್ಯಕ್ತಿಯೋರ್ವನಿಗೆ 500ಕ್ಕೂ ಅಧಿಕ ಸಲ ಹಾವು ಕಚ್ಚಿವೆ. ಅಚ್ಚರಿ ಎಂದರೆ ಗದ್ದೆಗಳಲ್ಲಿ ಜನರ ಗುಂಪಿನಲ್ಲಿ ಕೆಲಸ ಮಾಡುವ ಸಂದರ್ಭದಲ್ಲೂ ಈತನಿಗೆ ವಿಷಸರ್ಪ ಕಚ್ಚಿರುವುದು ಹೆಚ್ಚಿನ ಚರ್ಚೆಗೆ ಗ್ರಾಸವಾಗಿದೆ.

snake bites to a person in Latur
snake bites to a person in Latur

By

Published : Mar 19, 2022, 8:28 PM IST

ಲಾತೂರು(ಮಹಾರಾಷ್ಟ್ರ):ಮನುಷ್ಯನಿಗೆ ಕೇವಲ ಒಂದ್ಸಲ ಹಾವು ಕಚ್ಚಿದರೆ ಆತ ಬದುಕುವುದು ಅತಿ ವಿರಳ. ಆದರೆ, ಇಲ್ಲೊಬ್ಬ ವ್ಯಕ್ತಿಗೆ ಬರೋಬ್ಬರಿ 500ಕ್ಕೂ ಹೆಚ್ಚು ಬಾರಿ ಹಾವುಗಳು ಕಚ್ಚಿವೆ. ಮಹಾರಾಷ್ಟ್ರದ ಲಾತೂರಿನಲ್ಲಿ ಈ ಘಟನೆ ನಡೆದಿದ್ದು, ಆಶ್ಚರ್ಯಕ್ಕೆ ಕಾರಣವಾಗಿದೆ.

ಲಾತೂರು ಜಿಲ್ಲೆಯ ಔಸಾ ಪಟ್ಟಣದಲ್ಲಿ ವಾಸವಾಗಿರುವ ಅನಿಲ್​ ಎಂಬ ವ್ಯಕ್ತಿಗೆ 500ಕ್ಕೂ ಅಧಿಕ ಸಲ ಹಾವುಗಳು ಕಚ್ಚಿವೆ. ಅಚ್ಚರಿ ಎಂದರೆ ಅನೇಕ ಜನರು ಒಟ್ಟಿಗೆ ಕೆಲಸ ಮಾಡ್ತಿದ್ದ ಸಂದರ್ಭದಲ್ಲೂ ಈತನಿಗೆ ಮಾತ್ರ ಹಾವು ಕಚ್ಚಿರುವ ಘಟನೆಗಳು ನಡೆದಿವೆ. 45 ವರ್ಷದ ಅನಿಲ್ ತುಕಾರಾಂ ಗಾಯಕ್ವಾಡ್ ಕೃಷಿ ಕಾರ್ಮಿಕನಾಗಿದ್ದು, ಕೂಲಿ ಕೆಲಸಕ್ಕಾಗಿ ಬೇರೆಯವರ ಜಮೀನುಗಳಿಗೆ ಹೋಗುತ್ತಾರೆ. ಈ ವೇಳೆ ಆತನಿಗೆ ವಿಷ ಸರ್ಪಗಳು ಕಚ್ಚಿವೆಯಂತೆ.

ಒಂದಲ್ಲ, ಎರಡಲ್ಲ; ಬರೋಬ್ಬರಿ 500 ಸಲ ವ್ಯಕ್ತಿಯೋರ್ವನಿಗೆ ಕಚ್ಚಿರುವ ಹಾವು!

ಇದನ್ನೂ ಓದಿ:ಕಳ್ಳನ ಹಿಡಿಯಲು ಆತನ ಹೆಸರಿನಲ್ಲೇ 'ವಾಟ್ಸ್‌ಆ್ಯಪ್‌ ಗ್ರೂಪ್‌'.. ಪೊಲೀಸರ ಮಾಸ್ಟರ್ ಪ್ಲಾನ್​!

ಜಮೀನಿನಲ್ಲಿ ಜನರ ಗುಂಪಿನಲ್ಲಿ ಕೆಲಸ ಮಾಡುವ ಸಂದರ್ಭದಲ್ಲೂ ಈತನಿಗೆ ಮಾತ್ರ ಹಾವು ಕಚ್ಚಿರುವ ಘಟನೆ ನಡೆದಿವೆ. ಕಳೆದ 10ರಿಂದ 15 ವರ್ಷಗಳಲ್ಲಿ 500ಕ್ಕೂ ಅಧಿಕ ಸಲ ಹಾವುಗಳಿಂದ ಅನಿಲ್​ ಕಚ್ಚಿಸಿಕೊಂಡಿದ್ದಾನೆ. ಹೀಗಾಗಿ, ಅನೇಕ ಸಲ ಈತನ ಆರೋಗ್ಯ ಸ್ಥಿತಿ ಹದೆಗೆಟ್ಟು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾನೆ.

ಅನಿಲ್​ಗೆ ನೂರಾರು ಸಲ ಚಿಕಿತ್ಸೆ ನೀಡಿರುವ ವೈದ್ಯ ಡಾ. ಸಚ್ಚಿದಾನಂದ ರಣದಿವೆ ಮಾತನಾಡಿ, ಜನಸಂದಣಿಯಲ್ಲಿ ಕೆಲಸ ಮಾಡ್ತಿದ್ದಾಗ ಕೂಡ ಹಾವುಗಳು ಈತನಿಗೆ ಕಚ್ಚುತ್ತಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ. ನಾನು ಇಲ್ಲಿಯವರೆಗೆ ಅನಿಲ್​ಗೆ 150ಕ್ಕೂ ಅಧಿಕ ಸಲ ಚಿಕಿತ್ಸೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ.

ABOUT THE AUTHOR

...view details