ವಯನಾಡು: ಕೇರಳದ ವಯನಾಡು ಜಿಲ್ಲೆಯಲ್ಲಿ ಅಂದಾಜು 500ಕ್ಕೂ ಹೆಚ್ಚು ರೆಸಾರ್ಟ್‌ಗಳು ಮತ್ತು ಹೋಂ ಸ್ಟೇಗಳು ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿದು ಬಂದಿದೆ. ಇವುಗಳಲ್ಲಿ ಹೆಚ್ಚಾಗಿ ವಯನಾಡಿನ ಬುಡಕಟ್ಟು ಜನವಸತಿ ಪ್ರದೇಶ ಹಾಗೂ ವಯನಾಡಿನ ಕಾಡುಗಳಲ್ಲಿ ತಲೆ ಎತ್ತಿವೆ.
ವಯನಾಡಿನಲ್ಲಿ ಅಕ್ರಮವಾಗಿ 500ಕ್ಕೂ ಹೆಚ್ಚು ರೆಸಾರ್ಟ್, ಹೋಂ ಸ್ಟೇಗಳ ನಿರ್ಮಾಣ - ಕೇರಳದ ವಯನಾಡು
ವಯನಾಡಿನ ಪೆರಿಯಾದಲ್ಲಿರುವ ಆನೆ ಕಾರಿಡಾರ್‌ನ ಉದ್ದಕ್ಕೂ ಬೆಟ್ಟಗಳನ್ನು ನೆಲಸಮಗೊಳಿಸಿ ಮತ್ತು ಕಾಡನ್ನು ನಾಶಪಡಿಸಿ ಅಕ್ರಮವಾಗಿ ರೆಸಾರ್ಟ್‌ಗಳನ್ನು ನಿರ್ಮಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
![ವಯನಾಡಿನಲ್ಲಿ ಅಕ್ರಮವಾಗಿ 500ಕ್ಕೂ ಹೆಚ್ಚು ರೆಸಾರ್ಟ್, ಹೋಂ ಸ್ಟೇಗಳ ನಿರ್ಮಾಣ reveals](https://etvbharatimages.akamaized.net/etvbharat/prod-images/768-512-10400162-1034-10400162-1611748992779.jpg)
ವಯನಾಡಿನ ಪೆರಿಯಾದಲ್ಲಿರುವ ಆನೆ ಕಾರಿಡಾರ್‌ನ ಉದ್ದಕ್ಕೂ ಬೆಟ್ಟಗಳನ್ನು ನೆಲಸಮಗೊಳಿಸಿ ಮತ್ತು ಕಾಡನ್ನು ನಾಶಪಡಿಸಿ ರೆಸಾರ್ಟ್‌ಗಳನ್ನು ನಿರ್ಮಿಸಲಾಗಿದೆ. ಪೆರಿಯಾ ಪ್ರದೇಶದ ಹೊರತಾಗಿ ವೈತಿರಿ, ಮೆಪ್ಪಾಡಿ ಮತ್ತು ತಿರುನೆಲ್ಲಿ ಪಂಚಾಯತ್ ವ್ಯಾಪ್ತಿ ಹಾಗೂ ಮುತಂಗಾ ವನ್ಯಜೀವಿ ಅಭಯಾರಣ್ಯಕ್ಕೆ ಸಮೀಪದಲ್ಲಿ ಅನೇಕ ರೆಸಾರ್ಟ್‌ಗಳು ಮತ್ತು ಹೋಂ ಸ್ಟೇಗಳನ್ನು ನಿರ್ಮಿಸಲಾಗಿದೆ.
ವಯನಾಡಿನ ಚೆಂಬ್ರಾ, ವೆಲ್ಲರಿಮಾಲಾ ಮತ್ತು ಎಲಾಂಬಿಲೆರಿಮಾಲಾ ಬೆಟ್ಟಗಳ ಕಣಿವೆಗಳಲ್ಲಿರುವ ರೆಸಾರ್ಟ್‌ಗಳಲ್ಲಿ ಅನೇಕ ಮರದ ಗುಡಿಸಲುಗಳು ಮತ್ತು ಟೆಂಟ್ಗಳಿವೆ. ಇವುಗಳನ್ನು ನಿರ್ಮಿಸಲು ಪರವಾನಗಿ ಪಡೆದಿಲ್ಲ ಎನ್ನಲಾಗಿದೆ. ಹಾಗಾಗಿ ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.