ಪಾಟ್ನಾ(ಬಿಹಾರ): ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ದೇಶಾದ್ಯಂತ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಈ ಸಂಭ್ರಮದ ನಡುವೆ ಬಿಹಾರದಲ್ಲಿ ಸುಮಾರು 400ಕ್ಕೂ ಅಧಿಕ ನವಜಾತ ಶಿಶುಗಳ ಜನನವಾಗಿದೆ ಎಂದು ವರದಿಯಾಗಿದೆ. ಪಾಟ್ನಾ ಜಿಲ್ಲೆಯೊಂದರಲ್ಲೇ ಶಿಶುಗಳ ಜನನ ಸಂಖ್ಯೆ 150ರ ಗಡಿ ಮುಟ್ಟಿದೆ. ವಿವಿಧ ಜಿಲ್ಲೆಗಳ ನವಜಾತ ಶಿಶುಗಳ ಸಂಖ್ಯೆ ರಾತ್ರಿ ವೇಳೆಗೆ ಸಾವಿರದ ಗಡಿ ದಾಟಲಿದೆ ಎಂದು ಅಂದಾಜಿಸಲಾಗಿದೆ.
ಬಿಹಾರದಲ್ಲಿ ನ್ಯೂ ಟ್ರೆಂಡ್: ಬಿಹಾರದಲ್ಲಿ ಸದ್ಯ ನ್ಯೂ ಟ್ರೆಂಡ್ ಶುರುವಾಗಿದೆ. ಹಬ್ಬದ ದಿನಗಳಲ್ಲಿ ಹೆರಿಗೆ ದಿನಾಂಕ ನಿಗದಿಯಾಗಿರುವ ಮಹಿಳೆಯರು ಹಬ್ಬದಂದು ಹೆರಿಗೆ ಮಾಡಿಸಿಕೊಳ್ಳಲು ಮುಂದಾಗುತ್ತಿದ್ದಾರೆ. ಅಲ್ಲದೇ ಕೆಲವು ಮಹಿಳೆಯರಂತೂ ಹಬ್ಬದ ದಿನದಂದೇ ಮಕ್ಕಳಿಗೆ ಜನ್ಮ ನೀಡಲು ಮುಂದಾಗುತ್ತಿದ್ದಾರೆ. ಸಿಸೇರಿಯನ್ ಪ್ರಕರಣಗಳಲ್ಲಿ ಈ ರೀತಿ ಹೆರಿಗೆ ದಿನಾಂಕವನ್ನು ಕೆಲವು ದಿನಗಳ ಕಾಲ ಮುಂದೂಡಬಹುದು. ಅಲ್ಲದೇ ಶ್ರೀಕೃಷ್ಣ ಜನ್ಮಾಷ್ಟಮಿ ಸಂದರ್ಭದಲ್ಲಿ ಹೆರಿಗೆಗಳ ಸಂಖ್ಯೆ ಹೆಚ್ಚಾಗುತ್ತಿದೆ. ಮಹಿಳೆಯರು ಕೃಷ್ಣ ಜನ್ಮಾಷ್ಟಮಿಯಂದೇ ಮಗುವಿಗೆ ಜನ್ಮ ನೀಡಲು ಮುಂದಾಗುತ್ತಿದ್ದಾರೆ. ಸಿಸೇರಿಯನ್ಗೆ ಒಳಗಾಗುವ ಮಹಿಳೆಯರು ಮಾತ್ರ ಈ ರೀತಿ ತಮ್ಮ ಹೆರಿಗೆ ದಿನಾಂಕವನ್ನು ನಿರ್ಧರಿಸಲು ಸಾಧ್ಯವಿರುತ್ತದೆ.
ಕೃಷ್ಣ ಜನ್ಮಾಷ್ಟಮಿಯಂದು ಮಕ್ಕಳ ಜನನ.. ವೈದ್ಯರ ಪ್ರತಿಕ್ರಿಯೆ: ಈ ಬಗ್ಗೆ ಪ್ರತಿಕ್ರಿಯಿಸಿರುವ ಪಾಟ್ನಾದ ಪ್ರಸೂತಿ ತಜ್ಞೆ ಡಾ. ಸಾರಿಕಾ ರೈ ಅವರು, ಯಾವುದೇ ಹಿಂದು ಹಬ್ಬಗಳನ್ನು ಎರಡು ದಿನಗಳ ಕಾಲ ಆಚರಿಸಲಾಗುತ್ತದೆ. ಅದೇ ರೀತಿ ಕೃಷ್ಣ ಜನ್ಮಾಷ್ಟಮಿಯನ್ನು ಎರಡು ದಿನಗಳ ಕಾಲ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಹೆರಿಗೆಗಳ ಸಂಖ್ಯೆ ಹೆಚ್ಚಾಗಿದೆ. ಸದ್ಯ 10ಕ್ಕೂ ಹೆಚ್ಚು ಹೆರಿಗೆಯನ್ನು ಮಾಡಿದ್ದೇನೆ. 40 ಹೆರಿಗೆ ಇನ್ನೂ ಬಾಕಿ ಇದೆ. ಇದರಲ್ಲಿ ಕೆಲವು ಸಾಮಾನ್ಯ ಹೆರಿಗೆ, ಇನ್ನು ಕೆಲವು ಸಿಸೇರಿಯನ್ ಪ್ರಕರಣಗಳಾಗಿವೆ. ಇತ್ತೀಚಿನ ದಿನಗಳಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ತಂತ್ರಜ್ಞಾನ ಅಭಿವೃದ್ದಿ ಆಗಿರುವುದರಿಂದ ಸಿಸೇರಿಯನ್ ಪ್ರಕರಣಗಳಲ್ಲಿ ಹೆರಿಗೆಯನ್ನು ನಾಲ್ಕೈದು ದಿನಗಳ ಕಾಲ ಮುಂದೂಡಬಹುದು ಎಂದು ಹೇಳಿದರು.