ಕರ್ನಾಟಕ

karnataka

ETV Bharat / bharat

ಬೀದಿ ನಾಯಿ ದಾಳಿ: 40 ಕ್ಕೂ ಹೆಚ್ಚು ಮಂದಿಗೆ ಗಾಯ - ಬಾಲಸೋರ್ ಆಸ್ಪತ್ರೆ

ಬೆಳಗಿನ ವಾಕಿಂಗ್ ಮಾಡುವವರು ಮತ್ತು ಇತರ ಕೆಲವು ದಾರಿಹೋಕರ ಮೇಲೆ ಬೀದಿ ನಾಯಿ ದಾಳಿ ನಡೆಸಿದ್ದು 40ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

More than 40 injured in Balasore stray dog attack
ಬೀದಿ ನಾಯಿ ದಾಳಿ ಬಾಲಸೋರ್‌ನಲ್ಲಿ 40 ಕ್ಕೂ ಹೆಚ್ಚು ಮಂದಿಗೆ ಗಾಯ

By

Published : Dec 3, 2022, 9:40 PM IST

ಬಾಲಸೋರ್(ಒಡಿಶಾ): ಬೀದಿ ನಾಯಿಗಳ ದಾಳಿ ಪ್ರಕರಣದಲ್ಲಿ 40 ಕ್ಕೂ ಹೆಚ್ಚು ಮಂದಿ ವಾಯು ವಿಹಾರಿಗಳು ಗಾಯಗೊಂಡಿದ್ದು, ಸಮೀಪದ ಪಲ್‌ಬಜಾರ್, ಖ್ವಾಜಾಬಾಗ್, ಕಸಬ್ ಮಹಲ್ಲಾ, ಬಾಲುಬಜಾರ್, ರೆಜೌಲ್ಲಾ ಲೇನ್, ಮುನಿಪಾಡಾದ ಬಾಲಸೋರ್ ಪ್ರದೇಶದಲ್ಲಿ ವೈದ್ಯಕೀಯ ಚಿಕಿತ್ಸೆಗೆ ತೆರಳಿದ್ದಾರೆ. ಬಾಲಸೋರ್ ಪಟ್ಟಣದಲ್ಲಿ ಶನಿವಾರ 40 ಕ್ಕೂ ಹೆಚ್ಚು ಜನರ ಮೇಲೆ ನಾಯಿ ದಾಳಿ ಮಾಡಿ ಗಾಯಗೊಳಿಸಿದ ನಂತರ ಕೆಲ ನಾಯಿಯನ್ನು ಹೊಡೆದು ಸಾಯಿಸಲಾಗಿದೆ

ಮೂಲಗಳ ಪ್ರಕಾರ, ನಾಯಿಯು ಬೆಳಗಿನ ವಾಕಿಂಗ್ ಮಾಡುವವರು ಮತ್ತು ಇತರ ಕೆಲವು ದಾರಿಹೋಕರ ಮೇಲೆ ದಾಳಿ ಮಾಡಿದೆ. ಇವರೆಲ್ಲರೂ ಬಾಲಸೋರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಗೊಂಡ ವ್ಯಕ್ತಿ ಸೇಖ್ ಕಾದರ್ ಮಾತನಾಡಿ ನಾನು ಬೆಳಗಿನ ನಡಿಗೆಯಲ್ಲಿ ಹೋಗುತ್ತಿದ್ದಾಗ ನಾಯಿ ಇದ್ದಕ್ಕಿದ್ದಂತೆ ನನ್ನ ಮೇಲೆ ದಾಳಿ ಮಾಡಿತು ಎಂದು ಘಟನೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಮರೆತಿದ್ದ ಚಿನ್ನಾಭರಣ ತುಂಬಿದ ಬ್ಯಾಗ್ ಹಿಂತಿರುಗಿಸಿ ಪ್ರಾಮಾಣಿಕತೆ ಮೇರೆದ ಆಟೊ ಚಾಲಕ

ABOUT THE AUTHOR

...view details