ನವದೆಹಲಿ :ದೇಶದಲ್ಲಿ ಶುಕ್ರವಾರದವರೆಗೆ ನೀಡಲಾಗುವ ಕೋವಿಡ್ -19 ಲಸಿಕೆ ಪ್ರಮಾಣವು ಒಟ್ಟು 9.80 ಕೋಟಿ ಮೀರಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಇಂದು ತಿಳಿಸಿದೆ.
ಆರೋಗ್ಯ ಸಚಿವಾಲಯದ ಪ್ರಕಾರ, ಒಟ್ಟು 9,80,75,160 ಲಸಿಕೆ ನೀಡಲಾಗಿದೆ. ಕಳೆದ 24 ಗಂಟೆಗಳಲ್ಲಿ ಸುಮಾರು 34 ಲಕ್ಷದಷ್ಟು ವ್ಯಾಕ್ಸಿನೇಷನ್ ನೀಡಲಾಯಿತು. "ದೇಶದಲ್ಲಿ ಈವರೆಗೆ ನೀಡಲಾದ ಒಟ್ಟು ವ್ಯಾಕ್ಸಿನ್ ಪ್ರಮಾಣಗಳಲ್ಲಿ ಶೇ. 60.62ರಷ್ಟು ಎಂಟು ರಾಜ್ಯಗಳದ್ದಾಗಿದೆ" ಎಂದು ಸಚಿವಾಲಯ ತಿಳಿಸಿದೆ.