ಮೊರ್ಬಿ (ಗುಜರಾತ್): ಗುಜರಾತ್ನ ಮೊರ್ಬಿಯಲ್ಲಿ ಭಾನುವಾರ ಸಂಜೆ ನಡೆದ ತೂಗು ಸೇತುವೆ ದುರಂತಕ್ಕೆ ಸಂಬಂಧಿಸಿದಂತೆ ಆಘಾತಕಾರಿ ಸಂಗತಿ ಹೊರಬಿದ್ದಿದೆ. ಫಿಟ್ನೆಸ್ ಪ್ರಮಾಣಪತ್ರವಿಲ್ಲದೆ ಸಾರ್ವಜನಿಕರಿಗೆ ಸೇತುವೆಯನ್ನು ತೆರೆಯಲಾಗಿತ್ತು ಎಂಬ ಅಂಶವನ್ನು ಅಧಿಕಾರಿಯೊಬ್ಬರು ಬಹಿರಂಗ ಪಡಿಸಿದ್ದಾರೆ.
ಮೊರ್ಬಿ ತೂಗು ಸೇತುವೆ ಕುಸಿತದಿಂದ ಸುಮಾರು 60 ಜನರು ಸಾವನ್ನಪ್ಪಿದ್ದು, ಅನೇಕರು ನದಿಗೆ ಬಿದ್ದಿದ್ದಾರೆ. ಈ ನಡುವೆ ಮೊರ್ಬಿ ಮುನ್ಸಿಪಲ್ ಸಮಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ವಿ. ಝಾಲಾ ಸುದ್ದಿಗಾರರೊಂದಿಗೆ ಮಾತನಾಡಿ, ದೀರ್ಘಕಾಲದಿಂದಲೂ ಈ ಸೇತುವೆಯನ್ನು ಸಾರ್ವಜನಿಕರಿಗೆ ಮುಚ್ಚಲಾಗಿತ್ತು ಎಂದು ಹೇಳಿದರು.
ಅಲ್ಲದೇ, ಏಳು ತಿಂಗಳ ಹಿಂದೆ ಖಾಸಗಿ ಕಂಪನಿಗೆ ನವೀಕರಣ ಮತ್ತು ನಿರ್ವಹಣೆಯ ಗುತ್ತಿಗೆಯನ್ನು ನೀಡಲಾಗಿತ್ತು. ಆದರೆ, ಅಕ್ಟೋಬರ್ 26ರಂದು (ಗುಜರಾತಿ ಹೊಸ ವರ್ಷದ ದಿನ) ಖಾಸಗಿ ಕಂಪನಿಯು ಸೇತುವೆಯನ್ನು ಸಾರ್ವಜನಿಕರಿಗೆ ತೆರೆಯಲಾಗಿತ್ತು. ಆದರೆ, ಇದಕ್ಕೆ ಇನ್ನೂ ನಗರ ಪಾಲಿಕೆಯು ಫಿಟ್ನೆಸ್ ಪ್ರಮಾಣಪತ್ರವನ್ನು ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ:ತೂಗು ಸೇತುವೆ ಕುಸಿದು 60ಕ್ಕೂ ಜನ ಸಾವು: ರಾಷ್ಟ್ರಪತಿ ಮುರ್ಮು, ಮೋದಿ, ಶಾ ಸಂತಾಪ