ಅಹಮದಾಬಾದ್(ಗುಜರಾತ್):ಗುಜರಾತ್ನ ಮೊರ್ಬಿ ಸೇತುವೆ ದುರಂತದಲ್ಲಿ 141 ಜನರು ಅನ್ಯಾಯವಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಶತಮಾನಗಳಷ್ಟು ಹಳೆಯದಾದ ತೂಗು ಸೇತುವೆ ನವೀಕರಿಸಿದ ಕಂಪನಿಯ ವಿರುದ್ಧವೂ ಕ್ರಮ ಜರುಗಿಸಿ ಎಂದು ವಕೀಲರೊಬ್ಬರು ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ಸಲ್ಲಿಸಿದ್ದಾರೆ.
ಸೇತುವೆ ನವೀಕರಣ ಮಾಡಿ ಜನರಿಗೆ ಮುಕ್ತ ಮಾಡಿದ್ದ ಒರೆವಾ ಕಂಪನಿ ಮಾಲೀಕರು ಕೂಡ ಪ್ರಕರಣದಲ್ಲಿ ಭಾಗಿದಾರರು. ಇವರ ವಿರುದ್ಧ ಈವರೆಗೂ ಯಾವುದೇ ದೂರು ದಾಖಲಾಗಿಲ್ಲ. ನ್ಯಾಯಾಂಗ ತನಿಖೆ ನಡೆಸಲು ಪಿಐಎಲ್ ಸಲ್ಲಿಕೆಯಾಗಿದ್ದರೂ, ಕಂಪನಿ ವಿರುದ್ಧ ಕ್ರಮ ಏಕಿಲ್ಲ ಎಂದು ವಕೀಲರು ಪ್ರಶ್ನಿಸಿದ್ದಾರೆ.
ಸೇತುವೆಯ ಮೇಲೆ ಸಾಮರ್ಥ್ಯಕ್ಕಿಂತ ಹೆಚ್ಚಿನ ಜನರನ್ನು ಬಿಟ್ಟಿದ್ದರ ಬಗ್ಗೆಯೂ ಪ್ರಶ್ನಿಸಿರುವ ವಕೀಲರು ಗುಜರಾತ್ ಹೈಕೋರ್ಟ್‌ನಲ್ಲಿ ಮೊರ್ಬಿ ನಗರಪಾಲಿಕೆಯ ಅಧಿಕಾರಿಗಳು ಮತ್ತು ಒರೆವಾ ಕಂಪನಿಯ ಮಾಲೀಕರ ವಿರುದ್ಧ ಕ್ರಮ ಜಾರಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ.