ಕರ್ನಾಟಕ

karnataka

ETV Bharat / bharat

ಜುಲೈ 19 ರಿಂದ ಸಂಸತ್ತಿನ ಮುಂಗಾರು ಅಧಿವೇಶನ - ಸಂಸತ್‌ ಮುಂಗಾರು ಅಧಿವೇಶನ

ಜುಲೈ 19 ರಿಂದ ಆಗಸ್ಟ್‌ 13ರ ವರೆಗೆ 19 ವ್ಯವಹಾರ ದಿನಗಳಲ್ಲಿ ಸಂಸತ್ತಿನ ಮುಂಗಾರು ಅಧಿವೇಶನ ನಡೆಯಲಿದೆ ಎಂದು ಸ್ಪೀಕರ್‌ ಓಂ ಬಿರ್ಲಾ ಮಾಹಿತಿ ನೀಡಿದರು.

Monsoon session to be held at normal timings from 11 am to 6 pm says Om Birla
ಬೆಳಗ್ಗೆ 11 ರಿಂದಲೇ ಸಂಸತ್‌ ಮುಂಗಾರು ಅಧಿವೇಶನ: ಸ್ಪೀಕರ್‌ ಓಂ ಬಿರ್ಲಾ

By

Published : Jul 12, 2021, 6:15 PM IST

ನವದೆಹಲಿ:ಸಂಸತ್ತಿನ ಮುಂಗಾರು ಅಧಿವೇಶನ ಕೋವಿಡ್‌ಗೂ ಮೊದಲಿದ್ದ ಸಮಯದಂತೆ ಬೆಳಗ್ಗೆ 11 ರಿಂದ ಸಂಜೆ 6 ರವರೆಗೆ ನಡೆಯಲಿದೆ ಎಂದು ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ತಿಳಿಸಿದ್ದಾರೆ.

ಹಿಂದಿನ ಕೆಲ ಅಧಿವೇಶನಗಳಲ್ಲಿ ಉಭಯ ಸದನದ ಕಲಾಪಗಳ ಸಮಯವನ್ನು ಕಡಿಮೆ ಮಾಡಲಾಗಿತ್ತು. ರಾಜ್ಯಸಭೆ ಬೆಳಗ್ಗೆ 9ಕ್ಕೆ ಆರಂಭವಾಗಿ ಮಧ್ಯಾಹ್ನ 1 ಗಂಟೆಗೆ ಮುಕ್ತಾಯವಾಗುತ್ತಿತ್ತು. ಲೋಕಸಭೆ ಸಂಜೆ 4 ಗಂಟೆಗೆ ಸಮಾವೇಶಗೊಳ್ಳುತ್ತಿತ್ತು. ಕೋವಿಡ್‌ ಮುನ್ನೆಚ್ಚರಿಕಾ ಕ್ರಮವಾಗಿ ಸಮಯದಲ್ಲಿ ಬದಲಾವಣೆ ಮಾಡಲಾಗಿತ್ತು.

ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ

ಇದೇ ವೇಳೆ, ಮುಂಗಾರು ಅಧಿವೇಶನಕ್ಕಾಗಿ ಸಕಲ ರೀತಿಯ ಸಿದ್ಧತೆಗಳಾಗಿದ್ದು, ವೈರಸ್‌ ಹರಡದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಬಿರ್ಲಾ ತಿಳಿಸಿದರು.

ಜುಲೈ 19 ರಿಂದ ಆಗಸ್ಟ್‌ 13ರ ವರೆಗೆ 19 ವ್ಯವಹಾರದ ದಿನಗಳಲ್ಲಿ ಅಧಿವೇಶನ ನಡೆಯಲಿದೆ. ಲೋಕಸಭೆಯ 311 ಮಂದಿ ಸದಸ್ಯರಿಗೆ ಈಗಾಗಲೇ ಸಂಪೂರ್ಣವಾಗಿ ಲಸಿಕೆ ನೀಡಲಾಗಿದೆ. ಎಲ್ಲರಿಗೂ ಆರ್‌ಟಿ-ಪಿಸಿಆರ್‌ ಪರೀಕ್ಷೆ ನಡೆಸಲಾಗಿದೆ. ಕೆಲವು ಕಾರಣಗಳಿಂದ 23 ಸದಸ್ಯರು ಇನ್ನೂ ಲಸಿಕೆ ಪಡೆದಿಲ್ಲ. ಸಂಸತ್‌ ಆವರಣದಲ್ಲಿ ದಿನ 24 ಗಂಟೆಗಳಲ್ಲೂ ಕೋವಿಡ್‌ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿದೆ. ಮುಂಬರುವ ಅಧಿವೇಶನದಲ್ಲಿ ಕೊರೊನಾ ಪ್ರೋಟೋಕಾಲ್‌ ಅನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು ಎಂದರು.

ಇದನ್ನೂ ಓದಿ: ಮೇಕೆದಾಟುವಿನಲ್ಲಿ ಅಣೆಕಟ್ಟು ನಿರ್ಮಾಣಕ್ಕೆ ಕರ್ನಾಟಕಕ್ಕೆ ಅವಕಾಶ ಬೇಡ : ತಮಿಳುನಾಡು ಸರ್ವಪಕ್ಷಗಳಿಂದ ಕೇಂದ್ರಕ್ಕೆ ಒತ್ತಾಯ

ಸಾಂಕ್ರಾಮಿಕ ಸಮಯದಲ್ಲಿ ಶಾಸಕಾಂಗ ಕಾರ್ಯಗಳನ್ನು ನಿರ್ವಹಿಸುವ ಸುಮಾರು 380 ಸಭೆಗಳನ್ನು ನಡೆಸಲಾಗಿದೆ. ಈ ಬಾರಿ ಅಧಿವೇಶನವನ್ನು ಸುಗಮವಾಗಿ ನಡೆಸುವುದು ದೊಡ್ಡ ಸವಾಲಾಗಿದೆ. COVID ಪ್ರೋಟೋಕಾಲ್‌ಗಳನ್ನು ಅನುಸರಿಸುವಾಗ ಸದನದ ಕಾರ್ಯಚಟುವಟಿಕೆಗಳನ್ನು ಸರಾಗವಾಗಿ ನಡೆಸುವುದು ಕೂಡ ದೊಡ್ಡ ಸವಾಲಾಗಿ ಪರಿಣಮಿಸುತ್ತದೆ. ಆದಾಗ್ಯೂ, ಅನೇಕ ಹಂತಗಳಲ್ಲಿ ಸಿದ್ಧತೆಗಳು ನಿರಂತರವಾಗಿ ನಡೆಯುತ್ತಿವೆ ಎಂದು ಸ್ಪೀಕರ್ ವಿವರಿಸಿದರು.

ABOUT THE AUTHOR

...view details