ಎರ್ನಾಕುಲಂ(ಕೇರಳ): ವ್ಯಾಪಾರಿಯೊಬ್ಬ ತನ್ನ ಮಸಾಜ್ ಪಾರ್ಲರ್ನಲ್ಲಿ ಬರೋಬ್ಬರಿ ಎಂಟು ಸ್ಪೈ ಕ್ಯಾಮೆರಾ ಅಳವಡಿಕೆ ಮಾಡಿದ್ದಾನೆಂದು ಸಂತ್ರಸ್ತ ಬಾಲಕಿಯೊಬ್ಬರು ದೂರು ದಾಖಲು ಮಾಡಿದ್ದಾರೆ. ಇದರ ಬೆನ್ನಲ್ಲೇ ಆತನ ವಿರುದ್ಧ ಪ್ರಕರಣ ಕೂಡಾ ದಾಖಲಾಗಿದೆ.
ಎರ್ನಾಕುಲಂನಲ್ಲಿ ವ್ಯಾಪಾರಿಯಾಗಿರುವ ಮಾನ್ಸನ್ ಮಾವುಂಗಲ್ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಆರೋಪ ಎದುರಿಸುತ್ತಿದ್ದು, ಇದೀಗ ಆತನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಇದರ ಬೆನ್ನಲ್ಲೇ ಆತನ ಮಸಾಜ್ ಪಾರ್ಲರ್ನಲ್ಲಿ ಸ್ಪೈ ಕ್ಯಾಮೆರಾ ಅಳವಡಿಕೆ ಮಾಡಿದ್ದು, ಅಲ್ಲಿಗೆ ಬರುವ ಗ್ರಾಹಕರ ದೃಶ್ಯ ಸೆರೆ ಹಿಡಿದಿದ್ದಾನೆ ಎಂದು ಆರೋಪಿಸಿದ್ದಾರೆ.