ಕರ್ನಾಟಕ

karnataka

ETV Bharat / bharat

ಮಂಕಿಫಾಕ್ಸ್​ ಭೀತಿ: ಮುನ್ನೆಚ್ಚರಿಕಾ ಕ್ರಮವಾಗಿ ಮುಂಬೈನಲ್ಲಿ ಐಸೋಲೇಷನ್​ ವಾರ್ಡ್​ ರೆಡಿ

ವಿವಿಧ ರಾಷ್ಟ್ರಗಳಲ್ಲಿ ವರದಿಯಾಗುತ್ತಿರುವ ಮಂಕಿಫಾಕ್ಸ್​ ಕಾಯಿಲೆಯನ್ನು ತಡೆಗಟ್ಟಲು ಮುನ್ನೆಚ್ಚರಿಕಾ ಕ್ರಮವಾಗಿ ಮುಂಬೈನ ಕಸ್ತೂರಿಬಾ ಆಸ್ಪತ್ರೆಯಲ್ಲಿ 28 ಹಾಸಿಗೆಗಳ ಪ್ರತ್ಯೇಕ ವಾರ್ಡ್​ ಸಿದ್ಧಪಡಿಸಲಾಗಿದೆ.

monkeypox-threat
ಮಂಕಿಫಾಕ್ಸ್​ ಭೀತಿ

By

Published : May 23, 2022, 8:47 PM IST

ಮುಂಬೈ (ಮಹಾರಾಷ್ಟ್ರ):ಇಡೀ ವಿಶ್ವವನ್ನೇ ಆವರಿಸಿರುವ ಕೋವಿಡ್​ ಸೋಂಕು ಜನರ ಜೀವವನ್ನು ಬಲಿ ಪಡೆಯುತ್ತಿರುವ ಮಧ್ಯೆಯೇ ಆಫ್ರಿಕಾದ ರಾಷ್ಟ್ರಗಳಲ್ಲಿ ಮೊದಲ ಬಾರಿಗೆ ಕಂಡುಬಂದ ಮಂಕಿಫಾಕ್ಸ್​ ಕಾಯಿಲೆ ಮತ್ತೊಂದು ತಲೆನೋವಾಗಿ ಪರಿಣಮಿಸಿದೆ. ಕಾಯಿಲೆಯ ನಿಯಂತ್ರಣದ ಮುನ್ನೆಚ್ಚರಿಕಾ ಕ್ರಮವಾಗಿ ಮುಂಬೈನಲ್ಲಿ ಕಸ್ತೂರಿಬಾ ಆಸ್ಪತ್ರೆಯಲ್ಲಿ 28 ಹಾಸಿಗೆಗಳ ವಾರ್ಡ್ ಅನ್ನು ಸಿದ್ಧಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಂಬೈ ನಗರದಲ್ಲಿ ಇಲ್ಲಿಯವರೆಗೂ ಮಂಗನ ಕಾಯಿಲೆಯ ಯಾವುದೇ ಶಂಕಿತ ಅಥವಾ ದೃಢಪಡಿಸಿದ ಪ್ರಕರಣಗಳು ವರದಿಯಾಗಿಲ್ಲ. ಆದರೂ ಮುನ್ನೆಚ್ಚರಿಕಾ ಕ್ರಮವಾಗಿ, ಕಾಯಿಲೆ ಕಂಡುಬಂದಲ್ಲಿ ಅವರನ್ನು ಪ್ರತ್ಯೇಕಿಸಲು ಪ್ರತ್ಯೇಕ ವಾರ್ಡ್​ ಸಿದ್ಧಪಡಿಸಲಾಗಿದೆ ಎಂದು ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಸಾರ್ವಜನಿಕ ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಂಕಿಪಾಕ್ಸ್​ ಕಾಯಿಲೆಯ ಬಗ್ಗೆ ವಿಮಾನ ನಿಲ್ದಾಣದಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ. ಶಂಕಿತ ಪ್ರಕರಣಗಳ ಪ್ರತ್ಯೇಕತೆಗಾಗಿ ಕಸ್ತೂರಿಬಾ ಆಸ್ಪತ್ರೆಯಲ್ಲಿ 28 ಹಾಸಿಗೆಗಳ ಪ್ರತ್ಯೇಕ ವಾರ್ಡ್ ಸಿದ್ಧಪಡಿಸಲಾಗಿದೆ. ಮಂಕಿಫಾಕ್ಸ್​ ಕಾಯಿಲೆಯ ಶಂಕಿತ ಮಾದರಿಗಳನ್ನು ಪುಣೆ ಮೂಲದ ರಾಷ್ಟ್ರೀಯ ವೈರಾಲಜಿ ಸಂಸ್ಥೆ (ಎನ್‌ಐವಿ) ಗೆ ಪರೀಕ್ಷೆಗೆ ಕಳುಹಿಸಲಾಗುವುದು. ಯಾವುದೇ ಶಂಕಿತ ಮಂಕಿಪಾಕ್ಸ್ ಪ್ರಕರಣವನ್ನು ಕಸ್ತೂರಿಬಾ ಆಸ್ಪತ್ರೆಗೆ ಸೂಚಿಸಲು ಮತ್ತು ಶಿಫಾರಸು ಮಾಡಲು ಮುಂಬೈನಲ್ಲಿರುವ ಎಲ್ಲಾ ಆಸ್ಪತ್ರೆಗಳಿಗೆ ಮಾಹಿತಿ ನೀಡಲಾಗಿದೆ.

ಓದಿ:ಅನುಮತಿ ಇಲ್ಲದೇ ನಡೆದ ಡಿ ಜೆ ಪಾರ್ಟಿಯಲ್ಲಿ ವ್ಯಕ್ತಿ ಸಾವು.. ತನಿಖೆ ನಡೆಸುತ್ತಿರುವ ಪೊಲೀಸರ ವಿರುದ್ಧವೇ ಟೀಕೆ

ABOUT THE AUTHOR

...view details