ಕರ್ನಾಟಕ

karnataka

ETV Bharat / bharat

ಆಹಾರದಾಸೆಗೆ 3 ಲಕ್ಷ ಹಣವಿದ್ದ ಬ್ಯಾಗ್‌ ಜೊತೆ ಮರವೇರಿ ಕುಳಿತ ಮಂಗ: ಮುಂದೇನಾಯ್ತು? - ಬ್ಯಾಗ್​ನಲ್ಲಿಟ್ಟಿದ್ದ ಮೂರು ಲಕ್ಷ

ಬೈಕ್​ ಮೇಲೆ ಇಟ್ಟಿದ್ದ ಹಣದ ಬ್ಯಾಗ್​ವೊಂದನ್ನು ತೆಗೆದುಕೊಂಡು ಹೋಗಿರುವ ಕೋತಿ ಕೆಲಹೊತ್ತು ಪೊಲೀಸರನ್ನು ಆಟವಾಡಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆಯಿತು.

monkey
monkey

By

Published : Aug 16, 2021, 10:26 AM IST

ಹರ್ದೊಯಿ(ಉತ್ತರ ಪ್ರದೇಶ):ಇಲ್ಲಿನಪೊಲೀಸ್ ಠಾಣೆಯ ಹೊರಗೆ ನಿಲ್ಲಿಸಿದ್ದ ಬೈಕ್​​ನಲ್ಲಿಟ್ಟಿದ್ದ ಮೂರು ಲಕ್ಷ ರೂ ಹಣವಿದ್ದ ಬ್ಯಾಗ್​​ನೊಂದಿಗೆ ಕೋತಿಯೊಂದು ಮರವೇರಿ ಕುಳಿತ ಘಟನೆ ಉತ್ತರ ಪ್ರದೇಶದ ಹರ್ದೊಯಿಯಲ್ಲಿ ನಡೆದಿದೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಕೆಲವು ಗಂಟೆಗಳ ಕಾಲ ಹರಸಾಹಸಪಟ್ಟು ಮಂಗನನ್ನು ಹಿಡಿದು, ಬ್ಯಾಗ್ ಅನ್ನು ಮಾಲೀಕನಿಗೆ ನೀಡಿದರು.

ಘಟನೆಯ ಸಂಪೂರ್ಣ ವಿವರ

ಪ್ಲಾಟ್​​ ಖರೀದಿ ಮಾಡಲು ತೆರಳುತ್ತಿದ್ದ ಯುವಕನೋರ್ವ ಕೆಲಸದ ನಿಮಿತ್ಯ ಪೊಲೀಸ್ ಠಾಣೆ ಎದುರು ಬೈಕ್​ ನಿಲ್ಲಿಸಿದ್ದ. ಈ ವೇಳೆ ಹಣವಿದ್ದ ಬ್ಯಾಗ್ ಅನ್ನೂ ಅಲ್ಲಿಯೇ ಬಿಟ್ಟು ಹೋಗಿದ್ದಾನೆ. ಇದನ್ನು ಮರದಲ್ಲಿ ಕುಳಿತಿದ್ದ ಮಂಗ ಗಮನಿಸುತ್ತಿತ್ತು. ತನ್ನ ಕೆಲಸ ಮುಗಿಸಿಕೊಂಡು ಯುವಕ ವಾಪಸ್ ಬಂದು ನೋಡಿದಾಗ ಬ್ಯಾಗ್‌ ಅನ್ನು ಕಿತ್ತುಕೊಂಡಿದ್ದ ಮಂಗ ಮರವೇರಿ ಕುಳಿತಿತ್ತು.ಇದನ್ನು ಗಮನಿಸಿದ ಆತ ಈ ಬಗ್ಗೆ ತಕ್ಷಣ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾನೆ.

ಬಮತಾಪುರ ಗ್ರಾಮದ ನಿವಾಸಿ ಆಶಿಶ್​​ ಹರ್ದೊಯಿನಲ್ಲಿ ಪ್ಲಾಟ್​ ಖರೀದಿ ಮಾಡಿದ್ದರು. ಅದಕ್ಕೆ ಹಣ ಪಾವತಿ ಮಾಡಲು 3 ಲಕ್ಷ ರೂ.ತೆಗೆದುಕೊಂಡು ಹೋಗಿದ್ದಾರೆ. ಪೊಲೀಸ್ ಠಾಣೆಯಲ್ಲಿ ಕೆಲಸವಿದ್ದ ಕಾರಣ, ಬ್ಯಾಗ್​ ಬೈಕ್​ನಲ್ಲಿಟ್ಟು ಒಳಗೆ ಹೋಗಿದ್ದಾರೆ. ಈ ವೇಳೆ ಕೋತಿಯೊಂದು ಬೈಕ್ ಮೇಲೆ ಕುಳಿತುಕೊಂಡು ಚೀಲ ಕಿತ್ತುಕೊಂಡು ಮರವೇರಿತ್ತು.

ಇದನ್ನೂ ಓದಿ: ಯುಪಿಯಲ್ಲಿ ಅತ್ಯಂತ ಅಮಾನವೀಯ ಕೃತ್ಯ: 3 ತಿಂಗಳ ಹಸುಳೆ ಮೇಲೆ ಕಾಮುಕನಿಂದ ಅತ್ಯಾಚಾರ

ಸ್ಥಳಕ್ಕಾಗಮಿಸಿದ ಪೊಲೀಸರು ಕೆಲ ಗಂಟೆಗಳ ಕಾಲ ಶ್ರಮವಹಿಸಿ ಕೋತಿ ಹಿಡಿಯುವಲ್ಲಿ ಯಶಸ್ವಿಯಾದರು. ಹಣದ ಬ್ಯಾಗ್‌ ಅನ್ನು ಯುವಕನಿಗೆ ಒಪ್ಪಿಸಿದರು.

ABOUT THE AUTHOR

...view details