ನವದೆಹಲಿ: ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೋತಿಯೊಂದು ಚೇಷ್ಟೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
Watch: ವಿಮಾನ ನಿಲ್ದಾಣದ Food Plazaದಲ್ಲಿ ಕಪಿ ಚೇಷ್ಟೆ - Food Plaza
ಏರ್ಪೋರ್ಟ್ಗೆ ಪ್ರವೇಶಿಸಿ ಕೋತಿಯೊಂದು ಫುಡ್ ಪ್ಲಾಜಾದಲ್ಲಿ ಕುಳಿತು ಹಣ್ಣಿನ ರಸವನ್ನು ಕುಡಿಯುತ್ತಿರುವ ವಿಡಿಯೋ ವೈರಲ್ ಆಗಿದೆ.
![Watch: ವಿಮಾನ ನಿಲ್ದಾಣದ Food Plazaದಲ್ಲಿ ಕಪಿ ಚೇಷ್ಟೆ Food Plaza](https://etvbharatimages.akamaized.net/etvbharat/prod-images/768-512-13240772-thumbnail-3x2-megha.jpg)
Food Plaza
ವಿಮಾನ ನಿಲ್ದಾಣದ ಫುಡ್ ಪ್ಲಾಜಾದಲ್ಲಿ ಕಪಿ ಚೇಷ್ಟೆ
ಏರ್ಪೋರ್ಟ್ಗೆ ಪ್ರವೇಶಿಸಿದ ಕೋತಿಯು ಫುಡ್ ಪ್ಲಾಜಾದಲ್ಲಿ ಕುಳಿತು ಹಣ್ಣಿನ ರಸವನ್ನು ಕುಡಿಯುತ್ತಿರುವುದು, ಆಹಾರ ಪದಾರ್ಥಗಳಿಗಾಗಿ ಹುಡುಕಾಡುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಫುಡ್ ಪ್ಲಾಜಾದಲ್ಲಿ ತಿನ್ನುತ್ತಿದ್ದವರೆಲ್ಲಾ ತಿನ್ನೋದನ್ನ ನಿಲ್ಲಿಸಿ ತಮ್ಮ ಮೊಬೈಲ್ಗಳಲ್ಲಿ ಈ ದೃಶ್ಯವನ್ನು ಸೆರೆ ಹಿಡಿದಿದ್ದಾರೆ.
ಕೆಲ ಸಮಯದ ಬಳಿಕ ಕೋತಿ ಅಲ್ಲಿಂದ ಜಾಗ ಖಾಲಿ ಮಾಡಿದ್ದು, ಯಾರಿಗೂ ಯಾವುದೇ ಹಾನಿ ಮಾಡಿಲ್ಲ ಎಂದು ಹೇಳಲಾಗಿದೆ.