ಕರ್ನಾಟಕ

karnataka

ETV Bharat / bharat

ಮೊಬೈಲ್​ ಎತ್ತಿಕೊಂಡ ಹೋದ ಕೋತಿ ಕರೆ ಬಂದಾಗ ಮಾಡಿದ್ದೇನು ಗೊತ್ತಾ?

ಎಳನೀರು ಅಂಗಡಿ ಮುಂದೆ ಗ್ರಾಹಕರ ಗದ್ದಲ ಉಂಟಾದ ಕಾರಣ ಮೊಬೈಲ್​ ಸಮೇತವಾಗಿ ಕೋತಿ ಮರದ ತುದಿಗೆ ಹೋಗಿ ಕುಳಿತುಕೊಂಡಿದೆ. ಆಗ ಮೊಬೈಲ್​ಗೆ ಕರೆಯೊಂದು ಬಂದಿದ್ದು, ಆ ಕರೆಯನ್ನು ಸ್ವೀಕರಿಸಿದ ಕೋತಿ ತನ್ನ ಕಿವಿ ಮತ್ತು ಬಾಯಿ ಮುಂದೆ ಇಟ್ಟುಕೊಂಡು ಗಮನಿಸಲು ಯತ್ನಿಸುವ ಮೂಲಕ ಅಚ್ಚರಿ ಮೂಡಿಸಿದೆ.

ಮೊಬೈಲ್​ ಎತ್ತಿಕೊಂಡ ಹೋದ ಕೋತಿ
Monkey climbed up tree with mobile

By

Published : Mar 30, 2022, 7:53 PM IST

ಪುದುಚೇರಿ:ಎಳನೀರು ವ್ಯಾಪಾರದಲ್ಲಿ ತೊಡಗಿದ್ದ ಮಹಿಳೆಯೊಬ್ಬರ ಮೊಬೈಲ್​ ಎತ್ತಿಕೊಂಡು ಹೋದ ಕೋತಿಯೊಂದು ಕರೆ ಬಂದಾಗ ಅದನ್ನು ಸ್ವೀಕರಿಸಿ ಕಿವಿಗೆ ಇಟ್ಟುಕೊಳ್ಳುವ ಮೂಲಕ ಜನರನ್ನು ಅಚ್ಚರಿಗೊಳಿಸಿದೆ. ಪುದುಚೇರಿ ಮಾರುಕಟ್ಟೆಯಲ್ಲಿ ಇಂತಹ ಘಟನೆ ನಡೆದಿದ್ದು, ಈ ದೃಶ್ಯಗಳನ್ನು ಸ್ಥಳೀಯರು ತಮ್ಮ ಮೊಬೈಲ್​ಗಳಲ್ಲಿ ಸೆರೆಹಿಡಿದಿದ್ದಾರೆ.

ಮಹಿಳೆಯೊಬ್ಬರು ಎಂದಿನಂತೆ ಎಳನೀರು ವ್ಯಾಪಾರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಎಳನೀರು ಖರೀದಿಸಲು ಹೆಚ್ಚಿನ ಗ್ರಾಹಕರು ಸೇರಿದ್ದರು. ಇದರಿಂದ ಆ ಮಹಿಳೆ ವ್ಯಾಪಾರದಲ್ಲಿ ಮಗ್ನರಾಗಿದ್ದರು. ಅಷ್ಟರಲ್ಲಿ ಅಲ್ಲಿಗೆ ಬಂದ ಕೋತಿಯೊಂದು ಆ ಮಹಿಳೆಯ ಮೊಬೈಲ್​ ಎತ್ತಿಕೊಂಡಿದೆ. ಆದರೆ, ಅಂಗಡಿ ಮುಂದೆ ಗ್ರಾಹಕರ ಗದ್ದಲ ಉಂಟಾದ ಕಾರಣ ಮೊಬೈಲ್​ ಸಮೇತವಾಗಿ ಕೋತಿ ಮರದ ತುದಿಗೆ ಹೋಗಿ ಕುಳಿತುಕೊಂಡಿದೆ.

ಮೊಬೈಲ್​ ಎತ್ತಿಕೊಂಡ ಹೋದ ಕೋತಿ ಕರೆ ಬಂದಾಗ ಮಾಡಿದ್ದೇನು ಗೊತ್ತಾ?

ಆಗ ಮಹಿಳೆ ಹಾಗೂ ಅಲ್ಲಿ ನೆರೆದಿದ್ದ ಗ್ರಾಹಕರು ಸೇರಿ ಎಲ್ಲರೂ ಮೊಬೈಲ್​ ಕೊಡುವಂತೆ ಕೋತಿಗೆ ಸನ್ನೆ ಮಾಡಿ ಕೇಳಿದ್ದಾರೆ. ಆದರೆ, ಅದು ಕೊಟ್ಟಿಲ್ಲ. ಇದೇ ವೇಳೆ ಮೊಬೈಲ್​ಗೆ ಕರೆಯೊಂದು ಬಂದಿದೆ. ಆ ಕರೆಯನ್ನು ಸ್ವೀಕರಿಸಿರುವ ಕೋತಿ ತನ್ನ ಕಿವಿ ಮತ್ತು ಮುಖದ ಮುಂದೆ ಇಟ್ಟುಕೊಂಡು ಗಮನಿಸಲು ಯತ್ನಿಸಿದೆ. ಕೋತಿಯ ಈ ವರ್ತನೆಯಿಂದ ಅಲ್ಲಿ ಸೇರಿದ್ದ ಪ್ರತಿಯೊಬ್ಬರೂ ಆಶ್ಚರ್ಯದೊಂದಿಗೆ ದಿಗ್ಭ್ರಮೆಗೊಂಡಿದ್ದಾರೆ. ಇನ್ನೂ ವಿಚಿತ್ರವೆಂದರೆ ಸುಮಾರು ಒಂದು ಗಂಟೆಯ ಬಳಿಕ ಆ ಕೋತಿ ಯಾವ ಸ್ಥಳದಿಂದಲೇ ಮೊಬೈಲ್​ ಎತ್ತಿಕೊಂಡು ಹೋಗಿತ್ತೋ, ಮತ್ತೆ ಅದೇ ಸ್ಥಳದಲ್ಲಿ ಬಿಟ್ಟು ಹೋಗಿದೆ.

ಇದನ್ನೂ ಓದಿ:ಒಟಿಟಿ, ವೆಬ್​​ ಚಾನೆಲ್​ಗಳಿಗೂ ಸೆನ್ಸಾರ್​ ಮಾಡಿ: ರಾಜ್ಯಸಭೆಯಲ್ಲಿ ಹೀಗೊಂದು ಚರ್ಚೆ

ABOUT THE AUTHOR

...view details