ಕರ್ನಾಟಕ

karnataka

ETV Bharat / bharat

ದ್ವೇಷವಲ್ಲ ಇದು ವಾನರ ಪ್ರೀತಿ.. ನಾಯಿ ಮರಿಗೆ ಹಾಲುಣಿಸಿ ಒಡಲಲ್ಲಿಟ್ಟುಕೊಂಡು ತಿರುಗಾಡುತ್ತಿರುವ ಕೋತಿ! - ನಾಯಿ ಮರಿಯನ್ನು ಎತ್ತುಕೊಂಡು ತಿರುಗಾಡುತ್ತಿರುವ ಕೋತಿ

Monkey Carrying Puppy : ಉತ್ತರಪ್ರದೇಶದ ಕುಶಿನಗರ ಜಿಲ್ಲೆಯ ಪದ್ರೌನಾದಲ್ಲಿ ಮಂಗವೊಂದು ನಾಯಿ ಮರಿ ಎತ್ತಿಕೊಂಡು ಅಲೆದಾಡುತ್ತಿದೆ. ನಾಯಿ ಮರಿಗೆ ಹಾಲುಣಿಸಿ ಕೋತಿ ಆರೈಕೆ ಮಾಡುತ್ತಿದೆ ಎಂದು ಇಲ್ಲಿನ ಸ್ಥಳೀಯರು ಹೇಳುತ್ತಾರೆ. ಸದ್ಯ ವಿಡಿಯೋ ವೈರಲ್‌ ಆಗಿದೆ.

monkey carrying puppy on his chest in uttarapradesh
ದ್ವೇಷವಲ್ಲ ವಾನರ ತಾಯಿ ಪ್ರೀತಿ...ನಾಯಿ ಮರಿಗೆ ಹಾಲುಣಿಸಿ ಒಡಲಲ್ಲಿಟ್ಟುಕೊಂಡು ತಿರುಗಾಡುತ್ತಿರುವ ಕೋತಿ!

By

Published : Dec 20, 2021, 3:58 PM IST

ಕುಶಿನಗರ (ಉತ್ತರಪ್ರದೇಶ) :ಮಹಾರಾಷ್ಟ್ರದ ಬೀಡ್​ ಜಿಲ್ಲೆಯಲ್ಲಿ ಮಂಗಗಳ ಮರಿಯನ್ನು ನಾಯಿಗಳು ಸಾಯಿಸಿದ್ದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ನಾಯಿ ಮರಿಗಳನ್ನು ಮರ ಅಥವಾ ಕಟ್ಟಡದ ಮೇಲೆ ಹೊತ್ತೊಯ್ದು ಅಲ್ಲಿಂದ ನೆಲಕ್ಕೆ ಬಿಟ್ಟು ಸಾಯಿಸುವ ಸುದ್ದಿ ದೇಶದಲ್ಲಿ ಅಚ್ಚರಿಗೆ ಕಾರಣವಾಗಿತ್ತು. ಮಂಗಗಳಿಗೆ ಈ ರೀತಿಯ ದ್ವೇಷ ಇರುತ್ತಾ ಅಂತಾ ಹಲವರು ಪ್ರಶ್ನಿಸಿದ್ದರು. ಆದರೆ, ಉತ್ತರ ಪ್ರದೇಶದಲ್ಲಿ ಮಂಗವೊಂದು ಇದಕ್ಕೆ ತದ್ವಿರುದ್ಧವಾಗಿ ನಡೆದುಕೊಂಡಿದೆ.

ದ್ವೇಷವಲ್ಲ ವಾನರ ತಾಯಿ ಪ್ರೀತಿ.. ನಾಯಿ ಮರಿಗೆ ಹಾಲುಣಿಸಿ ಒಡಲಲ್ಲಿಟ್ಟುಕೊಂಡು ತಿರುಗಾಡುತ್ತಿರುವ ಕೋತಿ!

ಉತ್ತರ ಪ್ರದೇಶದ ಕುಶಿನಗರ ಜಿಲ್ಲೆಯ ಪದ್ರೌನಾ ನಗರದಲ್ಲಿ ಮಂಗವೊಂದು ನಾಯಿ ಮರಿಯನ್ನು ಎತ್ತಿಕೊಂಡು ಅಲೆದಾಡುತ್ತಿದೆ. ಈ ಕೋತಿ ನಾಯಿ ಮರಿಗೆ ಹಾಲುಣಿಸಿ ಆರೈಕೆ ಮಾಡುತ್ತಿದೆ ಎಂದು ಸ್ಥಳೀಯರು ಹೇಳುತ್ತಾರೆ.

ಸದ್ಯ ನಾಯಿ ಮರಿಯನ್ನು ಎತ್ತಿಕೊಂಡು ಮಂಗ ತಿರುಗಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ವೈರಲ್ ಆಗಿದ್ದು, ಮೆಚ್ಚುಗೆ ವ್ಯಕ್ತವಾಗಿದೆ.

ಇದನ್ನೂ ಓದಿ:Monkeys V/s Dogs : 300ಕ್ಕೂ ಹೆಚ್ಚು ನಾಯಿಮರಿಗಳನ್ನ ಕೊಂದು ಪ್ರತೀಕಾರ ತೀರಿಸಿಕೊಂಡ ಮಂಗಗಳು

For All Latest Updates

TAGGED:

ABOUT THE AUTHOR

...view details