ಕರ್ನಾಟಕ

karnataka

ETV Bharat / bharat

ಅಕ್ರಮ ಹಣ ವರ್ಗಾವಣೆ ಪ್ರಕರಣ: ಬರೋಬ್ಬರಿ 91 ಕೆಜಿ ಚಿನ್ನ, 340 ಕೆಜಿ ಬೆಳ್ಳಿ ಜಪ್ತಿ ಮಾಡಿದ ಇಡಿ - ಚಿನ್ನ ಜಪ್ತಿ ಮಾಡಿದ ಇಡಿ

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ 47.76 ಕೋಟಿ ರೂಪಾಯಿ ಮೌಲ್ಯದ ಚಿನ್ನ ಹಾಗ ಬೆಳ್ಳಿಯನ್ನು ಇಡಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

money-laundering-probe-ninety-one-kg-gold-seized-by-ed-in-mumbai
ಅಕ್ರಮ ಹಣ ವರ್ಗಾವಣೆ ಪ್ರಕರಣ: 91 ಕೆಜಿ ಚಿನ್ನ, 340 ಕೆಜಿ ಬೆಳ್ಳಿ ಜಪ್ತಿ ಮಾಡಿದ ಇಡಿ

By

Published : Sep 14, 2022, 8:48 PM IST

ಮುಂಬೈ (ಮಹಾರಾಷ್ಟ್ರ):ಮಹಾರಾಷ್ಟ್ರದ ಮುಂಬೈನಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿರುವ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು, ಬರೋಬ್ಬರಿ 91 ಕೆಜಿ 500 ಗ್ರಾಂ ಚಿನ್ನದ ಗಟ್ಟಿಗಳು ಹಾಗ 340 ಕೆಜಿ ಬೆಳ್ಳಿಯನ್ನು ಜಪ್ತಿ ಮಾಡಿದ್ದಾರೆ.

ಪರೇಖ್ ಅಲ್ಯುಮಿನೆಕ್ಸ್ ಲಿಮಿಟೆಡ್ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಕ್ಷಾ ಬುಲಿಯನ್ ಮತ್ತು ಕ್ಲಾಸಿಕ್ ಮಾರ್ಬಲ್ಸ್​​ಗೆ ಸೇರಿದ ನಾಲ್ಕು ಕಡೆಗಳಲ್ಲಿ ಇಡಿ ಅಧಿಕಾರಿಗಳು ದಾಳಿ ಮಾಡಿ, ಇಷ್ಟೊಂದು ಚಿನ್ನ ಮತ್ತು ಬೆಳ್ಳಿಯನ್ನು ವಶಕ್ಕೆ ಪಡೆದಿದ್ದಾರೆ. ಇದರ ಒಟ್ಟಾರೆ ಮೌಲ್ಯವು 47.76 ಕೋಟಿ ರೂಪಾಯಿಗಳಾಗಿದೆ ಎಂದು ಇಡಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

2018ರ ಮಾರ್ಚ್ ತಿಂಗಳಲ್ಲಿ ಪರೇಖ್ ಅಲ್ಯುಮಿನೆಕ್ಸ್ ಲಿಮಿಟೆಡ್ ವಿರುದ್ಧ ಮನಿ ಲಾಂಡರಿಂಗ್ ಪ್ರಕರಣವನ್ನು ಇಡಿ ದಾಖಲಿಸಿದೆ, ಕಂಪನಿಯು ಬ್ಯಾಂಕ್‌ಗಳನ್ನು ವಂಚಿಸಿದೆ ಮತ್ತು 2,296 ಕೋಟಿ ರೂಪಾಯಿಗಳ ಸಾಲವನ್ನು ಪಡೆದುಕೊಂಡಿದೆ ಎಂದು ಇಡಿ ದೂರಿದೆ. ಇದಾದ ನಂತರ 2019ರಲ್ಲಿ ಇದೇ ಪ್ರಕರಣದಲ್ಲಿ ಇಡಿ 205 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿತ್ತು.

ಇದನ್ನೂ ಓದಿ:ಭುವನೇಶ್ವರದಲ್ಲಿ ಸಿಮ್ ಬಾಕ್ಸ್ ದಂಧೆ: ಪತ್ತೆ ಹಚ್ಚಿದ ಸೈಬರ್ ಪೊಲೀಸರು

ABOUT THE AUTHOR

...view details