ಕರ್ನಾಟಕ

karnataka

ETV Bharat / bharat

ಕೋಟ್ಯಂತರ ರೂ. ನರೇಗಾ ಹಣ ದುರ್ಬಳಕೆ ಪ್ರಕರಣ.. ಜಾರ್ಖಂಡ್​ ಗಣಿ ಕಾರ್ಯದರ್ಶಿ ಇ.ಡಿ. ವಶಕ್ಕೆ - ಜಾರ್ಖಂಡ್​ನಲ್ಲಿ ಇಲಾಖೆ ಕಾರ್ಯದರ್ಶಿಯಿಂದಲೇ ನರೇಗಾ ಹಣ ದುರ್ಬಳಕೆ

ಜಾರ್ಖಂಡ್​ ಗಣಿ ಇಲಾಖೆಯ ಕಾರ್ಯದರ್ಶಿಯಿಂದಲೇ ನರೇಗಾ ಯೋಜನೆ ಹಣವನ್ನು ದುರ್ಬಳಕೆ ಮಾಡಿಕೊಂಡ ಆರೋಪದ ಮೇಲೆ ಅಧಿಕಾರಿಯನ್ನು ಬಂಧಿಸಿ, 5 ದಿನ ವಶಕ್ಕೆ ಪಡೆಯಲಾಗಿದೆ.

money-laundering
ಜಾರ್ಖಂಡ್​ ಗಣಿ ಕಾರ್ಯದರ್ಶಿ

By

Published : May 12, 2022, 3:10 PM IST

ರಾಂಚಿ(ಜಾರ್ಖಂಡ್):ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಮನರೇಗಾ ಯೋಜನೆಯ ಹಣವನ್ನು ದುರ್ಬಳಕೆ ಮಾಡಿಕೊಂಡ ಆರೋಪದ ಮೇಲೆ ಜಾರ್ಖಂಡ್​ ಗಣಿ ಇಲಾಖೆ ಕಾರ್ಯದರ್ಶಿ ಪೂಜಾ ಸಿಂಘಾಲ್​(ಐಎಎಸ್​​​ ಅಧಿಕಾರಿ)ರನ್ನು ಜಾರಿ ನಿರ್ದೇಶನಾಲಯ ಬುಧವಾರ ಬಂಧಿಸಿದೆ. ಇವರ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಾಗಿದ್ದು, ಸಿಂಘಾಲ್​ರನ್ನು 5 ದಿನ ಇಡಿ ವಶಕ್ಕೆ ಪಡೆದಿದೆ.

ಮನರೇಗಾ ಯೋಜನೆಯ ಅನುದಾನವನ್ನು ದರ್ಬಳಕೆ ಮಾಡಿಕೊಂಡಿರುವ ಸಿಂಘಾಲ್​ ಹಾಗೂ ಆಕೆಯ ಪತಿ ಅಭಿಷೇಕ್​ ಝಾ ಖಾಸಗಿ ಆಸ್ಪತ್ರೆ ನಿರ್ಮಾಣಕ್ಕೆ ಈ ಹಣವನ್ನು ವಿನಿಯೋಗಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ವಾಟ್ಸ್​ಆ್ಯಪ್​ ಚಾಟ್​ಗಳ ಆಧಾರದ ಮೇಲೆ ಇಡಿ ಅಧಿಕಾರಿಗಳು ಬಂಧಿಸಿದ್ದಾರೆ.

ಸಿಂಘಾಲ್​ ಅವರ ಪತಿ ಅಭಿಷೇಕ್​ ಝಾ ಅವರ ಒಡೆತನದಲ್ಲಿ ನಿರ್ಮಾಣವಾಗುತ್ತಿರುವ ಪಲ್ಸ್ ಖಾಸಗಿ ಆಸ್ಪತ್ರೆಗಾಗಿ ಜಮೀನು ಖರೀದಿಸಲು ಸರೋಗಿ ಬಿಲ್ಡರ್ಸ್ ಮತ್ತು ಪ್ರಮೋಟರ್ಸ್ ಲಿಮಿಟೆಡ್‌ಗೆ ಭಾರಿ ಮೊತ್ತವನ್ನು ಪಾವತಿಸಿರುವುದು ಸಿಂಘಾಲ್ ಅವರ ಫೋನ್‌ನ ವಾಟ್ಸ್​ಆ್ಯಪ್ ಸಂಭಾಷಣೆಗಳಿಂದ ತಿಳಿದುಬಂದಿದೆ. ಸರೋಗಿ ಬಿಲ್ಡರ್ಸ್‌ಗೆ ಚೆಕ್, ಆರ್‌ಟಿಜಿಎಸ್, ನಗದು ಮೂಲಕ ಎಷ್ಟು ಪಾವತಿಸಲಾಗಿದೆ ಎಂಬ ಮಾಹಿತಿಯನ್ನು ಇಡಿ ಸಂಗ್ರಹಿಸುತ್ತಿದೆ.

ಕೋಲ್ಕತ್ತಾದಿಂದ ಸಿಂಘಾಲ್​ ಪತಿ ಅಭಿಷೇಕ್​ ಝಾ ಸಿಎಸ್‌ಎಸ್‌ಡಿ ಯಂತ್ರವನ್ನು ಖರೀದಿಸಿದ್ದಾರೆ. ಅದಕ್ಕಾಗಿ ನಕಲಿ ಬಿಲ್ ತಯಾರಿಸಿದೆ. ಆಸ್ಪತ್ರೆ ನಿರ್ಮಾಣದ ವೇಳೆ ಸಿಂಘಾಲ್ ಮತ್ತು ಅಭಿಷೇಕ್​ ಝಾ ಅವರಿಂದ ಹಲವು ಖಾತೆಗಳಿಗೆ ಹಣ ವರ್ಗಾವಣೆ ಮಾಡಲಾಗಿದೆ.

ಸಹೋದರರ ಖಾತೆಯೂ ಬಳಕೆ:ಇನ್ನು ಭಾರಿ ಪ್ರಮಾಣದ ಹಣವನ್ನು ವರ್ಗಾಯಿಸಲು ಸಿಂಘಾಲ್​ ತಮ್ಮ ಸಹೋದರರು ಸೇರಿದಂತೆ 13 ಇತರರ ಖಾತೆಗಳನ್ನೂ ಬಳಸಿಕೊಂಡಿದ್ದಾರೆ. ಎಲ್ಲರಿಗೂ ಪ್ರತ್ಯೇಕವಾಗಿ ಸಮನ್ಸ್​ ಜಾರಿ ಮಾಡಲಾಗಿದೆ.

ಓದಿ:ಇದೇ ವಾರ ನೂತನ ಕ್ಯಾಬಿನೆಟ್, ಹೊಸ ಪ್ರಧಾನಿ ನೇಮಕ: ಶ್ರೀಲಂಕಾ ಅಧ್ಯಕ್ಷ ರಾಜಪಕ್ಸ ಭರವಸೆ

ABOUT THE AUTHOR

...view details