ಜೈಪುರ (ಒಡಿಶಾ): ಕುದುರೆ ಏರಿ ಸವಾರಿ ಮಾಡ್ತಿರೋ ಈಕೆ ಯಾವುದೆ ಸಿನಿಮಾದಲ್ಲಿಯೋ, ಧಾರವಾಹಿಯಲ್ಲೋ ನಟಿಸುತ್ತಿಲ್ಲ. ಬದಲಿಗೆ ಇದೆಲ್ಲಾ ಆಕೆಯ ನಿತ್ಯದ ಕೆಲಸ, ಬುಲೆಟ್ ಏರಿ ಹೊರಟರೆ ಯಾವ ರೇಸರ್ಗಿಂತಲೂ ಈಕೆ ಕಡಿಮೆ ಇಲ್ಲ. ಇದಿಷ್ಟೇ ಅಲ್ಲ ಟ್ರ್ಯಾಕ್ಟರ್, ಟ್ರಕ್ನಂತಹ ದೊಡ್ಡ ವಾಹನ ಸಹ ಓಡಿಸುವ ಗಟ್ಟಿಗಿತ್ತಿ ಈಕೆ. ಒಡಿಶಾದ ಜೈಪುರ ಜಿಲ್ಲೆಯ ಜಹಾಲ್ ಎಂಬ ಪುಟ್ಟ ಹಳ್ಳಿಯ ಧೀರೆ ಈ ಮೊನಾಲಿಶಾ ಭದ್ರಾ. ಈ ಮಹಿಳೆಯ ಇಂತಹ ವಿಡಿಯೋಗಳೀಗ ಇಂಟರ್ನೆಟ್ನಲ್ಲಿ ಸೆನ್ಸೇಷನ್ ಹುಟ್ಟುಹಾಕಿವೆ.
ವಿಶೇಷ ಅಂದ್ರೆ ಮೊನಾಲಿಶಾ ಸಾಂಪ್ರದಾಯಿಕ ಸೀರೆ ಉಟ್ಟುಕೊಂಡೆ ಈ ಎಲ್ಲಾ ಕೆಲಸ ಮಾಡುತ್ತಾರೆ. ಆಕೆಯ ಎಲ್ಲಾ ವಿಡಿಯೋಗಳಲ್ಲಿಯೂ ಸಾಂಪ್ರದಾಯಿಕ ಉಡುಗೆಯಲ್ಲೆ ಕಾಣಿಸಿಕೊಂಡಿದ್ದಾರೆ. ಬೈಕ್, ಕುದುರೆ ರೈಡ್ ಮಾಡುವಾಗಲೂ ಸೀರೆ ಉಟ್ಟಿರುವುದು ಎಲ್ಲರ ಗಮನ ಸೆಳೆದಿದೆ.
ಪುಟ್ಟ ಹಳ್ಳಿಯ ಸೀರೆಯುಟ್ಟ ನಾರಿಯ ಸಾಹಸ ಆದ್ರೆ ಇದೆಲ್ಲಾ ಆರಂಭವಾಗಿದ್ದು ಒಂದು ಸಣ್ಣ ವಿಡಿಯೋದಿಂದಂತೆ. ಒಮ್ಮೆ ರಸ್ತೆ ಬದಿಯ ಕೋತಿಗಳಿಗೆ ಆಹಾರ ನೀಡುವಾಗ ಮೊನಾಲಿಶಾ ಪತಿ ಅದನ್ನು ವಿಡಿಯೋ ಮಾಡಿ ಯೂಟ್ಯೂಬ್ಗೆ ಅಪ್ಲೋಡ್ ಮಾಡಿದ್ದಾರೆ. ಬಳಿಕ ಈ ವಿಡಿಯೋ ವೈರಲ್ ಆಗಿದರ ಜೊತೆ ಒಂದಿಷ್ಟು ಹೆಸರು ತಂದು ಕೊಟ್ಟಿತು. ಅನಂತರ ಒಂದೊಂದೆ ವಿಡಿಯೋವನ್ನ ಅಪ್ಲೋಡ್ ಮಾಡಲು ಮುಂದಾಗಿದ್ದು, ಈಗ ತಿಂಗಳಿಗೆ ಲಕ್ಷ ಲಕ್ಷ ಹಣ ಗಳಿಸುತ್ತಿದ್ದಾರೆ. ಅಲ್ಲದೆ ತಮ್ಮ ಯೂಟ್ಯೂಬ್ ಚಾನಲ್ಗೆ ಈಗ 22 ಲಕ್ಷ ಸಬ್ಸ್ಕ್ರೈಬರ್ ಇದ್ದು, ಒಟ್ಟು 76 ಕೋಟಿ ವೀವ್ಸ್ ಪಡೆದುಕೊಂಡಿದೆ.
ಸೀರೆ ಉಟ್ಟಿರುವ ನಾರಿಯನ್ನ ಹೊರ ಕಳುಹಿಸಲು ಹಿಂದು ಮುಂದು ನೋಡುವ ಈ ಪುಟ್ಟ ಹಳ್ಳಿಯಲ್ಲಿ ಮೊನಾಲಿಶಾ ಇತರರಿಗೆ ಮಾದರಿಯಾಗಿದ್ದಾರೆ. ಸೀರೆ ಉಟ್ಟುಕೊಂಡೆ ಸಾಹಸಿಯಾಗಿದ್ದಾರೆ. ಇಷ್ಟೇಲ್ಲಾ ಮಾಡುತ್ತಿರೋ ಮೊನಾಲಿಶಾ ಭವಿಷ್ಯದಲ್ಲಿ ಹೆಲಿಕಾಪ್ಟರ್ ಹಾರಿಸುವ ಜನಸು ಹೊಂದಿದ್ದಾರೆ. ಅವರ ವಿಡಿಯೋಗಳು ಯೂಟ್ಯೂಬ್ನಲ್ಲಿ ಟ್ರೆಂಡ್ ಆಗುತ್ತಿರುವುದರಿಂದ ಅವರ ಹಳ್ಳಿಯೂ ಸುತ್ತ ಫೇಮಸ್ ಆಗ್ತಿದೆ.