ಜಮುಯಿ:ಅತ್ಯಂತ ನಾಚಿಕೆಗೇಡಿನ ಅಪರಾಧ ಪ್ರಕರಣವೊಂದು ಬಿಹಾರದ ಜಮುಯಿಯಲ್ಲಿ ಬೆಳಕಿಗೆ ಬಂದಿದೆ. ಇಲ್ಲಿನ ಖೈರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶಾಲೆಯಿಂದ ಮನೆಗೆ ಮರಳುತ್ತಿದ್ದ ಬಾಲಕಿಯೊಬ್ಬಳ ಮೇಲೆ ಐವರು ಕಾಮುಕ ಯುವಕರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ದುಷ್ಕೃತ್ಯಕ್ಕೊಳಗಾದ ಬಾಲಕಿ ಮೂರನೇ ತರಗತಿಯಲ್ಲಿ ಓದುತ್ತಿದ್ದಾಳೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ:ಅಪ್ರಾಪ್ತೆ ಮೇಲೆ ಪೊಲೀಸ್ ಅಧಿಕಾರಿಯಿಂದಲೇ ಅತ್ಯಾಚಾರ
ವಿವರ: ಬಾಲಕಿ ಎಂದಿನಂತೆ ಬುಧವಾರ ಶಾಲೆ ಮುಗಿಸಿ ಮನೆಗೆ ಬರುತ್ತಿದ್ದಳು. ಇದೇ ಸಂದರ್ಭದಲ್ಲಿ ಗ್ರಾಮದ ಐವರು ಯುವಕರು ಎದುರಾಗಿದ್ದಾರೆ. ಇವರನ್ನು ಕಂಡ ಆಕೆಗೆ ಅನುಮಾನ ಮೂಡಿದೆ. ಬಾಲಕಿಯ ಬಾಯಿ ಮುಚ್ಚಿ ಕಾಡಿನೊಳಗೆ ಕರೆದೊಯ್ದ ದುಷ್ಟರು ಒಬ್ಬರಾದ ಮೇಲೊಬ್ಬರಂತೆ ಅತ್ಯಾಚಾರ ಎಸಗಿದರು. ಇದರಿಂದ ಬಾಲಕಿ ಪ್ರಜ್ಞೆ ತಪ್ಪಿದ್ದು, ಕಾಡಿನಲ್ಲೇ ಬಿಟ್ಟು ಆರೋಪಿಗಳು ಪರಾರಿಯಾಗಿದ್ದರು.