ವಾರಾಣಸಿ:ಕಾಶಿ ಹಿಂದೂ ವಿಶ್ವವಿದ್ಯಾನಿಲಯದಲ್ಲಿ (IIT-BHU) ವಿದ್ಯಾರ್ಥಿನಿಯರ ಮೇಲಿನ ಮತ್ತೊಂದು ದೌರ್ಜನ್ಯ ಪ್ರಕರಣ ಬೆಳಕಿಗೆ ಬಂದಿದೆ. ಛತ್ ಪೂಜೆ ನೋಡಲು ಹೋಗಿದ್ದ ವಿದ್ಯಾರ್ಥಿನಿಯನ್ನು ಅನುಚಿತವಾಗಿ ಮುಟ್ಟಿ ಕಿರುಕುಳ ನೀಡಿದ ಆರೋಪದ ಮೇಲೆ ವಿವಿ ಬಸ್ ಚಾಲಕನನ್ನು ಕೆಲಸದಿಂದ ವಜಾ ಮಾಡಲಾಗಿದೆ. ಈ ಬಗ್ಗೆ ತನಿಖೆ ನಡೆಸಲು ಆಡಳಿತ ಮಂಡಳಿ ಸೂಚಿಸಿದೆ.
ಕಾಲೇಜಿನಿಂದ 2 ಕಿಮೀ ದೂರದಲ್ಲಿ ಛತ್ ಪೂಜೆ ಆಯೋಜಿಸಲಾಗಿತ್ತು. ಅದನ್ನು ನೋಡಲು ವಿದ್ಯಾರ್ಥಿನಿ ಬಸ್ ಚಾಲಕನ ಬೈಕ್ ಮೇಲೆ ತೆರಳಿದ್ದಾಳೆ. ಬಳಿಕ ಆತನ ಬೈಕ್ನಲ್ಲೇ ವಾಪಸ್ ಬರುವಾಗ ಚಾಲಕ ವಿದ್ಯಾರ್ಥಿನಿಯ ಜೊತೆಗೆ ಅನುಚಿತವಾಗಿ ನಡೆದುಕೊಂಡಿದ್ದಾನೆ. ಯುವತಿ ಕಾಲೇಜಿನ ಬಳಿ ಬಂದ ಕೂಡಲೇ ಬೈಕ್ನಿಂದ ಜಿಗಿದಿದ್ದಾಳೆ. ಬಳಿಕ ನಡೆದ ವೃತ್ತಾಂತವನ್ನು ಸಹಪಾಠಿಗಳ ಬಳಿ ಹೇಳಿಕೊಂಡಿದ್ದು, ಈ ಬಗ್ಗೆ ಪ್ರಿನ್ಸಿಪಾಲ್ಗೆ ದೂರು ನೀಡಲಾಗಿದ್ದು, ಚಾಲಕನನ್ನು ಕೆಲಸದಿಂದ ಕಿತ್ತು ಹಾಕಲಾಗಿದೆ.
ಪ್ರಕರಣದ ವಿವರ:ಐಐಟಿ ಬಿಎಚ್ಯು ಎಂದೇ ಹೆಸರಾದ ಕಾಶಿ ಹಿಂದೂ ವಿಶ್ವವಿದ್ಯಾನಿಲಯದಲ್ಲಿ ಯುವತಿಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿರುವ ಆರೋಪ ಕೇಳಿ ಬಂದಿದೆ. ನವೆಂಬರ್ 19 ರಂದು ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಬಿಕಾಂ ನಲ್ಲಿ ಅಧ್ಯಯನ ನಡೆಸುತ್ತಿರುವ ಯುವತಿಯೊಬ್ಬಳು ತರಗತಿ ಮುಗಿಸಿಕೊಂಡು ಛತ್ ಪೂಜೆ ನೋಡಲು ಕಾಲೇಜಿನ ಗೇಟ್ ಬಳಿ ನಿಂತಿದ್ದಳು. ಈ ವೇಳೆ ಕಾಲೇಜಿನ ಬಸ್ ಚಾಲಕ ಬೈಕ್ ಮೇಲೆ ಬಂದಿದ್ದಾನೆ.
ತನ್ನನ್ನು ಛತ್ತ ಪೂಜಾ ಸ್ಥಳಕ್ಕೆ ಕರೆದೊಯ್ಯುವಂತೆ ಯುವತಿ ಕೋರಿದ್ದಾಳೆ. ಬಳಿಕ ಪೂಜಾ ಕಾರ್ಯಕ್ರಮ ಮುಗಿಸಿಕೊಂಡು ವಾಪಸ್ ಯುವತಿ ಅದೇ ಚಾಲಕನ ಬೈಕ್ ಮೇಲೆಯೇ ವಾಪಸ್ ಬಂದಿದ್ದಾಳೆ. ಈ ವೇಳೆ ಚಾಲಕ ಯುವತಿಯ ಜೊತೆ ಕೆಟ್ಟದಾಗಿ ನಡೆದುಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ. ಕಾಲೇಜು ಬಳಿ ಬಂದ ತಕ್ಷಣ ಯುವತಿ ಬೈಕ್ನಿಂದ ಜಿಗಿದು ತಪ್ಪಿಸಿಕೊಂಡಿದ್ದಾಳೆ.
ಇದನ್ನೆಲ್ಲಾ ಯುವತಿ ತನ್ನ ಸ್ನೇಹಿತರಿಗೆ ತಿಳಿಸಿದ್ದಾರೆ. ಕೋಪಗೊಂಡ ಸಹಪಾಠಿಗಳು ಈ ಬಗ್ಗೆ ಪ್ರಿನ್ಸಿಪಾಕ್ಗೆ ದೂರು ನೀಡಿದ್ದಾರೆ. ಜೊತೆಗೆ ಆಡಳಿತ ಮಂಡಳಿಗೂ ಮಾಹಿತಿ ನೀಡಲಾಗಿದೆ. ವಿಚಾರಣೆ ನಡೆಸಿದ ಮಂಡಳಿ ಆರೋಪಿ ಚಾಲಕನನ್ನು ಕೆಲಸದಿಂದ ವಜಾ ಮಾಡಿ ಆದೇಶಿಸಿದೆ. ಯುವತಿಯ ಹೇಳಿಕೆ ದಾಖಲಿಸಿಕೊಂಡು ತನಿಖಾ ತಂಡವನ್ನೂ ರಚಿಸಲಾಗಿದೆ. ವಿದ್ಯಾರ್ಥಿನಿ ತನ್ನ ಗುರುತನ್ನು ಬಹಿರಂಗಪಡಿಸದಂತೆ ಕೇಳಿಕೊಂಡಿದ್ದಾಳೆ.
ಕಾಲೇಜಿನ ಹೊರಗೆ ಘಟನೆ:ಘಟನೆ ಕಾಲೇಜು ಕ್ಯಾಂಪಸ್ನ ಹೊರಗೆ ನಡೆದಿದೆ. ಛತ್ ಪೂಜೆ ನೋಡಿಕೊಂಡು ವಾಪಸ್ ಬರುವಾಗ ವಿದ್ಯಾರ್ಥಿನಿಗೆ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ತನಿಖೆ ನಡೆಸಲಾಗುತ್ತಿದೆ. ಬಸ್ ಚಾಲಕನನ್ನು ವಜಾ ಮಾಡಲಾಗಿದೆ. ವಿದ್ಯಾರ್ಥಿನಿ ಇದುವರೆಗೂ ಪೊಲೀಸರಿಗೆ ದೂರು ನೀಡಿಲ್ಲ. ಮಹಿಳಾ ಅಧಿಕಾರಿಯೊಬ್ಬರು ವಿದ್ಯಾರ್ಥಿಗೆ ಕೌನ್ಸೆಲಿಂಗ್ ಮಾಡುತ್ತಿದ್ದಾರೆ. ಈ ರೀತಿಯ ದೌರ್ಜನ್ಯ ಬಸ್ ನಲ್ಲಿ ನಡೆದ ಬಗ್ಗೆಯೂ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಲಾಗುತ್ತಿದೆ. ತಂಡ ರಚಿಸಲಾಗಿದೆ ಎಂದು ಕಾಲೇಜಿನ ಪ್ರಿನ್ಸಿಪಾಲ್ ಮಾಹಿತಿ ನೀಡಿದರು.
ಇದನ್ನೂ ಓದಿ:ಬಾಲಕಿಯನ್ನು ಬಸ್ಸಿನಲ್ಲಿಯೇ ಮರೆತ ಶಬರಿಮಲೆ ಯಾತ್ರಿಕರ ಗುಂಪು: ಬಾಲಕಿ ಸಿಕ್ಕಿದ್ದು ಹೇಗೆ?