ಕರ್ನಾಟಕ

karnataka

ETV Bharat / bharat

ನಿರುದ್ಯೋಗವು ತಮಿಳುನಾಡಿನಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ: ವೀರಪ್ಪ ಮೊಯ್ಲಿ - ನಿರುದ್ಯೋಗ ಇತ್ತೀಚಿನ ಸುದ್ದಿ

ತಮಿಳುನಾಡಿನಲ್ಲಿರುವ ನಿರುದ್ಯೋಗ ಸಮಸ್ಯೆಯ ಬಗ್ಗೆ ಕಾಂಗ್ರೆಸ್ ಹಿರಿಯ ಮುಖಂಡ ವೀರಪ್ಪ ಮೊಯ್ಲಿ ವಾಗ್ದಾಳಿ ನಡೆಸಿದ್ದಾರೆ.

Veerappa Moily
ವೀರಪ್ಪ ಮೊಯ್ಲಿ

By

Published : Mar 25, 2021, 11:39 AM IST

ಚೆನ್ನೈ(ತಮಿಳುನಾಡು): ರಾಜ್ಯದ ನಿರುದ್ಯೋಗದ ಬಗ್ಗೆ ಕಾಂಗ್ರೆಸ್ ಹಿರಿಯ ಮುಖಂಡ ವೀರಪ್ಪ ಮೊಯ್ಲಿ ಎಐಎಡಿಎಂಕೆ ನೇತೃತ್ವದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ-ಕಾಂಗ್ರೆಸ್ ಮೈತ್ರಿ ವಿಜಯಶಾಲಿಯಾಗಲಿದೆ ಎಂದು ಹೇಳಿದ್ದಾರೆ.

"ಪ್ರತಿ ವರ್ಷ ಪದವಿ ಮುಗಿದ ನಂತರ 5 ಲಕ್ಷ ಪದವೀಧರರು ಹೊರ ಬರುತ್ತಿದ್ದಾರೆ. ಉದ್ಯೋಗ ಸೃಷ್ಟಿಯಿಲ್ಲದ ಕಾರಣ ಅವರೆಲ್ಲರೂ ಎಐಎಡಿಎಂಕೆ ವಿರುದ್ಧ ಇದ್ದಾರೆ. ನಿರುದ್ಯೋಗವು ತಮಿಳುನಾಡಿನಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿದೆ" ಎಂದು ಅವರು ಹೇಳಿದರು.

"ನಾವು 40 ಸ್ಥಾನಗಳಲ್ಲಿ 39 ಸ್ಥಾನಗಳನ್ನು ಪಡೆದ ಸಂಸತ್ ಚುನಾವಣೆಯಂತೆ ಕಾಂಗ್ರೆಸ್ ಮತ್ತು ಡಿಎಂಕೆ ಮೈತ್ರಿ ಖಂಡಿತವಾಗಿಯೂ ಚುನಾವಣೆಯಲ್ಲಿ ಗೆಲ್ಲುತ್ತೇವೆ. ತಮಿಳುನಾಡು ಜನರ ಕೋಪ ಈಗ ಎಐಎಡಿಎಂಕೆ ಮತ್ತು ಬಿಜೆಪಿ ವಿರುದ್ಧ ಹೆಚ್ಚಾಗುತ್ತದೆ" ಎಂದು ಹೇಳಿದರು.

ಇದನ್ನು ಓದಿ: ಕಡ್ಡಾಯವಾಗಿ ಸಾಫ್ಟ್‌ವೇರ್ ಪ್ರೋಗ್ರಾಂ ಬಳಸಿ ಆಡಿಟ್ ಮಾಡುವಂತೆ ಕಂಪನಿಗಳಿಗೆ ಆದೇಶ

ಏಪ್ರಿಲ್ 6 ರಂದು ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ಒಂದೇ ಹಂತದಲ್ಲಿ ನಡೆಯಲಿದ್ದು, ಮೇ 2 ರಂದು ಮತ ಎಣಿಕೆ ನಡೆಯಲಿದೆ. ಕಾಂಗ್ರೆಸ್-ಡಿಎಂಕೆ ಮತ್ತು ಬಿಜೆಪಿ-ಎಐಎಡಿಎಂಕೆ ಮೈತ್ರಿ ರಾಜ್ಯದೊಂದಿಗೆ 234 ಸ್ಥಾನಗಳಿಗೆ ಮತದಾನ ನಡೆಯಲಿದೆ.

ABOUT THE AUTHOR

...view details