ಬಟಿಂಡಾ(ಪಂಜಾಬ್):1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಗುವುದರ ಜೊತೆಗೆ ಇಂಡಿಯಾ- ಪಾಕಿಸ್ತಾನ ವಿಭಜನೆಯೂ ಆಗಿತ್ತು. ಆ ಸಂದರ್ಭದಲ್ಲಿ ಅನೇಕ ಕುಟುಂಬಗಳೂ ದೂರವಾಗಿದ್ದವು. ಈ ವೇಳೆ, ಬೇರೆಯಾದ ಕುಟುಂಬಗಳಲ್ಲಿ ಮೊಹಮ್ಮದ್ ಸಾದಿಕ್ ಅವರ ಕುಟುಂಬವೂ ಒಂದು. ಇದೀಗ 74 ವರ್ಷಗಳ ಬಳಿಕ ಕುಟುಂಬಸ್ಥರು ಮತ್ತೆ ಒಂದು ಗೂಡಿದ್ದಾರೆ.
ಮೊಹಮ್ಮದ್ ಸಾದಿಕ್ ಅವರ ಸಹೋದರ ಸಿಕ್ಕಾ ಖಾನ್ ಅವರು ಇಂಡಿಯಾ - ಪಾಕಿಸ್ತಾನ ವಿಭಜನೆಯಾದಾಗ ತಮ್ಮ ತಾಯಿಯೊಂದಿಗೆ ಪಂಜಾಬ್ನ ಬಟಿಂಡಾದ ಫಾಲೇವಾಲ್ಗೆ ಬಂದು ನೆಲೆಸಿದರು. ಇನ್ನೊಬ್ಬ ಸಹೋದರ ಮೊಹಮ್ಮದ್ ಸಾದಿಕ್ ತಂದೆ, ತಂಗಿ ಜೊತೆಗೆ ಪಾಕಿಸ್ತಾನದ ಫೈಜಿಲಾಬಾದ್ಗೆ ತೆರಳಿದ್ದರು. 74 ವರ್ಷಗಳ ಬಳಿಕ ಫೈಜಿಲಾಬಾದ್ನಿಂದ ಬಟಿಂಡಾದ ತನ್ನ ಕುಟುಂಬವನ್ನು ಸೇರಿಕೊಂಡಿರುವ ಮೊಹಮ್ಮದ್ ಸಾದಿಕ್ ಅವರನ್ನು ಇಡೀ ಗ್ರಾಮಸ್ಥರು ಹೂವಿನ ಹಾರ ಹಾಕಿ ಅದ್ದೂರಿಯಾಗಿ ಸ್ವಾಗತಿಸಿದ್ದಾರೆ.