ಕರ್ನಾಟಕ

karnataka

ETV Bharat / bharat

ಗಂಗಾನದಿ ತಟದಲ್ಲಿ ನಡೆದ 'ಗಂಗಾ ಆರತಿ' ವೀಕ್ಷಿಸಿದ ಪ್ರಧಾನಿ ನರೇಂದ್ರ ಮೋದಿ - ಐತಿಹಾಸಿಕ ಗಂಗಾ ಆರತಿಗೆ ಸಾಕ್ಷಿಯಾದ ಮೋದಿ

ಕಾಶಿಯಲ್ಲಿ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಇದರ ನಡುವೆಯೇ ಗಂಗಾನದಿ ದಡದಲ್ಲಿ ನಡೆದ 'ಗಂಗಾ ಆರತಿ'ಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸಂತ ರವಿದಾಸ್ ಘಾಟ್‌ ಮೇಲೆ ನಿಂತು ವೀಕ್ಷಿಸಿದರು.

ganga aarti
ಗಂಗಾ ಆರತಿ

By

Published : Dec 13, 2021, 9:24 PM IST

Updated : Dec 13, 2021, 9:40 PM IST

ವಾರಾಣಸಿ:ಕಾಶಿಯಲ್ಲಿ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಇದರ ನಡುವೆಯೇ ಗಂಗಾನದಿ ದಡದಲ್ಲಿ ನಡೆದ 'ಗಂಗಾ ಆರತಿ'ಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸಂತ ರವಿದಾಸ್ ಘಾಟ್‌ ಮೇಲೆ ನಿಂತು ವೀಕ್ಷಿಸಿದರು.

ಈ ವೇಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್, ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಇತರ ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಪ್ರಧಾನಿ ಮೋದಿಗೆ ಸಾಥ್​ ನೀಡಿದರು.

ಬಳಿಕ ದೀಪಾಲಂಕೃತಗೊಂಡಿದ್ದ ಹಡಗಿನಲ್ಲಿ ಪ್ರಧಾನಿ ಮೋದಿ, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಸೇರಿದಂತೆ ಗಣ್ಯರು ಪಯಣಿಸಿ ಗಂಗಾರತಿ ಮತ್ತು ಝಗಮಗಿಸುತ್ತಿದ್ದ ಗಂಗಾನದಿ ತಟವನ್ನು ವೀಕ್ಷಿಸಿದರು.

ಇದನ್ನೂ ಓದಿ: ಡಿ. 18 ರಂದು ಅಮೇಥಿಯಲ್ಲಿ ಪಾದಯಾತ್ರೆಯೊಂದಿಗೆ ರಾಹುಲ್ ಗಾಂಧಿ ಪ್ರಚಾರ ಪ್ರಾರಂಭ​

ಗಂಗಾ ಆರತಿ ಹಿನ್ನೆಲೆ ಗಂಗಾನದಿಯ ಸುತ್ತಲೂ ದೀಪಗಳು, ಲೈಟಿಂಗ್ಸ್​ ವ್ಯವಸ್ಥೆ ಮಾಡಲಾಗಿತ್ತು. ಪುರೋಹಿತರು ಗಂಗಾನದಿ ಘಟ್ಟಗಳ ಮೇಲೆ ಮಂತ್ರ ಪಠಣ ಮಾಡುತ್ತಿದ್ದರು.

Last Updated : Dec 13, 2021, 9:40 PM IST

ABOUT THE AUTHOR

...view details