ಕರ್ನಾಟಕ

karnataka

ETV Bharat / bharat

'ನೋ ಮನಿ ಫಾರ್ ಟೆರರ್' ಜಾಗತಿಕ ಸಮ್ಮೇಳನ ಉದ್ಘಾಟಿಸಲಿರುವ ಮೋದಿ - ಭಯೋತ್ಪಾದನೆಗೆ ಹಣಕಾಸು ಬೇಡ

ಭಯೋತ್ಪಾದನೆ ನಿಗ್ರಹದ ಮೇಲೆ ಪ್ರಸ್ತುತ ಅಂತಾರಾಷ್ಟ್ರೀಯ ಆಡಳಿತದ ಪರಿಣಾಮಕಾರಿತ್ವ ಮತ್ತು ಭವಿಷ್ಯದ ಸವಾಲುಗಳನ್ನು ಎದುರಿಸಲು ಅಗತ್ಯವಾದ ಕ್ರಮಗಳ ಕುರಿತು 'ನೋ ಮನಿ ಫಾರ್ ಟೆರರ್' ಮೂರನೇ ಜಾಗತಿಕ ಸಮ್ಮೇಳನದಲ್ಲಿ ಚರ್ಚಿಸಲಾಗುವುದು.

modi
ಮೋದಿ

By

Published : Nov 18, 2022, 1:51 PM IST

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ರಾಜಧಾನಿ ದೆಹಲಿಯಲ್ಲಿಂದು ನಡೆಯಲಿರುವ 'ನೋ ಮನಿ ಫಾರ್ ಟೆರರ್' (ಭಯೋತ್ಪಾದನೆಗೆ ಹಣಕಾಸು ಬೇಡ) ಮೂರನೇ ಜಾಗತಿಕ ಸಮ್ಮೇಳನವನ್ನು ಇಂದು ಉದ್ಘಾಟಿಸಿ ಭಾಷಣ ಮಾಡಲಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಪ್ರಧಾನಿ ಕಾರ್ಯಾಲಯ (ಪಿಎಂಒ), ನವೆಂಬರ್ 18-19 ರಂದು ಆಯೋಜಿಸಲಾದ ಎರಡು ದಿನಗಳ ನೋ ಮನಿ ಫಾರ್ ಟೆರರ್ ಸಮ್ಮೇಳನದಲ್ಲಿ ವಿವಿಧ ದೇಶಗಳ ಪ್ರತಿನಿಧಿಗಳು ಭಯೋತ್ಪಾದನೆ ಮತ್ತು ಭಯೋತ್ಪಾದಕ ಹಣಕಾಸಿಗೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಚರ್ಚಿಸಲಿದ್ದಾರೆ. ವಿಶ್ವದಾದ್ಯಂತ ಸುಮಾರು 450 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದೆ.

ಇದನ್ನೂ ಓದಿ:ಬೆಂಗಳೂರು ಟೆಕ್ ಸಮಿಟ್‌ನಿಂದ ದೇಶದ ಪ್ರಗತಿಗೆ ಇನ್ನಷ್ಟು ಕೊಡುಗೆ: ಪ್ರಧಾನಿ ಮೋದಿ

ಇದು ಮೂರನೇ ಸಚಿವರ ಮಟ್ಟದ ಸಮ್ಮೇಳನವಾಗಿದ್ದು, ಮಂತ್ರಿಗಳು, ಬಹುಪಕ್ಷೀಯ ಸಂಸ್ಥೆಗಳ ಮುಖ್ಯಸ್ಥರು ಮತ್ತು ಫೈನಾನ್ಶಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (FATF) ನಿಯೋಗಗಳ ಮುಖ್ಯಸ್ಥರು ಭಾಗವಹಿಸಲಿದ್ದಾರೆ.

ಮುಖ್ಯವಾಗಿ ನಾಲ್ಕು ಅವಧಿಗಳಲ್ಲಿ ಚರ್ಚೆಗಳು ನಡೆಯಲಿದ್ದು, ಅವುಗಳೆಂದರೆ 'ಭಯೋತ್ಪಾದನೆ ಮತ್ತು ಭಯೋತ್ಪಾದಕ ಹಣಕಾಸಿನಲ್ಲಿ ಜಾಗತಿಕ ಪ್ರವೃತ್ತಿಗಳು', 'ಭಯೋತ್ಪಾದನೆಗಾಗಿ ಔಪಚಾರಿಕ ಮತ್ತು ಅನೌಪಚಾರಿಕ ನಿಧಿಗಳ ಬಳಕೆ', 'ಉದಯೋನ್ಮುಖ ತಂತ್ರಜ್ಞಾನಗಳು ಮತ್ತು ಭಯೋತ್ಪಾದಕ ಹಣಕಾಸು' ಮತ್ತು 'ಭಯೋತ್ಪಾದಕ ಹಣಕಾಸು ವಿರುದ್ಧ ಹೋರಾಡುವ ಸವಾಲುಗಳನ್ನು ಎದುರಿಸಲು ಅಂತಾರಾಷ್ಟ್ರೀಯ ಸಹಕಾರ'ದ ಕುರಿತು ಚರ್ಚಿಸಲಾಗುವುದು.

ಈ ಮೊದಲು ಏಪ್ರಿಲ್ 2018 ರಲ್ಲಿ ಪ್ಯಾರಿಸ್‌ನಲ್ಲಿ ಮತ್ತು 2019 ರ ನವೆಂಬರ್‌ನಲ್ಲಿ ಮೆಲ್ಬೋರ್ನ್‌ನಲ್ಲಿ ಸಭೆ ನಡೆಸಲಾಗಿತ್ತು.

ABOUT THE AUTHOR

...view details