ನವದೆಹಲಿ: "ಮೋದಿಗೆ ನಾಯಿಯ ಸಾವು ಬರುತ್ತೆ, ಮೋದಿ ಹಿಟ್ಲರ್ ಸತ್ತಂತೆ ಸಾಯುತ್ತಾರೆ. ಇಡೀ ದೇಶ ರಕ್ತದ ಮಡುವಿನಲ್ಲಿ ತೇಲಲಿದೆ" ಇದು ಕಾಂಗ್ರೆಸ್ ನಾಯಕರ ಟೀಕಾಪ್ರಹಾರದ ಮಾತುಗಳು!.
ಕೆಲ ದಿನಗಳ ಹಿಂದೆ ಪ್ರಧಾನಿ ಮೋದಿಯನ್ನು ನಿಂದಿಸುವ ಭರದಲ್ಲಿ ಕಾಂಗ್ರೆಸ್ ನಾಯಕರೊಬ್ಬರು "ನಾಯಿಯೊಂದು ಬೀದಿ ಹೆಣವಾಗುವಂತೆ ಮೋದಿಯೂ ಕೂಡ ಅದೇ ರೀತಿಯಾಗಿ ಸಾಯಲಿದ್ದಾರೆ" ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದೀಗ ಇನ್ನೊಬ್ಬ ಕಾಂಗ್ರೆಸ್ ನಾಯಕ ಸುಬೋಧ್ ಕಾಂತ್ ಸಹಾಯ್ ಪ್ರಧಾನಿ "ಮೋದಿ ಹಿಟ್ಲರ್ ಮಾದರಿಯಲ್ಲಿ ಹೆಣವಾಗಲಿದ್ದಾರೆ" ಎಂದು ಕಿಡಿಕಾರಿದ್ದಾರೆ.
ಅಗ್ನಿಪಥ್ ಯೋಜನೆ ಮತ್ತು ರಾಹುಲ್ ಗಾಂಧಿಯ ಇಡಿ ವಿಚಾರಣೆಯ ವಿರುದ್ಧ ದೇಶಾದ್ಯಂತ ಕಾಂಗ್ರೆಸ್ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಪ್ರಧಾನಿ ಮೋದಿಯನ್ನೇ ಟಾರ್ಗೆಟ್ ಮಾಡಿರುವ ನಾಯಕರು, ಮೋದಿಯ ಸಾವಿನ ಬಗ್ಗೆ ನಾಲಿಗೆಯನ್ನು ಹರಿಬಿಡುತ್ತಿದ್ದಾರೆ.