ಈಗಾಗಲೇ ಅಹಮದಾಬಾದ್ ಘಟಕಕ್ಕೆ ಭೇಟಿ ನೀಡಿ ಬಂದಿರುವ ಪ್ರಧಾನಿ ಈಗ ಹೈದರಾಬಾದ್ನಲ್ಲೂ ಲಸಿಕೆ ತಯಾರಿಕೆ ಬಗ್ಗೆ ತಜ್ಞರೊಂದಿಗೆ ಚರ್ಚಿಸುತ್ತಿದ್ದಾರೆ. ಇಲ್ಲಿಂದ ಬಳಿಕ ಪುಣೆಯ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಲಸಿಕಾ ಕೇಂದ್ರಕ್ಕೆ ತೆರಳಲಿದ್ದಾರೆ.
ಭಾರತ್ ಬಯೋಟೆಕ್ಗೆ ಭೇಟಿ ಹಿನ್ನೆಲೆ: ಹೈದರಾಬಾದ್ಗೆ ಮೋದಿ ಆಗಮನ
14:08 November 28
ಬಯೋಟೆಕ್ ಸಿಬ್ಬಂದಿ ಜತೆ ಮೋದಿ ಸಮಾಲೋಚನೆ
14:00 November 28
ಬಯೋಟೆಕ್ ಸಿಬ್ಬಂದಿ ಜತೆ ಮೋದಿ ಸಮಾಲೋಚನೆ
ಕೋವಿಡ್ ಲಸಿಕೆ ತಯಾರಿಕೆ ಬೆಳವಣಿಗೆಗಳ ಬಗ್ಗೆ ತಿಳಿದುಕೊಳ್ಳಲು ಬಯೋಟೆಕ್ ಘಟಕಕ್ಕೆ ಭೇಟಿ ನೀಡಿರುವ ಪ್ರಧಾನಿ ಮೋದಿ, ಅಲ್ಲಿನ ಸಿಬ್ಬಂದಿ ಜತೆ ಸಂವಾದ ನಡೆಸುತ್ತಿದ್ದಾರೆ. ಈಗಾಗಲೇ ಅಹಮದಾಬಾದ್ ಘಟಕಕ್ಕೆ ಭೇಟಿ ನೀಡಿ ಬಂದಿರುವ ಪ್ರಧಾನಿ ಈಗ ಹೈದರಾಬಾದ್ನಲ್ಲೂ ಲಸಿಕೆ ತಯಾರಿಕೆ ಬಗ್ಗೆ ತಜ್ಞರೊಂದಿಗೆ ಮಾತನಾಡುತ್ತಿದ್ದಾರೆ.
13:42 November 28
ಹೈದರಾಬಾದ್ಗೆ ಆಗಮಿಸಿದ ಮೋದಿ
ಕೋವಿಡ್-19 ಲಸಿಕೆ ಅಭಿವೃದ್ಧಿಯನ್ನು ಪರಿಶೀಲಿಸಲು ಭಾರತ್ ಬಯೋಟೆಕ್ಗೆ ಭೇಟಿ ನೀಡಲು ಪ್ರಧಾನಿ ನರೇಂದ್ರ ಮೋದಿ ಹೈದರಾಬಾದ್ಗೆ ಆಗಮಿಸಿದ್ದಾರೆ.
12:55 November 28
ಝೈಡನ್ ಲಸಿಕಾ ತಂಡವನ್ನು ಅಭಿನಂದಿಸಿದ ಪ್ರಧಾನಿ ಮೋದಿ
ಅಹಮದಾಬಾದ್‌ನ ಝೈಡನ್ ಕೊರೊನಾ ಲಸಿಕಾ ಕೇಂದ್ರದಲ್ಲಿ ಪರಿಶೀಲನೆ ಮುಗಿಸಿ ತೆರಳಿರುವ ಪ್ರಧಾನಿ ನರೇಂದ್ರ ಮೋದಿ ಈ ಕುರಿತು ಟ್ವೀಟ್ ಮಾಡಿದ್ದಾರೆ.
ಡಿಎನ್‌ಎ ಆಧಾರಿತ ಲಸಿಕೆ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಅಹಮದಾಬಾದ್‌ನ ಝೈಡಸ್ ಬಯೋಟೆಕ್ ಪಾರ್ಕ್‌ಗೆ ಭೇಟಿ ನೀಡಿದೆ. ಅವರ ಕೆಲಸಕ್ಕಾಗಿ ಈ ಪ್ರಯತ್ನದ ಹಿಂದಿನ ತಂಡವನ್ನು ನಾನು ಅಭಿನಂದಿಸುತ್ತೇನೆ. ಈ ಪ್ರಯಾಣದಲ್ಲಿ ಅವರನ್ನು ಬೆಂಬಲಿಸಲು ಭಾರತ ಸರ್ಕಾರ ಸಕ್ರಿಯವಾಗಿ ಅವರೊದಿಗೆ ಕಾರ್ಯನಿರ್ವಹಿಸಲಿದೆ ಎಂದಿದ್ದಾರೆ.
11:23 November 28
ಅಹಮದಾಬಾದ್ ಲಸಿಕಾ ಕೇಂದ್ರದಿಂದ ಮರಳಿದ ಮೋದಿ
ಝೈಡನ್ ಲಸಿಕಾ ಕೇಂದ್ರದಲ್ಲಿ ಪ್ರಧಾನಿ ಮೋದಿ ಪರಿಶೀಲನೆ ಅಂತ್ಯಗೊಳಿಸಿದ್ದು, ಅಹಮದಾಬಾದ್ ಕೇಂದ್ರದಿಂದ ಮರಳಿದ್ದಾರೆ. ಇದೀಗ ಅಲ್ಲಿಂದ ಹೈದರಾಬಾದ್ನ ಭಾರತ್ ಬಯೋಟೆಕ್ ಕಂಪನಿಗೆ ತೆರಳಲಿದ್ದಾರೆ.
11:02 November 28
ಝೈಡಸ್ನ ಲಸಿಕಾ ಕೇಂದ್ರದಲ್ಲಿ ಪಿಪಿಇ ಕಿಟ್ ಧರಿಸಿ ಮೋದಿ ಪರಿಶೀಲನೆ
ಝೈಡಸ್ನ ಲಸಿಕಾ ಕೇಂದ್ರದಲ್ಲಿ ಪಿಪಿಇ ಕಿಟ್ ಧರಿಸಿ ಮೋದಿ ಪರಿಶೀಲನೆ ನಡೆಸಿದ್ದಾರೆ. ಲಸಿಕೆ ತಯಾರಿಕಾ ಘಟಕದ ವಿಜ್ಞಾನಿಗಳ ಜೊತೆ ಘಟಕದ ಕಾರ್ಯನಿರ್ವಹಣೆಯ ಕುರಿತಂತೆ ಹಾಗೂ ಲಸಿಕೆಯ ಅಭಿವೃದ್ಧಿ ಹಂತದ ಕುರಿತು ಮಾಹಿತಿ ಪಡೆದಿದ್ದಾರೆ.
10:07 November 28
ಝಡಸ್ ಲಸಿಕಾ ಕೇಂದ್ರದಲ್ಲಿ ಮೋದಿ
ಝೈಡಸ್ ಲಸಿಕಾ ಕೇಂದ್ರ ತಲುಪಿದ ನರೇಂದ್ರ ಮೋದಿ ಅಧಿಕಾರಿಗಳ ಜೊತೆ ಚರ್ಚಿಸುತ್ತಿದ್ದಾರೆ. ಲಸಿಕಾ ಕೇಂದ್ರದಲ್ಲಿನ ತಯಾರಿ ಕುರಿತು ವೀಕ್ಷಿಸಿದ ಬಳಿಕ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆ.
09:17 November 28
ಕೊರೊನಾ ಲಸಿಕೆ ಅಭಿವೃದ್ಧಿ ಮತ್ತು ವಿತರಣಾ ಕೇಂದ್ರದತ್ತ ಹೊರಟ ಪ್ರಧಾನಿ
ಅಹಮದಾಬಾದ್‌ನ ಕೊರೊನಾ ಲಸಿಕೆ ಅಭಿವೃದ್ಧಿ ಮತ್ತು ವಿತರಣಾ ಕೇಂದ್ರದತ್ತ ಹೊರಟ ಪ್ರಧಾನಿ, ಝೈಡಸ್ ಬಯೋಟೆಕ್ ಬಳಿಕ ಹೈದರಾಬಾದ್ ಹಾಗೂ ಪುಣೆ ತಲುಪಲಿದ್ದಾರೆ.
07:42 November 28
ಕೊರೊನಾ ಲಸಿಕೆಗಾಗಿ ಶ್ರಮಿಸಿದವರಿಗೆ ಅಭಿನಂದನೆ ಸಲ್ಲಿಸಿದ ಪ್ರಧಾನಿ
ಕೋವಿಡ್ -19 ಲಸಿಕೆಯ ಅಭಿವೃದ್ಧಿಯ ಬಗ್ಗೆ ಮಾಹಿತಿ ಪಡೆಯಲು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಅಹಮದಾಬಾದ್‌ನ ಝೈಡಸ್ ಬಯೋಟೆಕ್ ಕಂಪನಿಗೆ ಭೇಟಿ ನೀಡಲಿದ್ದಾರೆ. ಇಲ್ಲಿನ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಕೆಲವೇ ಹೊತ್ತಿನಲ್ಲಿ ಲಸಿಕ ಕೇಂದ್ರ ತಲುಪಲಿದ್ದಾರೆ.