ಕರ್ನಾಟಕ

karnataka

ETV Bharat / bharat

ನಮ್ಮ ಮಹಿಳಾ ಹಾಕಿ ಕ್ರೀಡಾಪಟುಗಳ ಸಾಧನೆ ದೇಶದ ಹೆಣ್ಣುಮಕ್ಕಳಿಗೆ ಪ್ರೇರಣೆ: ಮೋದಿ - ಪ್ರಧಾನಿ ನರೇಂದ್ರ ಮೋದಿ

ಟೋಕಿಯೊ ಒಲಿಂಪಿಕ್ಸ್​ನಲ್ಲಿ ನಮ್ಮ ಮಹಿಳಾ ಹಾಕಿ ತಂಡ ಪದಕವನ್ನು ಕಳೆದುಕೊಂಡಿರಬಹುದು, ಆದರೆ ತಂಡದ ಪ್ರತಿಯೊಬ್ಬ ಸದಸ್ಯರೂ ಗಮನಾರ್ಹ ಧೈರ್ಯ, ಕೌಶಲ್ಯ ಪ್ರದರ್ಶಿಸಿದ್ದಾರೆ. ಮಹಿಳಾ ಹಾಕಿ ಕ್ರೀಟಾಪಟುಗಳು ನೀಡಿದ ಪ್ರದರ್ಶನವನ್ನು ಯಾವಾಗಲು ನೆನಪಿಸಿಕೊಳ್ಳುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್​ ಮಾಡಿ ಗುಣಗಾನ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ

By

Published : Aug 6, 2021, 9:59 AM IST

ನವದೆಹಲಿ: ಟೋಕಿಯೊ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತೀಯ ಮಹಿಳಾ ಹಾಕಿ ತಂಡವು ಬ್ರಿಟನ್ ವಿರುದ್ಧ ಹೋರಾಡಿ ಪರಾಭವಗೊಂಡಿತು. ಆದರೂ ಸಹ ನಮ್ಮ ಮಹಿಳಾ ಕ್ರೀಟಾಪಟುಗಳು ನೀಡಿದ ಅತ್ಯುತ್ತಮ ಪ್ರದರ್ಶನವನ್ನು ನಾವು ಯಾವಾಗಲು ನೆನಪಿಸಿಕೊಳ್ಳುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಈ ಕುರಿತು ಟ್ವೀಟ್​ ಮಾಡಿರುವ ಮೋದಿ, ಟೋಕಿಯೊ ಒಲಿಂಪಿಕ್ಸ್​ನಲ್ಲಿ ನಮ್ಮ ಮಹಿಳಾ ಹಾಕಿ ತಂಡ ಪದಕವನ್ನು ಕಳೆದುಕೊಂಡಿರಬಹುದು, ಆದರೆ ತಂಡದ ಪ್ರತಿಯೊಬ್ಬ ಸದಸ್ಯರೂ ಗಮನಾರ್ಹ ಧೈರ್ಯ, ಕೌಶಲ್ಯ ಹೊಂದಿದ್ದಾರೆ. ಈ ತಂಡವನ್ನು ಹೊಂದಿರುವುದಕ್ಕೆ ಭಾರತ ಹೆಮ್ಮೆಪಡುತ್ತದೆ ಎಂದಿದ್ದಾರೆ.

ಇನ್ನು ಮಹಿಳಾ ಹಾಕಿ ತಂಡವು ಇತರೆ ಭಾರತದ ಯುವ ಹೆಣ್ಣುಮಕ್ಕಳು ಸಹ ಸಾಧನೆ ಮಾಡಲು ಪ್ರೇರಣೆಯಾಗಿದೆ. ಇಡೀ ಭಾರತಕ್ಕೆ ಹೊಸ ಚೈತನ್ಯ ತಂದಿದೆ ಎಂದು ಕ್ರೀಡಾಪಟುಗಳಿಗೆ ಹುರುಪು ತುಂಬಿದ್ದಾರೆ.

ABOUT THE AUTHOR

...view details