ನವದೆಹಲಿ: ಕೋವಿಡ್ -19 ಲಸಿಕೆಯ ಅಭಿವೃದ್ಧಿಯ ಬಗ್ಗೆ ಮಾಹಿತಿ ಪಡೆಯಲು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಪುಣೆಯ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ)ಗೆ ಭೇಟಿ ನೀಡಲಿದ್ದಾರೆ. ನಂತರ ಭಾರತ್ ಬಯೋಟೆಕ್ ಕಂಪನಿಗೂ ಭೇಟಿ ನೀಡಲಿದ್ದು, ಕೊವಾಕ್ಸಿನ್ ತಯಾರಿಕೆಯ ಪ್ರಗತಿ ವೀಕ್ಷಿಸಲು ಹೈದರಾಬಾದ್ಗೂ ತೆರಳಲಿದ್ದಾರೆ.
ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾ ಕಡೆಯಿಂದ ' ಕೋವಿಶೀಲ್ಡ್' ಹೆಸರಿನ ಲಸಿಕೆಯ ಅಭಿವೃದ್ಧಿಪಡಿಸಲಾಗಿದೆ ಇದು ಎಸ್‌ಐಐ ನಲ್ಲಿ ಅಂತಿಮ ಪರೀಕ್ಷಾ ಹಂತದಲ್ಲಿದೆ. ಹೀಗಾಗಿ ಈ ಕುರಿತು ಮಾಹಿತಿ ಪಡೆಯಲು ಪ್ರಧಾನಿ ಆಗಮಿಸುತ್ತಿದ್ದು, ಮೋದಿಯವರ ಜೊತೆ ವಿದೇಶಿ ರಾಯಭಾರಿಗಳು ಸಹ ಆಗಮಿಸಲಿದ್ದಾರೆ. ಇದಕ್ಕಾಗಿ ಈಗಾಗಲೇ ಸಿದ್ಧತೆಗಳು ಪ್ರಾರಂಭವಾಗಿವೆ.