ಕರ್ನಾಟಕ

karnataka

ETV Bharat / bharat

ಸ್ವಕ್ಷೇತ್ರ ವಾರಣಾಸಿಗೆ ಇಂದು ನಮೋ... 5,229 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ - ಪ್ರಧಾನಮಂತ್ರಿ ಆತ್ಮನಿರ್ಭರ್​ ಸ್ವಸ್ತ್​​ ಭಾರತ್​ ಯೋಜನೆ

ಸಂಸದೀಯ ಕ್ಷೇತ್ರ ವಾರಣಾಸಿಗೆ ಭೇಟಿ ನೀಡಲಿರುವ ಪ್ರಧಾನಿ ನರೇಂದ್ರ ಮೋದಿ ವಿವಿಧ ಅಭಿವೃದ್ಧಿ ಪರ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.

Modi
Modi

By

Published : Oct 25, 2021, 2:47 AM IST

ವಾರಣಾಸಿ(ಉತ್ತರ ಪ್ರದೇಶ): ಪ್ರಧಾನಿ ನರೇಂದ್ರ ಮೋದಿಯವರ ಸಂಸದೀಯ ಕ್ಷೇತ್ರ ವಾರಣಾಸಿಗೆ ಇಂದು ಭೇಟಿ ನೀಡಲಿದ್ದು, ರಾಷ್ಟ್ರೀಯ ಆರೋಗ್ಯ ಮೂಲಸೌಕರ್ಯ ಯೋಜನೆ ಸೇರಿದಂತೆ 5,229 ಕೋಟಿ ರೂ. ಮೌಲ್ಯದ 30 ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಪ್ರಧಾನಮಂತ್ರಿ ಆತ್ಮನಿರ್ಭರ್​ ಸ್ವಸ್ತ್​​ ಭಾರತ್​ ಯೋಜನೆ ಪ್ರಾರಂಭ ಮಾಡಲಿರುವ ನಮೋ, ಮುಂದಿನ ಐದು ವರ್ಷಗಳಲ್ಲಿ 64, 180 ಕೋಟಿ ರೂ. ವೆಚ್ಚದ ರಾಷ್ಟ್ರೀಯ ಆರೋಗ್ಯ ಮೂಲಸೌಕರ್ಯ ಯೋಜನೆಯಾಗಿದೆ.

ಕಳೆದ ವಾರ ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ್ದ ಪ್ರಧಾನಿ ಮೋದಿ ಕುಶಿನಗರದಲ್ಲಿ ನಿರ್ಮಾಣವಾಗಿರುವ ವಿಮಾನ ನಿಲ್ದಾಣ ಉದ್ಘಾಟನೆ ಮಾಡಿದ್ದರು. ಇದೀಗ 9 ವೈದ್ಯಕೀಯ ಕಾಲೇಜ್​ ಸೇರಿದಂತೆ 30ಕ್ಕೂ ಅಧಿಕ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಈ ಕಾರ್ಯಕ್ರಮಗಳಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಭಾಗಿಯಾಗಲಿದ್ದಾರೆ.

ಇದನ್ನೂ ಓದಿರಿ:ಶಾಲೆಗಳಲ್ಲಿ ಇಂದಿನಿಂದ ಮಕ್ಕಳ ಕಲರವ... 1 ರಿಂದ 5ನೇ ತರಗತಿಗಳು ಆರಂಭ

ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿರುವ ಕಾರಣ ಪ್ರಧಾನಿ ನರೇಂದ್ರ ಮೋದಿ ಮೇಲಿಂದ ಮೇಲೆ ಉತ್ತರ ಪ್ರದೇಶಕ್ಕೆ ಭೇಟಿ ನೀಡುತ್ತಿದ್ದು, ಅನೇಕ ಅಭಿವೃದ್ಧಿ ಪರ ಕಾರ್ಯಗಳಿಗೆ ಚಾಲನೆ ನೀಡುತ್ತಿದ್ದಾರೆ.

ಮೆಹದಿಗಂಜ್​ನಲ್ಲಿ ಸಾರ್ವಜನಿಕ ಸಭೆ

ವಿವಿಧ ಅಭಿವೃದ್ಧಿ ಪರ ಕಾರ್ಯಕ್ರಮಗಳಿಗೆ ನಮೋ ಚಾಲನೆ ನೀಡುವುದಕ್ಕೂ ಮುಂಚಿತವಾಗಿ ಮೆಹದಿಗಂಜ್​​ನಲ್ಲಿ ಆಯೋಜನೆಗೊಂಡಿರುವ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಮೆಹದಿಗಂಜ್​ನಲ್ಲಿ ಪೇಸ್​​ 2 ರಿಂಗ್ ರೋಡ್​ ನಿರ್ಮಾಣ ಮಾಡಲಾಗಿದ್ದು, ಅದರ ಉದ್ಘಾಟನೆ ಸಹ ಮಾಡಲಿದ್ದಾರೆ.

ABOUT THE AUTHOR

...view details