ಕರ್ನಾಟಕ

karnataka

ETV Bharat / bharat

'ಕ್ಯಾಚ್​ ದಿ ರೇನ್​' ಅಭಿಯಾನದ ಮೂಲಕ ಜಲಮೂಲ ಸಂರಕ್ಷಣೆಗೆ ಪ್ರಧಾನಿ ಕರೆ

ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವ ಜಲ ದಿನಾಚರಣೆಯ ಪ್ರಯುಕ್ತ 'ಕ್ಯಾಚ್ ದಿ ರೇನ್' (ಮಳೆ ನೀರನ್ನು ಹಿಡಿಯಿರಿ) ಅಭಿಯಾನವನ್ನು ಸೋಮವಾರ ಮಧ್ಯಾಹ್ನ 12.30 ಕ್ಕೆ ವಿಡಿಯೋ ಕಾನ್ಫರೆನ್ಸ್​ ಮೂಲಕ ಉದ್ಘಾಟಿಸಲಿದ್ದಾರೆ.

Modi
ಪ್ರಧಾನಿ ನರೇಂದ್ರ ಮೋದಿ

By

Published : Mar 21, 2021, 4:16 PM IST

ನವದೆಹಲಿ: ನೂರು ದಿನಗಳ ಸಾರ್ವಜನಿಕ ಅಭಿಯಾನದ ಮೂಲಕ ನೀರನ್ನು ಸಂರಕ್ಷಣೆ ಮಾಡುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವ ಜಲ ದಿನಾಚರಣೆಯಂದು 'ಜಲ ಶಕ್ತಿ ಅಭಿಯಾನ: ಕ್ಯಾಚ್ ದಿ ರೇನ್' (ಮಳೆ ನೀರನ್ನು ಹಿಡಿಯಿರಿ) ಅಭಿಯಾನವನ್ನು ಸೋಮವಾರ ಉದ್ಘಾಟಿಸಲಿದ್ದಾರೆ.

ದೇಶದಲ್ಲಿ ಮಾನ್ಸೂನ್ ಪ್ರಾರಂಭವಾಗುವ ಮುನ್ನ ನಮ್ಮ ಸುತ್ತಮುತ್ತಲಿನ ಜಲಮೂಲಗಳನ್ನು ಸ್ವಚ್ಛಗೊಳಿಸಿ ಮಳೆ ನೀರನ್ನು ಸಂಗ್ರಹಿಸಲು ಅಣಿಯಾಗಬೇಕು ಎಂದು ಕರೆ ನೀಡಿರುವ ಅವರು, ಬಿದ್ದ ಜಾಗದಲ್ಲೇ, ಬಿದ್ದ ಸಮಯದಲ್ಲೇ ಮಳೆ ನೀರನ್ನು ಹಿಡಿದು ಸಂಗ್ರಹಿಸಬೇಕು. ಹೀಗಾಗಿ, ಇದು ಮಾರ್ಚ್ 22 ರಿಂದ ನವೆಂಬರ್ 30 ರವರೆಗೆ ಜಾರಿಗೆ ಬರಲಿದೆ ಎಂದು ತಿಳಿಸಿದ್ದಾರೆ.

ಸಮುದಾಯ ಆಧಾರಿತ ಜಲ ಸಂರಕ್ಷಣೆಯ ಮಹತ್ವದ ಕುರಿತು ಒತ್ತು ನೀಡಿರುವ ಪ್ರಧಾನಿ, ಅಭಿಯಾನದ ನಂತರ ನೀರು ಮತ್ತು ನೀರಿನ ಸಂರಕ್ಷಣೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸಲು ಪ್ರತಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್​ಗಳಲ್ಲಿ (ಮತದಾನದ ವ್ಯಾಪ್ತಿಯ ರಾಜ್ಯಗಳನ್ನು ಹೊರತುಪಡಿಸಿ) ಗ್ರಾಮ ಸಭೆಗಳು ನಡೆಯಲಿವೆ. ನೀರಿನ ಸಂರಕ್ಷಣೆಗಾಗಿ ಗ್ರಾಮಸಭೆಗಳು 'ಜಲ ಶಪಥ'ಗಳನ್ನು ಸಹ ತೆಗೆದುಕೊಳ್ಳಲಿವೆ ಎಂದರು.

ಪ್ರಧಾನ ಮಂತ್ರಿಗಳ ಸಮ್ಮುಖದಲ್ಲಿ, ಕೇಂದ್ರ ಜಲ ಸಚಿವ ಮತ್ತು ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿಗಳು ಸಹ ಈ ಯೋಜನೆಯನ್ನು ಕಾರ್ಯಗತಗೊಳಿಸಲು ಕೆನ್​ ಬೆಟ್ವಾ ಲಿಂಕ್​ ಯೋಜನೆ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ.

ಈ ಯೋಜನೆಯಿಂದ ನದಿಗಳ ಪರಸ್ಪರ ಸಂಪರ್ಕದ ಮೂಲಕ ಹೆಚ್ಚುವರಿ ನೀರನ್ನು ಹೊಂದಿರುವ ಪ್ರದೇಶಗಳಿಂದ ಬರ ಪೀಡಿತ ಮತ್ತು ನೀರಿನ ಕೊರತೆಯಿರುವ ಪ್ರದೇಶಗಳಿಗೆ ನೀರನ್ನು ಸಾಗಿಸುವ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ದೂರದೃಷ್ಟಿಯನ್ನು ಕಾರ್ಯಗತಗೊಳಿಸಲು ಈ ಒಪ್ಪಂದವು ಸಹಕಾರಿ ಎಂದು ತಿಳಿಸಿದ್ದಾರೆ.

ಓದಿ:ದಶಕಗಳಿಂದ ಕೆಳ ನ್ಯಾಯಾಲಯಗಳಲ್ಲಿ 3.8 ಕೋಟಿ ಪ್ರಕರಣ ಬಾಕಿ, ನ್ಯಾಯ ವಿಳಂಬಕ್ಕೆ ಕಾರಣವಾಯ್ತಾ ಖಾಲಿ ಹುದ್ದೆ!?

ಈ ಯೋಜನೆಯು ದೌಧನ್ ಅಣೆಕಟ್ಟು ನಿರ್ಮಾಣದ ಮೂಲಕ ಕೆನ್​ನಿಂದ ಬೆಟ್ವಾ ನದಿಗೆ ನೀರು ವರ್ಗಾವಣೆ ಮತ್ತು ಕೋಥಾ ಬ್ಯಾರೇಜ್ ಮತ್ತು ಬೈನಾ ಕಾಂಪ್ಲೆಕ್ಸ್ ವಿವಿಧೋದ್ದೇಶ ಯೋಜನೆ ಎಂಬ ಎರಡು ನದಿಗಳನ್ನು ಸಂಪರ್ಕಿಸುವ ಕಾಲುವೆಯನ್ನು ಒಳಗೊಂಡಿರುತ್ತದೆ.

ಇದು ವಾರ್ಷಿಕ 10.62 ಲಕ್ಷ ಹೆಕ್ಟೇರ್ ನೀರಾವರಿ, ಸುಮಾರು 62 ಲಕ್ಷ ಜನರಿಗೆ ಕುಡಿಯುವ ನೀರು ಸರಬರಾಜು ಮತ್ತು 103 ಮೆಗಾವ್ಯಾಟ್ ಜಲಶಕ್ತಿ ಉತ್ಪಾದಿಸುತ್ತದೆ.

ABOUT THE AUTHOR

...view details