ಕರ್ನಾಟಕ

karnataka

ETV Bharat / bharat

ಕೋವಿಡ್​ -19 ಇನಾಕ್ಯುಲೇಷನ್ ಡ್ರೈವ್ ಲಸಿಕೆ, ಫಲಾನುಭವಿಗಳೊಂದಿಗೆ ಮೋದಿ ಸಂವಾದ

ಕೋವಿಡ್ ವ್ಯಾಕ್ಸಿನೇಷನ್ ಡ್ರೈವ್‌ನ ಫಲಾನುಭವಿಗಳು ಮತ್ತು ವ್ಯಾಕ್ಸಿನೇಟರ್‌ಗಳೊಂದಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಂವಹನ ನಡೆಸುತ್ತೇನೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

modi
ಮೋದಿ

By

Published : Jan 21, 2021, 11:27 PM IST

ನವದೆಹಲಿ: ವಾರಣಾಸಿಯಲ್ಲಿ ಶುಕ್ರವಾರ ನಡೆಯುತ್ತಿರುವ ಕೋವಿಡ್​-19 ಇನಾಕ್ಯುಲೇಷನ್ ಡ್ರೈವ್‌ನ ಫಲಾನುಭವಿಗಳು ಮತ್ತು ವ್ಯಾಕ್ಸಿನೇಟರ್‌ಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಪರೆನ್ಸ್​​ ಮೂಲಕ ಸಂವಾದ ನಡೆಸಲಿದ್ದಾರೆ.

ಸಂವಾದದಲ್ಲಿ ಭಾಗವಹಿಸುವವರು ವ್ಯಾಕ್ಸಿನೇಷನ್ ಬಗ್ಗೆ ತಮ್ಮ ಮೊದಲ ಅನುಭವವನ್ನು ಹಂಚಿಕೊಳ್ಳಲಿದ್ದಾರೆ ಎಂದು ಪ್ರಧಾನಿ ಕಚೇರಿ (ಪಿಎಂಒ) ಗುರುವಾರ ತಿಳಿಸಿದೆ.

ವಿಶ್ವದ ಅತಿದೊಡ್ಡ ವ್ಯಾಕ್ಸಿನೇಷನ್ ಡ್ರೈವ್ ಭಾರತದಲ್ಲಿ ನಡೆಯುತ್ತಿದೆ. ನಮ್ಮ ಮುಂಚೂಣಿಯ ಯೋಧರು ದೇಶಾದ್ಯಂತ ಲಸಿಕೆ ಪಡೆಯುತ್ತಿದ್ದಾರೆ. ನಾಳೆ ಜನವರಿ 22 ರಂದು ಮಧ್ಯಾಹ್ನ 1:15ಕ್ಕೆ ನಾನು ವಾರಣಾಸಿಯಲ್ಲಿ ಕೋವಿಡ್ ವ್ಯಾಕ್ಸಿನೇಷನ್ ಡ್ರೈವ್‌ನ ಫಲಾನುಭವಿಗಳು ಮತ್ತು ವ್ಯಾಕ್ಸಿನೇಟರ್‌ಗಳೊಂದಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಂವಹನ ನಡೆಸುತ್ತೇನೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಓದಿ:ಡಾಲರ್ ಕಳ್ಳಸಾಗಣೆ ಪ್ರಕರಣ: ಐಎಎಸ್ ಅಧಿಕಾರಿ ಶಿವಶಂಕರ್​ ಬಂಧನ

ಈ ಸಂವಹನದಲ್ಲಿ ಅವರ ಅನುಭವಗಳನ್ನು ಮತ್ತು ಪ್ರತಿಕ್ರಿಯೆಯನ್ನು ಕೇಳಲು ಮೊದಲ ಅವಕಾಶವನ್ನು ನೀಡಲಾಗುತ್ತದೆ. ನಾಳೆಯ ಸಂವಾದವನ್ನು ವೀಕ್ಷಿಸಲು ನಾನು ನಿಮ್ಮೆಲ್ಲರನ್ನೂ ಒತ್ತಾಯಿಸುತ್ತೇನೆ ಎಂದು ಅವರು ಹೇಳಿದ್ದಾರೆ.

ವಿಶ್ವದ ಅತಿದೊಡ್ಡ ವ್ಯಾಕ್ಸಿನೇಷನ್ ಡ್ರೈವ್​ನ ಸುಗಮ ನಡವಳಿಕೆಯನ್ನು ಖಚಿತಪಡಿಸಿಕೊಳ್ಳಲು ಮೋದಿಯವರು ವಿಜ್ಞಾನಿಗಳು, ರಾಜಕೀಯ ಮುಖಂಡರು, ಅಧಿಕಾರಿಗಳು ಮತ್ತು ಇತರ ಮಧ್ಯಸ್ಥಗಾರರೊಂದಿಗೆ ನಿರಂತರ ಸಂವಾದ ಮತ್ತು ಚರ್ಚೆಯನ್ನು ಅನುಸರಿಸುತ್ತಾರೆ ಎಂದು ಪಿಎಂಒ ಹೇಳಿದೆ.

For All Latest Updates

ABOUT THE AUTHOR

...view details