ಜೈಸಲ್ಮೇರ್ (ರಾಜಸ್ಥಾನ): ಪ್ರಧಾನಿ ನರೇಂದ್ರ ಮೋದಿ ಈ ಬಾರಿಯ ದೀಪಾವಳಿಯನ್ನು ರಾಜಸ್ಥಾನ - ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿ ಭಾಗದಲ್ಲಿ ಭಾರತೀಯ ಸೈನಿಕರ ಜೊತೆ ಆಚರಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಪಾಕ್ ಗಡಿಯಲ್ಲಿ ಭಾರತೀಯ ಸೈನಿಕರೊಂದಿಗೆ ಮೋದಿ ದೀಪಾವಳಿ ಆಚರಣೆ - ಭಾರತೀಯ ಸೈನಿಕ
ಹಬ್ಬದ ಹಿನ್ನೆಲೆ ರಾಜಸ್ಥಾನದ ಜೈಸಲ್ಮೇರ್ ಹಾಗೂ ಗುಜರಾತಿನ ಭುಜ್ನಲ್ಲಿ ಪ್ರಧಾನಿ ಅವರನ್ನ ಸ್ವಾಗತಿಸಲು ಸಕಲ ಸಿದ್ಧತೆಗಳು ನಡೆಯುತ್ತಿದ್ದು, ಅಲ್ಲಿಂದ ಅವರು ಯಾವುದಾದರೊಂದು ಗಡಿ ಪ್ರದೇಶಕ್ಕೆ ತೆರಳಿ ಸೈನಿಕರೊಂದಿಗೆ ದೀಪಾವಳಿ ಆಚರಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಪಾಕ್ ಗಡಿಯಲ್ಲಿ ಭಾರತೀಯ ಸೈನಿಕರೊಂದಿಗೆ ಮೋದಿ ದೀಪಾವಳಿ ಆಚರಣೆ
ಹಬ್ಬದ ಹಿನ್ನೆಲೆ ರಾಜಸ್ಥಾನದ ಜೈಸಲ್ಮೇರ್ ಹಾಗೂ ಗುಜರಾತಿನ ಭುಜ್ನಲ್ಲಿ ಪ್ರಧಾನಿಯನ್ನು ಸ್ವಾಗತಿಸಲು ಸಕಲ ಸಿದ್ಧತೆಗಳು ನಡೆಯುತ್ತಿದ್ದು, ಅಲ್ಲಿಂದ ಅವರು ಯಾವುದಾದರೊಂದು ಗಡಿ ಪ್ರದೇಶಕ್ಕೆ ತೆರಳಿ ಸೈನಿಕರೊಂದಿಗೆ ಹಬ್ಬ ಆಚರಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಹಲವು ವರ್ಷದಿಂದ ಹಬ್ಬದ ಸಮಯದಲ್ಲಿ ಗಡಿ ರೇಖೆಯಲ್ಲಿರುವ ಸೈನಿಕರ ಮನೋಸ್ಥೈರ್ಯ ಹೆಚ್ಚಿಸಲು ಪ್ರಧಾನಿ ಮೋದಿ ಭೇಟಿ ನೀಡುತ್ತಿರುತ್ತಾರೆ. ಈ ವರ್ಷವೂ ಪ್ರಧಾನಿ ಅಂತಹುದೇ ಭೇಟಿ ನೀಡಲು ಸಜ್ಜಾಗಿದ್ದಾರೆ.