ಕರ್ನಾಟಕ

karnataka

ETV Bharat / bharat

ಸಾಫ್ಟ್‌ ಸ್ಟೋನ್‌ನಲ್ಲಿ ಒಡಿಶಾ ಕಲೆ ಬಿಡಿಸಿದ ಚಿತ್ರಗಾರ್ತಿಗೆ ಶ್ಲಾಘನೆ... ತಾನೂ ಚಿತ್ರ ಬಿಡಿಸಿದ್ದೆ ಎಂದ ನಮೋ - ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ

ಸಾಫ್ಟ್‌ ಸ್ಟೋನ್‌ನಲ್ಲಿ ಒಡಿಶಾದ ಜನಪ್ರಿಯ ಕಲಾ ವರ್ಣಚಿತ್ರಗಳ ಬರವಣಿಗೆಗಾಗಿ ಒಡಿಶಾದ ರೂರ್ಕೆಲಾದ ಎಂಜಿನಿಯರಿಂಗ್ ವಿದ್ಯಾರ್ಥಿನಿ ಭಾಗ್ಯಶ್ರೀ ಸಾಹು ಅವರನ್ನು ಪ್ರಧಾನಿ ಮೋದಿ ತಮ್ಮ ಮನ್​ ಕಿ ಬಾತ್​ ಕಾರ್ಯಕ್ರಮದಲ್ಲಿ ಶ್ಲಾಘಿಸಿದ್ದಾರೆ.

Mann ki bat programme
ಭಾಗ್ಯಶ್ರೀ ಸಾಹು

By

Published : Jan 31, 2021, 7:37 PM IST

ನವದೆಹಲಿ: ಒಡಿಶಾದ ರೂರ್ಕೆಲಾದ ಎಂಜಿನಿಯರಿಂಗ್ ವಿದ್ಯಾರ್ಥಿನಿ ಭಾಗ್ಯಶ್ರೀ ಸಾಹು ಅವರ ಚಿತ್ರಕಲೆಯನ್ನು ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.

ಸಾಫ್ಟ್‌ ಸ್ಟೋನ್‌ನಲ್ಲಿ ಒಡಿಶಾ ಕಲೆ ಬಿಡಿಸಿದ ಚಿತ್ರಗಾರ್ತಿಗೆ ಶ್ಲಾಘನೆ

ಸಾಫ್ಟ್ ‌ಸ್ಟೋನ್‌ನಲ್ಲಿ ಒಡಿಶಾದ ಜನಪ್ರಿಯ ಕಲಾ ವರ್ಣಚಿತ್ರಗಳ ಬರವಣಿಗೆಗಾಗಿ ಮೋದಿ ವಿದ್ಯಾರ್ಥಿನಿಯನ್ನು ರಾಷ್ಟ್ರಮಟ್ಟದಲ್ಲಿ ಶ್ಲಾಘಿಸಿದರು. ಅವಳಿಗೆ ಉಜ್ವಲ ಭವಿಷ್ಯವನ್ನು ಹಾರೈಸಿದರು. ಓರಿಯಾದ ಹುಡುಗಿ ಭಾಗ್ಯಶ್ರೀ ತಮ್ಮ ವರ್ಣಚಿತ್ರಗಳ ಮೂಲಕ ದೇಶದ ವಿವಿಧ ಸಂಪ್ರದಾಯಗಳು ಮತ್ತು ಸಂಸ್ಕೃತಿಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸಿದ್ದಾರೆ ಎಂದು ಅವರು ಹೊಗಳಿದ್ದಾರೆ.

ಎಂಜಿನಿಯರಿಂಗ್ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿನಿ ಭಾಗ್ಯಶ್ರೀ ಲಾಕ್​ಡೌನ್ ಸಮಯದಲ್ಲಿ ತನ್ನ ಕಲಾ ನೈಪುಣ್ಯತೆಯನ್ನು ಪ್ರದರ್ಶಿಸಿದ್ದಳು. ಕಾಲೇಜಿಗೆ ಹೋಗುವ ಹಾದಿ, ಬೀದಿಗಳಲ್ಲಿ ಬಿದ್ದ ಸಾಫ್ಟ್‌ ಸ್ಟೋನ್‌ಗಳನ್ನು ಸಂಗ್ರಹಿಸಿ ಒಡಿಶಾದ ವಿವಿಧ ಜನಪ್ರಿಯ ವರ್ಣಚಿತ್ರಗಳನ್ನು ಚಿತ್ರಿಸಿದರು. ಲಾಕ್‌ಡೌನ್ ಸಮಯದಲ್ಲಿ ತಾನೂ ಈ ಕಲೆಯನ್ನು ಕರಗತ ಮಾಡಿಕೊಂಡಿದ್ದೇನೆ ಎಂದು ಮೋದಿ ಹೇಳಿದರು.

ಇದನ್ನೂ ಓದಿ:ಸ್ವಚ್ಛತೆಗೆ ಕೇರಳ ವೃದ್ಧನ ಕೊಡುಗೆ.. ಮನ್​ ಕಿ ಬಾತ್​ನಲ್ಲಿ ಮನಬಿಚ್ಚಿ ಕೊಂಡಾಡಿದ ಮೋದಿ..

ಭಾಗ್ಯಶ್ರೀ ಇಂತಹ ಚಿತ್ರಗಳನ್ನು ಬಾಟಲಿಗಳಲ್ಲಿ ಚಿತ್ರಿಸಲು 2 ಗಂಟೆಗಳ ಕಾಲವನ್ನು ತೆಗೆದುಕೊಳ್ಳುತ್ತಾರೆ. ಅಲ್ಲದೆ ಅದರ ಕಾರ್ಯಾಗಾರವನ್ನು ಆಯೋಜಿಸಿ, ಆ ಕಲಾಚಿತ್ರಗಳನ್ನು ತಮ್ಮ ಸ್ನೇಹಿತರಿಗೂ ಉಡುಗೊರೆಯಾಗಿ ನೀಡುತ್ತಾರೆ. ಪ್ರಧಾನಿ ಚಿತ್ರವನ್ನೂ ಆಕೆ ಚಿತ್ರಿಸಿದ್ದಾಳೆ.

ABOUT THE AUTHOR

...view details