ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಪೋರ್ಚುಗೀಸ್ ಕೌಂಟರ್ ಆಂಟೋನಿಯೊ ಲೂಯಿಸ್ ಸ್ಯಾಂಟೋಸ್ ಡಾ ಕೋಸ್ಟಾ ಅವರು ಮಂಗಳವಾರ ದೂರವಾಣಿಯಲ್ಲಿ ಸಂಭಾಷಣೆ ನಡೆಸಿದ್ದಾರೆ.
ಮೇ ತಿಂಗಳಲ್ಲಿ ನಡೆಯಲಿರುವ ಭಾರತ-ಇಯು ನಾಯಕರ ಮೊದಲ ಸಭೆಯ ಸಿದ್ಧತೆಗಳನ್ನು ಪರಿಶೀಲಿಸಿ, ಉಭಯ ನಾಯಕರು ಚರ್ಚಿಸಿದ್ದಾರೆ ಎಂದು ಪ್ರಧಾನ ಮಂತ್ರಿಗಳ ಕಚೇರಿ (ಪಿಎಂಒ) ತಿಳಿಸಿದೆ.
ಉಭಯ ನಾಯಕರು ತಮ್ಮ ದೇಶಗಳಲ್ಲಿನ ಕೋವಿಡ್-19 ಪರಿಸ್ಥಿತಿ ಪರಿಶೀಲಿಸಿದರು. ಸಾಂಕ್ರಾಮಿಕ ರೋಗದ ಅಂತ್ಯಕ್ಕೆ ಲಸಿಕೆಗಳನ್ನು ತ್ವರಿತವಾಗಿ ಮತ್ತು ಸಮನಾಗಿ ವಿತರಿಸುವ ಮಹತ್ವವದ ಬಗ್ಗೆ ಮಾತುಕತೆ ನಡೆಸಿದ್ದಾರೆ ಎಂದಿದೆ.
ಭಾರತದ ವ್ಯಾಕ್ಸಿನೇಷನ್ ಡ್ರೈವ್ ಹಾಗೂ ಇದುವರೆಗೆ 70ಕ್ಕೂ ಅಧಿಕ ದೇಶಗಳಿಗೆ ಭಾರತ ನೀಡಿದ ಲಸಿಕೆಯ ಕುರಿತು ಮೋದಿ ಅವರು ಡಾ ಕೋಸ್ಟಾಗೆ ವಿವರಿಸಿ, ಭಾರತವು ಇತರ ದೇಶಗಳ ಲಸಿಕೆ ಪ್ರಯತ್ನಗಳನ್ನು ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಬೆಂಬಲಿಸುತ್ತಲೇ ಇರುತ್ತದೆ ಎಂಬ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ನೇಣು ಬಿಗಿದ ಸ್ಥಿತಿಯಲ್ಲಿ ಬಿಜೆಪಿ ಸಂಸದ ರಾಮ್ ಸ್ವರೂಪ್ ಶರ್ಮಾರ ಶವಪತ್ತೆ
ಉಭಯ ನಾಯಕರು ದ್ವಿಪಕ್ಷೀಯ ಸಂಬಂಧ ಪರಿಶೀಲಿಸಿದ್ದು, ಕಳೆದ ಕೆಲವು ವರ್ಷಗಳಲ್ಲಿ ಭಾರತ-ಪೋರ್ಚುಗಲ್ ಸಹಭಾಗಿತ್ವದ ಸಕಾರಾತ್ಮಕ ಸಾಗುತ್ತಿದೆ ಎಂದಿದ್ದಾರೆ.
ಮೇ ತಿಂಗಳಲ್ಲಿ ಪೋರ್ಟೊದಲ್ಲಿ ಇಯುನ ಪೋರ್ಚುಗೀಸ್ ಪ್ರೆಸಿಡೆನ್ಸಿಯಡಿಯಲ್ಲಿ ನಡೆಯಲಿರುವ ಮೊದಲ ಭಾರತ - ಇಯು ನಾಯಕರ ಸಭೆಯ ಸಿದ್ಧತೆಗಳನ್ನು ಕೂಡ ಪರಿಶೀಲಿಸಿದರು. ಭಾರತ-ಇಯು ಕಾರ್ಯತಂತ್ರದ ಸಹಭಾಗಿತ್ವ ಬಲಪಡಿಸುವಲ್ಲಿ ಡಾ ಕೋಸ್ಟಾ ವಹಿಸುತ್ತಿರುವ ಪಾತ್ರವನ್ನು ಮೋದಿ ಶ್ಲಾಘಿಸಿದರು. ಪೋರ್ಟೊದಲ್ಲಿ ಅವರನ್ನು ಭೇಟಿಯಾಗಲು ಎದುರು ನೋಡುತ್ತಿದ್ದೇನೆ ಎಂದಿದ್ದಾರೆ.