ಕರ್ನಾಟಕ

karnataka

ETV Bharat / bharat

'ಮೋದಿ ಓರ್ವ ಸ್ವಯಂಸೇವಕ, ಸ್ವತಂತ್ರವಾಗಿ ಕೆಲಸ ಮಾಡುವ ವ್ಯಕ್ತಿಯನ್ನು ಆರ್‌ಎಸ್ಎಸ್‌ ನಿಯಂತ್ರಿಸದು' - ETv Bahrat kannada news

ಆರ್‌ಎಸ್‌ಎಸ್ ಸ್ವತಂತ್ರವಾಗಿ ಕೆಲಸ ಮಾಡುವ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯನ್ನು ನಿಯಂತ್ರಿಸುವುದಿಲ್ಲ ಎಂದು ಮೋಹನ್ ಭಾಗವತ್ ಅವರು ಹೇಳಿದರು.

Rashtriya Swayamsevak Sangh chief Mohan Bhagwat
ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್

By

Published : Nov 20, 2022, 9:39 AM IST

ಜಬಲ್‌ಪುರ್‌(ಮಧ್ಯಪ್ರದೇಶ):ಪ್ರಧಾನಿ ನರೇಂದ್ರ ಮೋದಿ ಅವರು ಓರ್ವ ಸ್ವಯಂಸೇವಕ. ಸಂಘವು (ಆರ್‌ಎಸ್‌ಎಸ್) ಸ್ವತಂತ್ರವಾಗಿ ಕೆಲಸ ಮಾಡುವ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯನ್ನು ನಿಯಂತ್ರಿಸುವುದಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದರು.

ಆರ್‌ಎಸ್‌ಎಸ್ ಬಗ್ಗೆ ಮಾತನಾಡುವಾಗ ಜನರು ವಿಶ್ವ ಹಿಂದೂ ಪರಿಷತ್ (ವಿಹಿಂಪ) ಬಗ್ಗೆಯೂ ಯೋಚಿಸುತ್ತಾರೆ. ಆದರೆ ಆ ಸಂಘಟನೆಯಲ್ಲಿಯೂ ಸ್ವಯಂಸೇವಕರಿದ್ದಾರೆ. ಆದರೆ ಅದು ಸಂಘವಲ್ಲ, ಅವರು ತಮ್ಮದೇ ಆದ ಕೆಲಸ ಮಾಡುತ್ತಿದ್ದಾರೆ. ಸಂಘವು ತನ್ನದೇ ಆದ ಸ್ವತಂತ್ರ ಕೆಲಸವನ್ನು ಮಾಡುತ್ತಿದೆ ಎಂದು ಸ್ಪಷ್ಟಪಡಿಸಿದರು. ಅಂತಹ ಸಂಘಟನೆಗಳ ವ್ಯಕ್ತಿಗಳು ಕೂಡಾ ಮೊದಲು ಆರ್‌ಎಸ್‌ಎಸ್‌ ಸ್ವಯಂಸೇವಕರಾಗಿದ್ದವರು ಎಂದರು.

ಕೆಲವೊಮ್ಮೆ ಸಂಘವು ಒಳ್ಳೆಯ ಉದ್ದೇಶಕ್ಕಾಗಿ ಅವರಿಗೆ ಸಹಾಯ ಮಾಡುತ್ತದೆ. ಅವರ ಮೇಲೆ ಸಂಘದ ಯಾವುದೇ ನಿಯಂತ್ರಣ ಇರುವುದಿಲ್ಲ. ಆರ್​ಎಸ್​ಸ್​​ ಜಾತಿ, ಧರ್ಮದ ಭೇದವಿಲ್ಲದೆ ನಡೆದುಕೊಂಡು ಬಂದಿದೆ ಎಂದು ಸ್ಪಷ್ಟಪಡಿಸಿದರು. ಇದೇ ವೇಳೆ, ಹಿಂದೂ ಧರ್ಮವು ಕೇವಲ ಒಂದು ಧರ್ಮವಲ್ಲ ಆದರೆ ಜೀವನ ವಿಧಾನ ಎಂದು ತಿಳಿಸಿದರು.

ಇದನ್ನೂ ಓದಿ:ಆರೆಸ್ಸೆಸ್​ ಮುಖ್ಯಸ್ಥರ ಛತ್ತೀಸಗಢ ಭೇಟಿ: ಕಾರ್ಯಕರ್ತರ ಉದ್ದೇಶಿಸಿ ಭಾಷಣ

ABOUT THE AUTHOR

...view details