ಕರ್ನಾಟಕ

karnataka

ETV Bharat / bharat

ಪ್ರಧಾನ ಮಂತ್ರಿ ಗರೀಬ್​ ಕಲ್ಯಾಣ ಅನ್ನ ಯೋಜನೆ; ಫಲಾನುಭವಿಗಳ ಜತೆ ಪ್ರಧಾನಿ ಸಂವಾದ - ಗುಜರಾತ್‌

ಗುಜರಾತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯ ಫಲಾನುಭವಿಗಳೊಂದಿಗೆ ಇಂದು ವರ್ಚುಯಲ್‌ ಮೂಲಕ ಸಂವಾದ ನಡೆಸಿದರು. ಈ ಯೋಜನೆ ಮೂಲಕ ಅನೇಕ ಕುಟುಂಬಗಳ ಪಡಿತರ ಸಮಸ್ಯೆಯನ್ನು ಪರಿಹರಿಸಲಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

modi interacts with beneficiaries of pradhan mantri garib kalyan anna yojana in gujrat
ಪ್ರಧಾನ ಮಂತ್ರಿ ಗರೀಬಾ ಕಲ್ಯಾಣ ಅನ್ನ ಯೋಜನೆ; ಫಲಾನುಭವಿಗಳ ಜತೆ ಪ್ರಧಾನಿ ಮೋದಿ ಸಂವಾದ

By

Published : Aug 3, 2021, 11:02 PM IST

ಗಾಂಧಿನಗರ(ಗುಜರಾತ್‌): ಕೋವಿಡ್‌ ಬಿಕ್ಕಟ್ಟಿನ ಸಮಯದಲ್ಲಿ ಲಕ್ಷಾಂತರ ಬಡ ಜನರು ಪ್ರಧಾನ ಮಂತ್ರಿ ಗರೀಬ್​ ಕಲ್ಯಾಣ ಅನ್ನ ಯೋಜನೆಯ ಪ್ರಯೋಜನ ಪಡೆದಿದ್ದಾರೆ. ಲಕ್ಷಾಂತರ ಕುಟುಂಬಗಳಿಗೆ ಸರ್ಕಾರ ಉಚಿತ ಪಡಿತರ ನೀಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹರ್ಷ ವ್ಯಕ್ತಪಡಿಸಿದ್ದಾರೆ.

ಪ್ರಧಾನ ಮಂತ್ರಿ ಗರೀಬಾ ಕಲ್ಯಾಣ ಅನ್ನ ಯೋಜನೆ (PMGKAY)ಯ ಫಲಾನುಭವಿಗಳೊಂದಿಗೆ ಗುಜರಾತ್‌ನಲ್ಲಿಂದು ವರ್ಚುಯಲ್‌ ಸಭೆ ನಡೆಸಿ ಮಾತನಾಡಿದರು, ಸ್ವಾತಂತ್ರ್ಯದ ನಂತರ ಪ್ರತಿಯೊಂದು ಸರ್ಕಾರವು ಬಡವರಿಗೆ ಕಡಿಮೆ ವೆಚ್ಚದಲ್ಲಿ ಪಡಿತರವನ್ನು ನೀಡುವ ವಿಷಯ ಪ್ರಸ್ತಾಪಿಸಿದೆ.

ಇದು ಕೆಲವು ಯೋಜನೆಗಳನ್ನು ಸಹ ತಂದಿದೆ. ಆದಾಗ್ಯೂ, ದೇಶದ ಬಡವರಿಗೆ ಸಂಪೂರ್ಣ ನೆರವು ಸಿಕ್ಕಿಲ್ಲ. ದೇಶದಲ್ಲಿ ಆಹಾರ ದಾಸ್ತಾನು ಹೆಚ್ಚಾಗಿದೆ. ಆದರೂ ಹಸಿವಿನಿಂದ ಬಳಲುತ್ತಿರುವ ಜನರ ಸಂಖ್ಯೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ಹೇಳಿದರು.

ಬಡವರಿಗೆ ಸಹಾಯ ಮಾಡುವುದು ಸರ್ಕಾರದ ಮೊದಲ ಉದ್ದೇಶ. 2014ರಲ್ಲಿ ಅಧಿಕಾರಕ್ಕೆ ಬಂದಾಗ ನಂತರ ಬಹಳಷ್ಟು ಬದಲಾವಣೆಗಳನ್ನು ತರಲಾಗಿದೆ. ಆಧಾರ್‌ಗೆ ಪಡಿತರ ಲಿಂಕ್ ಮೂಲಕ ನಿಜವಾದ ಫಲಾನುಭವಿಗಳನ್ನು ಗುರುತಿಸಲಾಗಿದೆ. ಯೋಜನೆಯ ಮೂಲಕ ಅನೇಕ ಕುಟುಂಬಗಳಲ್ಲಿ ಪಡಿತರ ಸಮಸ್ಯೆಯಾಗಿದೆ ಎಂದು ಗರಿಬ್ ಕಲ್ಯಾಣ್ ಹೇಳಿದರು.

ಈ ಯೋಜನೆಯ ಮೂಲಕ ಕೇಂದ್ರ ಸರ್ಕಾರವು ಪ್ರತಿ ಫಲಾನುಭವಿಗೆ 5 ಕೆಜಿ ದರದಲ್ಲಿ ಆಹಾರ ಧಾನ್ಯಗಳನ್ನು ನೀಡುತ್ತಿದೆ. ಕೋವಿಡ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಈ ಯೋಜನೆಯ ಮೂಲಕ ಅನೇಕ ಜನರು ಪ್ರಯೋಜನ ಪಡೆದಿದ್ದಾರೆ ಎಂದು ವಿವರಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರ ವರ್ಚುಯಲ್‌ ಸಭೆಯಲ್ಲಿ ಗುಜರಾತ್‌ ಮುಖ್ಯಮಂತ್ರಿ ವಿಜಯ್ ರೂಪಾನಿ ಭಾಗವಹಿಸಿದ್ದರು.

For All Latest Updates

ABOUT THE AUTHOR

...view details