ಅಮೃತಸರ(ಪಂಜಾಬ್):ವಿಡಿಯೋ ಕಾನ್ಫರೆನ್ಸ್ ಮೂಲಕ ಜಲಿಯನ್ ವಾಲಾಬಾಗ್ ನವೀಕರಿಸಿದ ಸ್ಮಾರಕವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ. ಈ ವೇಳೆ ಮಾತನಾಡಿದ ಪ್ರಧಾನಿ, ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಸ್ಥಳವಲ್ಲ, ಬದಲಿಗೆ ಇಡೀ ವಿಶ್ವಕ್ಕೆ ಸ್ಫೂರ್ತಿಯ ಸ್ಮಾರಕ ಎಂದು ಹೇಳಿದರು.
ಪಂಜಾಬ್ ಯುವಜನರ ಗುಣಗಾನ ಮಾಡಿದ ನಮೋ
ಪಂಜಾಬ್ನಲ್ಲಿ ಧೈರ್ಯ, ಶೌರ್ಯ ಹೊಂದಿರುವ ಜನರು ಹೆಚ್ಚು. ಹಿರಿಯರು ಹಾಕಿಕೊಟ್ಟ ಮಾರ್ಗ ಅನುಸರಿಸುವ ಪಂಜಾಬಿನ ಯುವ ಜನತೆ, ಭಾರತ ಮಾತೆಯ ಮೇಲೆ ವಕ್ರದೃಷ್ಟಿ ಬೀರುವವರ ಎದುರಿಗೆ ಬಂಡೆಗಲ್ಲಿನಂತೆ ನಿಲ್ಲುತ್ತಾರೆಂದು ಪಂಜಾಬ್ ಯುವಜನತೆಯ ಗುಣಗಾನ ಮಾಡಿದ್ದಾರೆ.
ಚಂದ್ರಶೇಖರ್ ಅಜಾದ್ಗೆ ಸ್ಮಾರಕ ಸಮರ್ಪಣೆ
ಜಲಿಯನ್ ವಾಲಾಬಾಗ್ ಸ್ಮಾರಕವನ್ನು ಸ್ವಾತಂತ್ರ್ಯ ಹೋರಾಟಗಾರ ಚಂದ್ರಶೇಖರ್ ಅಜಾದ್ಗೆ ಸಮರ್ಪಿಸಲಾಗಿದೆ. ಇನ್ನೂ ಹಲವಾರು ಸ್ಮಾರಕಗಳ ನವೀಕರಣ ಪ್ರಗತಿಯಲ್ಲಿದ್ದು, ಭಾರತದ ಮೊದಲ ಸಂವಾದಾತ್ಮಕ ಗ್ಯಾಲರಿಯನ್ನು ಉತ್ತರಪ್ರದೇಶದ ಅಲಹಾಬಾದ್ನಲ್ಲಿ ನಿರ್ಮಿಸಲಾಗುತ್ತಿದೆ ಎಂದರು.
ಇದೇ ವೇಳೆ ಭಾರತದ ಇತಿಹಾಸವನ್ನ ಬರುವ ಪೀಳಿಗೆಗೆ ತಿಳಿಸುವ ಅಗತ್ಯವಿದೆ. ನಮ್ಮ ಪರಂಪರೆಯನ್ನ ಉಳಿಸಬೇಕಾಗಿದೆ ಎಂದರು. ಜಲಿಯನ್ ವಾಲಾಬಾಗ್ ಹತ್ಯಾಕಾಂಡದಲ್ಲಿ ಅನೇಕರು ಬಲಿಯಾಗಿದ್ದು, ಮುಗ್ಧ ಬಾಲಕರು, ಸಹೋದರರು, ಸಹೋದರಿಯರ ಕನಸು ಈಗಲೂ ಇಲ್ಲಿನ ಗೋಡೆಗಳಲ್ಲಿ ನಾಟಿರುವ ಬುಲೆಟ್ಗಳ ಮೇಲೆ ಕಾಣುತ್ತೇವೆ ಎಂದರು.